twitter
    For Quick Alerts
    ALLOW NOTIFICATIONS  
    For Daily Alerts

    Puttakkana Makkalu Kanti: 'ಪುಟ್ಟಕ್ಕನ ಮಕ್ಕಳು', 'ಕಂಠಿ' ಪಾತ್ರಧಾರಿ ಧನುಶ್‌ ಹಿನ್ನೆಲೆ ಏನು?

    By ಪೂರ್ವ
    |

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಅಪಾರ​ ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಧಾರಾವಾಹಿಯ ಎಲ್ಲ ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಿದೆ. ಅದರಲ್ಲಿಯೂ ಕಂಠಿ ಪಾತ್ರ ಹೆಚ್ಚಾಗಿ ಗಮನ ಸೆಳೆಯುತ್ತಿದೆ.

    ಪುಟ್ಟಕ್ಕನ ಮಕ್ಕಳು ಧಾರವಾಹಿ ಹೀರೋ ಕಂಠಿ ಪಾತ್ರಧಾರಿಯ ಹೆಸರು ಧನುಷ್. ಧಾರಾವಾಹಿಯಲ್ಲಿನ ನಟನೆ ಮೂಲಕ ಈಗವರು ಮಾತಾಗಿದ್ದಾರೆ. ನಟನೆ ಮೂಲಕ ಗಮನ ಸೆಳೆದಿರುವ ಧನುಷ್ ಗೆ ಈ ಕೆಲವು ಸಿನಿಮಾ ಆಫರ್ ಗಳೂ ಬರುತ್ತಿವೆಯಂತೆ. ಹೀಗಾಗಿ ಇವರು ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ಕಂಡುಬಂದರೂ ಅಚ್ಚರಿಯಿಲ್ಲ.

    Sathya Serial: ಸತ್ಯ ಲವ್ ಬ್ರೇಕಪ್, ಕಾರ್ತಿಕ್‌ಗೆ ಸತ್ಯ ಗೊತ್ತಾಗುವ ಟೈಮ್ ಇದು!Sathya Serial: ಸತ್ಯ ಲವ್ ಬ್ರೇಕಪ್, ಕಾರ್ತಿಕ್‌ಗೆ ಸತ್ಯ ಗೊತ್ತಾಗುವ ಟೈಮ್ ಇದು!

    ಈ ಹೊಸ ಪ್ರತಿಭೆ ಧನುಷ್‌ ಎನ್‌.ಎಸ್‌. ಸಿವಿಲ್‌ ಎಂಜಿನಿಯರಿಂಗ್‌ ಪದವಿಧರ. ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕಿದರು. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ಧನುಷ್‌, 'ಅನಿರೀಕ್ಷಿತ', '18+2' ಕಿರುಚಿತ್ರಗಳನ್ನು, 'ನನ್ನ ನಗು' ಹಾಡಿನ ಆಲ್ಬಂ ಮಾಡಿದ್ದರು.

    Puuttakkana Makkalu Hero Dhanush Life Style

    ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡದ್ದ ಧನುಶ್ ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಆ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ.

    Muddulakshmi : ದೃಷ್ಟಿ ಬಯಸಿದ್ದು, ಅಮ್ಮಮ್ಮ ತೋರಿಸಿದ್ದು ಶಿವುನನ್ನೇ: ಮುಂದೇನಾಯ್ತು? Muddulakshmi : ದೃಷ್ಟಿ ಬಯಸಿದ್ದು, ಅಮ್ಮಮ್ಮ ತೋರಿಸಿದ್ದು ಶಿವುನನ್ನೇ: ಮುಂದೇನಾಯ್ತು?

    ಕೋಲಾರ ಜಿಲ್ಲೆಯ ಸಂತೆಹಳ್ಳಿ ಧನುಷ್‌ ಹುಟ್ಟೂರು. ತಂದೆ ಉದ್ಯಮಿ, ರಾಜಕೀಯ ಪಕ್ಷವೊಂದರ ಜಿಲ್ಲಾ ಮಟ್ಟದ ಪದಾಧಿಕಾರಿ. ಎಂಜಿನಿಯರಿಂಗ್ ಮುಗಿಸಿದ್ದ ಧನುಶ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆಡಿಷನ್‌ನಲ್ಲಿ ಭಾಗವಹಿಸಿ ಧಾರಾವಾಹಿಗೆ ಆಯ್ಕೆ ಆಗಿ, ಈಗ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಬ್ಬರಾಗಿದ್ದಾರೆ.

    ಕೋಲಾರ ಭಾಗದ ಭಾಷೆಗೂ ಮಂಡ್ಯ ಭಾಷೆಗೂ ಸಾಮ್ಯತೆ ಇರುವುದರಿಂದ ಈ ಧಾರಾವಾಹಿಯಲ್ಲಿ ಮಂಡ್ಯದ ಭಾಷೆ ಬಳಸುವುದು ಧನುಷ್‌ ಅವರಿಗೆ ಸುಲಭವಾಯಿತಂತೆ. ಧನುಷ್ ಈ ಮೊದಲು ಸಾಕಷ್ಟು ಭಾರಿ ಆಡಿಷನ್ ನೀಡಿದ್ದರೂ ಅದೃಷ್ಟ ಕೈಹಿಡಿದಿರಲಿಲ್ಲ. ಅದೃಷ್ಟವಶಾತ್ ಹಾಗೂ ಪ್ರತಿಭೆಯ ಕಾರಣಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಆಯ್ಕೆಯಾದರು. ಇದು ಇವರ ಮೊದಲ ಧಾರಾವಾಹಿಯ ಆದರೂ ಅಚ್ಚುಕಟ್ಟಾಗಿ ನಟನೆ ಮಾಡುತ್ತಿದ್ದಾರೆ.

    'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ ನ ಮಗ ಶ್ರೀಕಂಠನ ಪಾತ್ರದಲ್ಲಿ ಧನುಶ್ ನಟಿಸುತ್ತಿದ್ದಾರೆ. ಶ್ರೀಕಂಠಿಯದ್ದು ರಗಡ್ ಆಗಿರುವ ಪಾತ್ರ. ಕಂಠಿ ಪಾತ್ರಧಾರಿ ನಟನೆ ಬಹಳ ಜನಕ್ಕೆ ಇಷ್ಟ ಆಗಿದೆ. ಇವರ ಲುಕ್ ಗೆ ಹೆಣ್ಣು ಮಕ್ಕಳಂತೂ ಪಿಧಾ ಆಗಿದ್ದಾರೆ. ''ನಾನು ನನ್ನ ಬಗ್ಗೆ ತಾಳ್ಮೆ ಕಳೆದುಕೊಂಡರೂ, ಆರೂರು ಜಗದೀಶ್ ಅವರು ನನ್ನ ಬಗ್ಗೆ ತಾಳ್ಮೆ, ನಂಬಿಕೆ ಕಳೆದುಕೊಂಡಿಲ್ಲ ಎಂದು ತಮ್ಮ ಧಾರಾವಾಹಿ ನಿರ್ದೇಶಕರನ್ನು ಹೊಗಳಿದ್ದಾರೆ ಧನುಶ್. ತಮಗೆ ಅವಕಾಶ ಕೊಟ್ಟ ನಿರ್ದೇಶಕ ಆರೂರು ಜಗದೀಶ್‌ ಬಗ್ಗೆ ಅಪಾರ ಗೌರವ ಧನುಶ್‌ಗೆ.

    English summary
    Puttakkana Makkalu Hero Dhanush Life style. How is he in real life.
    Friday, March 25, 2022, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X