ಇವರು ಯಾರು ಬಲ್ಲಿರೇನು..? ಸೈಡ್ ಆಂಗಲ್‌ನಲ್ಲಿ ಯಶ್‌ಗೆ ಹೋಲುವ ನಟನ ಗುರುತು ಹಿಡಿಯ ಬಲ್ಲಿರೇ?
ಈಗಿನ ಫೇಮಸ್ ಹೀರೋಗಳ ಹಳೆಯ ಫೋಟೋ ನೋಡಿದ್ರೆ ಅಷ್ಟು ಸುಲಭವಾಗಿ ಗೊತ್ತೆ ಆಗುವುದಿಲ್ಲ. ಇದು ಅವರೇನಾ..? ನಿಜಕ್ಕೂ ಅವರೇನಾ ಎಂಬ ಅನುಮಾನ ಮೂಡದೆ ಇರುವುದಿಲ್ಲ. ಆ ಅನುಮಾನ ಮೂಡಿಸುವ ಫೋಟೋಗಳನ್ನೇ ತಿರುವಿ ತಿರುವಿ ಹಾಕಿರ್ತೀವಿ. ಹೆಚ್ಚಾಗಿ ನೋಡಿರ್ತೀವಿ. ಒಪ್ಪಿಗೆ ಆಗದೆ ಇದ್ದರೂ, ಮುಖದಲ್ಲೊಂದು ಮುಗುಳ್ನಗೆ ಬೀರಿ, ವಾವ್ಹ್ ಇವರು ಅವ್ರೇ.. ಆದರೆ, ಆಗ ಇನ್ನು ಚೆಂದ ಇದಾರೆ ಅಲ್ವಾ ಅಂತ ಸುಮ್ನೆ ಆಗ್ತೀವಿ.
ಅಬ್ಬಬ್ಬಾ ಒಂದು ಫೋಟೋಗೆ ಇಷ್ಟೊಂದು ವಿವರಣೆ ಕೊಟ್ಟಿದ್ದೀವಿ ಅಂದ್ರೆ ಅದ್ಯಾರು ಇರಬಹುದು ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತೆ. ಅಲ್ಲದೆ ಇವರನ್ನು ನೋಡಿದರೆ ಕನ್ನಡ ಸ್ಟಾರ್ ನಟನನ್ನು ನೋಡಿದ ಹಾಗೆ ಅನಿಸುತ್ತೆ ಅಲ್ಲವೇ? ಹಾಗಿದ್ದರೆ, ಈ ನಟ ಯಾರು? ತಿಳಿಯಲು ಮುಂದೆ ಓದಿ.

ಹಳೇ ಫೋಟೋಗಳು ವೈರಲ್
ಅಂದ್ಹಾಗೆ ಧನುಶ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ಟೀವ್ ಆಗಿಲ್ಲದೆ ಇದ್ದರು, ಫ್ಯಾನ್ ಫಾಲೋವರ್ಸ್ ಗೇನು ಕಡಿಮೆ ಇಲ್ಲ. 98 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಹಾಗೊಮ್ಮೆ ಹೀಗೊಮ್ಮೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದರಲ್ಲೂ ಹಳೆಯ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋದಲ್ಲಂತು ಥೇಟ್ ಚಾಕಲೇಟ್ ಬಾಯ್ ಥರ ಕಾಣಿಸ್ತಾ ಇದ್ದಾರೆ. ಮುದ್ದು ಮುದ್ದಾಗಿ ಕಾಣುವ ಧನುಶ್ ಗೆ ಹುಡುಗಿಯರಂತು ಹಾರ್ಟ್ ನೀಡೋದು ಗ್ಯಾರಂಟಿ. ಅಷ್ಟಕ್ಕೂ ಸೈಡ್ ಆಂಗಲ್‌ನಲ್ಲಿ ಇವರು ನೋಡೋಕೆ ಯಶ್ ಅಂತೆಯೇ ಕಾಣುವುದಿಲ್ಲವೇ? ಇನ್ನೂ ಯಾರು ಅಂತ ಗೊತ್ತಾಗಿಲ್ಲವೇ?
ಯಾರೀ ಧನುಷ್?
ಧನುಷ್ ಅಂದ್ರೆ ಅವರ ಆಪ್ತರಿಗಷ್ಟೇ ಗೊತ್ತಾಗೋದು. ಅದೇ ಕಂಠಿ ಅಂದರೆ, ಇಡೀ ಕಿರುತೆರೆ ವೀಕ್ಷಕರು ಒಮ್ಮೆ ಜೈ ಎತ್ತುತ್ತಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿ ಅಲಿಯಾಸ್ ಧನುಷ್ ಹಳೇ ಫೋಟೊಗಳಿವು. ಇದರಲ್ಲೊಂದು ಫೋಟೋ ಯಂಗ್ ಯಶ್ ಅನ್ನು ನೆನಪಿಸುತ್ತೆ. ಅಂದ್ಹಾಗೆ, ಧನುಶ್‌ಗೆ ಫ್ರೆಂಡ್ಸ್ ಜಾಸ್ತಿ. ಸೀರಿಯಲ್‌ಗೆ ಬರುವುದಕ್ಕೂ ಮುನ್ನ ಫ್ರೆಂಡ್ಸ್ ತುಂಬಾ ಜನ ಇದ್ದಾರೆ. ಟೀಂ ಟೀಂ ಜೊತೆಗೆ ಟ್ರಿಪ್ ಹೋಗ್ತಾ ಇದ್ದಂತವರು. ಅದರಲ್ಲೂ ಬೆಟ್ಟ ಗುಡ್ಡಗಾಡು ಪ್ರದೇಶಗಳಿಗೆ ಸುತ್ತಾಡುತ್ತಿದ್ದವರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಧಾರಾವಾಹಿಯಲ್ಲೂ ಗೆಳೆಯರಿಗೇನು ಕಡಿಮೆ ಇಲ್ಲ.

