'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು 4' ವಿನ್ನರ್ ಮೆಬಿನಾ ಮೈಕೆಲ್ ನಿಧನ

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್-4 ರಿಯಾಲಿಟಿ ಶೋನ ವಿಜೇತೆ ಮೆಬಿನಾ ಮೈಕೆಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೇ 26ರಂದು ಚನ್ನರಾಯಪಟ್ಟಣದ ಬೆಳ್ಳೂರು ಕ್ರಾಸ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೆಬಿನಾ ಇದ್ದ ಕಾರು ಮತ್ತು ಟ್ರಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಮೆಬಿನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ತೀವ್ರವಾಗಿ ಗಾಯಗೊಂಡ ಇಬ್ಬರನ್ನು ನಾಗಮಂಡಲ ತಾಲೂಕಿನ ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೇ 26ರಂದು ಮೆಬಿನಾ ಸೋಮವಾರಪೇಟೆ ತಾಲೂಕಿನ ಐಗೂರಿನಿಂದ ಬೆಂಗಳೂರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ.

Pyate Hudgir Halli Life Fame Mebina Michael Death In Accident

ಮೆಬಿನಾ ನಿಧನದ ಸುದ್ದಿಯನ್ನು ಸ್ಟಾರ್ ಸುವರ್ಣವಾಹಿನಿ ಖಚಿತಪಡಿಸಿ, ಸಂತಾಪದ ಪೋಸ್ಟ್ ಮಾಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮೆಬಿನಾ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಗೆದ್ದದ್ದರು. 2018ರಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್-4ನಲ್ಲಿ ಮೆಬಿನಾ ವಿನ್ನರ್ ಆಗಿ ಹೊರಹೊಮ್ಮಿದ್ದರು.
Pyate Hudgir Halli Life Fame Mebina Michael Death In Accident

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್-4 ಅನ್ನು ಈಗ ಮತ್ತೆ ಲಾಕ್ ಡೌನ್ ಕಾರಣ ಮರು ಪ್ರಸಾರ ಮಾಡಲಾಗುತ್ತಿದೆ. ಮೆಬಿನಾ ವಿನ್ನರ್ ಆಗಿ 7 ಲಕ್ಷ ಮುಡಿಗೇರಿಸಿಕೊಂಡಿದ್ದರು. ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮ ಇದಾಗಿದ್ದು ಕಿರುತೆರೆಯ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು.

More from Filmibeat

English summary
Pyate Hudgir Halli Life season-4 reality show winner Mebina michael death in road accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X