»   » ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?

ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Posted By:
Subscribe to Filmibeat Kannada

'ಡ್ರಾಮಾ ಜ್ಯೂನಿಯರ್ಸ್'...ಕನ್ನಡ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ ಶೋ. ಈ ಕಾರ್ಯಕ್ರಮ ಸೂಪರ್ ಸಕ್ಸಸ್ ಆಗಲು ಯಾವುದೇ 'ಸ್ಟಾರ್'ಗಳು ಕಾರಣ ಅಲ್ಲ. ''ಸ್ಟಾರ್'ಗಳಿಂದ ಟಿ.ಆರ್.ಪಿ ಸಾಧ್ಯ'' ಎಂಬ ಸಿದ್ಧ ಸೂತ್ರವನ್ನ ಸೈಡ್ ಗೆ ತಳ್ಳಿ, ಪುಟಾಣಿ ಮಕ್ಕಳನ್ನ ಇಂದು 'ಕರ್ನಾಟಕದ ಸೂಪರ್ ಸ್ಟಾರ್ಸ್' ಮಾಡಿರುವ ಶೋ ಇದು.

ಮಕ್ಕಳ ಚಿಲಿಪಿಲಿ, ತುಂಟಾಟದ ನಡುವೆ ಅವರಲ್ಲಿ ಅಡಗಿರುವ ಅಗಾಧ ಪ್ರತಿಭೆಯನ್ನ ಹೊರತಂದ ಕಾರ್ಯಕ್ರಮ ಈ 'ಡ್ರಾಮಾ ಜ್ಯೂನಿಯರ್ಸ್'. [ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

ಶನಿವಾರ-ಭಾನುವಾರ ರಾತ್ರಿ 9 ಗಂಟೆ ಆಯ್ತು ಅಂದ್ರೆ ಎಲ್ಲರೂ, ಜೀ ಕನ್ನಡ ಟ್ಯೂನ್ ಮಾಡಲು ಶುರು ಮಾಡಿದ್ದು ಇದೇ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಿಂದ. ಕೋಟ್ಯಾಂತರ ಕನ್ನಡ ವೀಕ್ಷಕರ ಮನಗೆದ್ದಿರುವ 'ಡ್ರಾಮಾ ಜ್ಯೂನಿಯರ್ಸ್' ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಮುಂದೆ ಓದಿ....

ನಿನ್ನೆ ನಡೆಯಿತು 'ಡ್ರಾಮಾ ಜ್ಯೂನಿಯರ್ಸ್' ಗ್ರ್ಯಾಂಡ್ ಫಿನಾಲೆ

ಟಿ.ಆರ್.ಪಿ ರೇಟಿಂಗ್ ನಲ್ಲಿ ಸದಾ ಮುಂಚೂಣಿಯಲ್ಲಿದ್ದ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಿನ್ನೆ (ಸೆಪ್ಟೆಂಬರ್ 25) ನಡೆದಿದೆ. ['ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ]

'ಡ್ರಾಮಾ ಜ್ಯೂನಿಯರ್ಸ್' ಗ್ರ್ಯಾಂಡ್ ಫಿನಾಲೆ ಎಲ್ಲಿ?

ಗದಗ ಜಿಲ್ಲೆಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ 'ಡ್ರಾಮಾ ಜ್ಯೂನಿಯರ್ಸ್' ವಿನ್ನರ್ ಘೋಷಣೆ ಮಾಡಲಾಯ್ತು. [ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?]

'ಡ್ರಾಮಾ ಜ್ಯೂನಿಯರ್ಸ್' ವಿನ್ನರ್ ಆದ ಪುಟಾಣಿ ಯಾರು?

'ಡ್ರಾಮಾ ಜ್ಯೂನಿಯರ್ಸ್' ವಿನ್ನರ್ ಆದ ಪುಟಾಣಿ ಬೇರೆ ಯಾರೂ ಅಲ್ಲ, ಅದೇ ಗದಗ ಜಿಲ್ಲೆಯ ಪುಟ್ಟರಾಜು ಹೂಗಾರ್. ['ಡ್ರಾಮಾ'ದಲ್ಲಿ ಮಾತ್ರ ಅಲ್ಲ, ಓದಿನಲ್ಲೂ ಪುಟ್ಟರಾಜು ನಂ.1..!]

ಚಿತ್ರಾಲಿ ಕೂಡ ವಿನ್ನರ್ ಕಣ್ರೀ.!

ಮಂಗಳೂರು ಮೂಲದ ಚಿತ್ರಾಲಿ ಕೂಡ 'ಡ್ರಾಮಾ ಜ್ಯೂನಿಯರ್ಸ್' ವಿನ್ನರ್ ಆಗಿದ್ದಾಳೆ. ['ಡ್ರಾಮಾ' ಕ್ವೀನ್, 'ಬಾರ್ಬಿ ಡಾಲ್' ಚಿತ್ರಾಲಿ ಬಗ್ಗೆ ನಿಮಗೆಷ್ಟು ಗೊತ್ತು?]