ಸಿನಿಮಾಗಳಲ್ಲೂ ನಟಿಸಿದ್ದ ಧನುಶ್
ಕಂಠಿ ಅಲಿಯಾಸ್ ಧನುಶ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಬರುವುದಕ್ಕೂ ಮುನ್ನ ಮಾಡೆಲ್ ಆಗಿ ಗುರುತಿಸಿಕೊಂಡವರು. ಅಷ್ಟೇ ಅಲ್ಲ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಮನಸೆಲ್ಲಾ ನೀನೆ', 'ನಗು', 'ಅನಿರೀಕ್ಷಿತ' ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಫೋಟೋಗಳನ್ನು ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿ ಪಾತ್ರದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಧನುಶ್‌ಗಂತು ಫ್ಯಾನ್ ಫಾಲೋವರ್ಸ್ ಕೂಡ ಹೆಚ್ಚಾಗಿದ್ದಾರೆ.
ಧನುಶ್ ಹೆಸರಲ್ಲಿ ಫ್ಯಾನ್ ಪೇಜ್
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಂಗಾರಮ್ಮನ ಮಗನಾಗಿ ಕಾಣಿಸಿಕೊಂಡಿರುವ ಕಂಠಿ ಅದೆಷ್ಟೋ ಹೆಣ್ಣು ಮಕ್ಕಳ ಹಾರ್ಟ್ ಕದ್ದಿದ್ದಾರೆ. ಆದರೆ, ಧಾರಾವಾಹಿಯಲ್ಲಿ ಮಾತ್ರ ಸ್ನೇಹಾಳ ಮನಸ್ಸನ್ನು ಕದ್ದಿದ್ದಾರೆ. ಓದು, ಬರಹ ಬಾರದೆ ಇರುವಂತ ಬಡ್ಡಿ ವಸೂಲಿ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಧನುಶ್. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಾಗಿನಿಂದ ಅಬ್ಬಬ್ಬಾ ಧನುಶ್‌ಗೆ ಪ್ಯಾನ್ ಪೇಜ್‌ಗಳು ಸಿಕ್ಕಾಪಟ್ಟೆ ಹುಟ್ಟಿಕೊಂಡಿವೆ. ಸ್ನೇಹಾ-ಕಂಠಿ ಹೆಸರಲ್ಲಿ ಅವರನ್ನು ಪ್ರಮೋಟ್ ಮಾಡ್ತಿವೆ. ಅಷ್ಟೇ ಅಲ್ಲ ಧಾರಾವಾಹಿಯ ಈ ಫೇಮಸ್ ಜೋಡಿ ಈಗ ಜಾಹೀರಾತುಗಳಲ್ಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿವೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ಎಲ್ಲಾ ಸತ್ಯ ಗೊತ್ತಾಗುವ ಸಮಯ ಬಂದಿದೆ. ಕಂಠಿಯ ಆ ಮುಗ್ಧ ಅಭಿನಯಕ್ಕೇ ಮಂದಿ ಫಿದಾ ಆಗಿದ್ದಾರೆ.


Click it and Unblock the Notifications