ಇಬ್ಬರಿಗೆ ವಿನ್ನರ್ ಪಟ್ಟ.!

ನಟನೆಯಲ್ಲಿ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಪುಟಾಣಿಗಳು ಒಬ್ಬರಿಗಿಂತ ಒಬ್ಬರು. ಹೀಗಾಗಿ ಪುಟ್ಟರಾಜು ಮತ್ತು ಚಿತ್ರಾಲಿ ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ವಿನ್ನರ್ ಗೆ ಬಹುಮಾನ ಎಷ್ಟು?

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ವಿನ್ನರ್ ಆಗಿರುವ ಪುಟ್ಟರಾಜು ಮತ್ತು ಚಿತ್ರಾಲಿಗೆ ತಲಾ 4 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

ಎರಡನೇ ಸ್ಥಾನ ಯಾರಿಗೆ?

ಮೈಸೂರಿನ ಹುಡುಗ ಮಹೇಂದ್ರ ಪ್ರಸಾದ್ ಮೊದಲನೇ ರನ್ನರ್ ಅಪ್ (ಎರಡನೇ ಸ್ಥಾನ) ಆಗಿದ್ದಾನೆ. ['ಡ್ರಾಮಾ ಕಿಂಗ್' ಮಹೇಂದ್ರ ಪ್ರಸಾದ್ ಬಗ್ಗೆ ನಿಮಗೆಷ್ಟು ಗೊತ್ತು?]

ಎರಡನೇ ಸ್ಥಾನಕ್ಕೆ ಬಹುಮಾನ ಎಷ್ಟು?

ಎರಡನೇ ಸ್ಥಾನ ಪಡೆದಿರುವ ಮಹೇಂದ್ರ ಪ್ರಸಾದ್ ಗೆ 2 ಲಕ್ಷ ರೂಪಾಯಿ ನಗದು ಬಹುಮಾನ ದೊರಕಿದೆ.

ಮೂರನೇ ಸ್ಥಾನ ಯಾರಿಗೆ?

'ತಾಯಿ' ಹಾಗೂ ಅಳುಮುಂಜಿ ಪಾತ್ರಗಳಿಗೆ ಹೇಳಿಮಾಡಿಸಿದಂತಿದ್ದ ಅಮೋಘ ಮೂರನೇ ಸ್ಥಾನ (ಎರಡನೇ ರನ್ನರ್ ಅಪ್) ಪಡೆದಿದ್ದಾಳೆ.

ಮೂರನೇ ಸ್ಥಾನಕ್ಕೆ ಬಹುಮಾನ ಎಷ್ಟು?

ಎರಡನೇ ರನ್ನರ್ ಅಪ್ ಆಗಿರುವ ಅಮೋಘಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.

ಫೈನಲ್ ನಲ್ಲಿ ಯಾರ್ಯಾರು ಇದ್ದರು?

ಅಚಿಂತ್ಯ, ತುಷಾರ್, ಪುಟ್ಟರಾಜು, ಚಿತ್ರಾಲಿ, ಮಹೇಂದ್ರ, ರೇವತಿ, ತೇಜಸ್ವಿನಿ ಹಾಗೂ ಅಮೋಘ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಿದ್ದರು.

ಬಾಕಿ ಸ್ಪರ್ಧಿಗಳ ಕಥೆ

ಮೂಲಗಳ ಪ್ರಕಾರ ಅಚಿಂತ್ಯ, ತುಷಾರ್, ರೇವತಿ ಹಾಗೂ ತೇಜಸ್ವಿನಿಗೆ ಸ್ಪೆಷಲ್ ಅವಾರ್ಡ್ ಗಳನ್ನ ನೀಡಲಾಗಿದೆ. ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ತೀರ್ಪುಗಾರರು....

ಟಿ.ಎನ್.ಸೀತಾರಾಮ್, ನಟಿ ಲಕ್ಷ್ಮಿ ಹಾಗೂ ನಟ ವಿಜಯ್ ರಾಘವೇಂದ್ರ ಎಂದಿನಂತೆ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರ ಸ್ಥಾನದಲ್ಲಿ ಇದ್ದರು. ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿದೆ.

ವಿಶೇಷ ಅತಿಥಿಗಳು...

ನಟಿ ಪ್ರಿಯಾಮಣಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ 'ಡ್ರಾಮಾ ಜ್ಯೂನಿಯರ್ಸ್' ಗ್ರ್ಯಾಂಡ್ ಫಿನಾಲೆ ಸಂಚಿಕೆಗೆ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು.

ಪ್ರಸಾರ ಯಾವಾಗ?

ಮೂಲಗಳ ಪ್ರಕಾರ, ಮುಂದಿನ ಭಾನುವಾರ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ.

English summary
Puttaraju from Gadag and Chitrali from Mangalore has become winners of Zee Kannada's Popular show 'Drama Juniors'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada