2500 ಸೀರೆಗಳಿದ್ದರೂ ಕಡಿಮೆ ಎನ್ನುವ ಈ ನಟಿ ಯಾರು ಗೊತ್ತಾ..?
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಸ್ವಾತಿ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನಿರಿಕ್ಷಿತವಾಗಿ ಬಣ್ಣದ ಲೋಕಕ್ಕೆ ಬಂದ ಸ್ವಾತಿ ಅವರು ಈಗ ಎಲ್ಲಾ ವಾಹಿನಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಒಂದೊಂದು ಧಾರಾವಾಹಿಯಲ್ಲೂ ಬೇರೆ ಬೇರೆ ಪಾತ್ರಗಳೇ ಮಾಡಿದರೂ, ನೆಗೆಟಿವ್ ರೋಲ್ ಗಟ್ಟಿಯಾಗಿ ಉಳಿದಿದೆ.
ಇನ್ನು ನಟಿ ಸ್ವಾತಿ ಅವರು ಹೆಚ್ಚು ತಾಯಿ ಪಾತ್ರಗಳನ್ನೇ ಮಾಡಿದ್ದು, ಇವರ ಪತಿಯೂ ಆಗಾಗ ಮಮ್ಮಿ ಮಮ್ಮಿ ಎಂದು ರೇಗಿಸುತ್ತಾರಂತೆ. ಹೆಚ್ಚಾಗಿ ವಿಲನ್ ಆಗಿ ಪೋಷಕ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ ನಟಿ ಸ್ವಾತಿ ಅವರ ರಿಯಲ್ ಲೈಫ್ ಬಗ್ಗೆ ನೋಡೋಣ ಬನ್ನಿ..

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶುಭ ವಿವಾಹ' ಧಾರಾವಾಹಿಯಲ್ಲಿ ಊರ್ಮಿಳಾ ಆಗಿ ನಟಿಸುವ ಮೂಲಕ ಸ್ವಾತಿ ಧಾರಾವಾಹಿ ಪಯಣ ಆರಂಭವಾಯಿತು. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಮಂಡೋದರಿಯಾಗಿ ಕಾಣಿಸಿಕೊಂಡರು. 'ಸರ್ವ ಮಂಗಳ ಮಾಂಗಲ್ಯೇ'ಯಲ್ಲಿ ನಾಯಕ ಶಂಕರನ ಚಿಕ್ಕಮ್ಮ ಭೈರವಿ ಆಗಿ ಅಭಿನಯಿಸಿ ಮೋಡಿ ಮಾಡಿದ್ದ ಸ್ವಾತಿ ಮುಂದೆ ನಟಿಸಿದ್ದು 'ರಂಗನಾಯಕಿ'ಯಲ್ಲಿ.
'ಗಟ್ಟಿಮೇಳ' ಧಾರಾವಾಹಿಯಲ್ಲಿ ಸುಹಾಸಿನಿ ಆಗಿ ಕೆಲ ಸಮಯ ನಟಿಸಿದರು. ಸ್ವಾತಿ ಕೇವಲ ನಟಿಯಾಗಿ ಮಾತ್ರವಲ್ಲದೇ ಮಾಡೆಲ್ ಆಗಿಯೂ ಗುರುತಿಸಿಕೊಂಡ ಪ್ರತಿಭೆ. ಸನ್ ಸಿಲ್ಕ್ ನಡೆಸಿದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಕರ್ನಾಟಕ ಕಿರೀಟ ಪಡೆದುಕೊಂಡಿರುವ ಸ್ವಾತಿ ಇದರ ಜೊತೆಗೆ ಐ ಬ್ಯೂಟಿಯ ಜೊತೆಗೆ ಫೋಟೋಜೆನಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು.
ಇತ್ತೀಚೆಗೆ ನಾಗಾರ್ಜುನ ರವಿ ಅವರ ಜೊತೆಗೆ ನಟಿ ಸ್ವಾತಿ ಅವರು ಸಪ್ತಪದಿ ತುಳಿದಿದ್ದಾರೆ. ಇನ್ನು ನಟಿ ಸ್ವಾತಿ ಅವರು ನೋಡಲು ಸ್ವಲ್ಪ ದೊಡ್ಡವರಂತೆ ಕಾಣುತ್ತಿದ್ದು, ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲೇ ನಟಿಸುವುದಕ್ಕೆ ಎಲ್ಲರೂ ಈ ಮದುವೆಯನ್ನು ಎರಡನೇ ಮದುವೆ ಎಂದು ಹೇಳುತ್ತಿದ್ದರು. ಆದರೆ, ಸ್ವಾತಿ ಅವರದ್ದು ಚಿಕ್ಕ ವಯಸ್ಸಾಗಿದ್ದರೂ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದು ನನ್ನ ಮೊದಲ ಮದುವೆ ಎಂದು ಈಗಾಗಲೇ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಇದೀಗ ನಟಿ ಸ್ವಾತಿ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಿರುವ 'ರಾಣಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತೆ ನೆಗೆಟಿವ್ ರೋಲ್‌ಗೆ ಬಣ್ಣ ಹಚ್ಚಿರುವ ನಟಿ ಸ್ವಾತಿ ಅವರು ಸೌಧಾಮಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಏಪ್ರಿಲ್ 3ರಿಂದ 'ರಾಣಿ' ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಾರಂಭವಾಗಿದ್ದು, ಪ್ರೇಕ್ಷಕರಿಗೆ ಧಾರಾವಾಹಿ ಹಾಗೂ ಇದರಲ್ಲಿನ ಪಾತ್ರಗಳು ಮೆಚ್ಚುಗೆಯಾಗಿವೆ.
ಇದೆಲ್ಲಾ ಹೊರತು ಪಡಿಸಿ ನಟಿ ಸ್ವಾತಿ ಅವರ ಬಳಿ ಬರೋಬ್ಬರಿ 2500 ಸಾವಿರ ಸೀರೆಗಳು ಇವೆಯಂತೆ. 60 ಜೊತೆ ಚಪ್ಪಲಿಗಳು ಹಾಗೂ 100 ಹ್ಯಾಂಡ್ ಬ್ಯಾಗ್‌ಗಳ ಕಲೆಕ್ಷನ್ ಇದೆ. ಇವನ್ನೆಲ್ಲಾ ನೋಡಿ ಅವರ ಪತಿ ಶಾಕ್ ಕೂಡ ಆಗಿದ್ದರಂತೆ. ಇಷ್ಟೆಲ್ಲಾ ಇದ್ದರೂ ಕೂಡ ಸ್ವಾತಿ ಅವರಿಗೆ ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗಬೇಕೆಂದರೆ, ಬಟ್ಟೆ ಇಲ್ಲ ಎಂದು ಶಾಪಿಂಗ್ ಕೂಡ ಮಾಡುತ್ತಾರೆ. ಇನ್ನು ಇವರ ಪತಿ ಶಾಪಿಂಗ್ ಗೆ ನಾನಂತೂ ಬರೋದಿಲ್ಲ ಎಂದು ಹೇಳಿ ಬಿಟ್ಟಿದ್ದಾರಂತೆ.
ಸ್ವಾತಿ ಮತ್ತು ನಾಗಾರ್ಜುನ ರವಿ ಅವರು ಕಳೆದ 6 ವರ್ಷಗಳಿಂದ ಸ್ನೇಹಿತರಾಗಿದ್ದರಂತೆ. ಎರಡೂ ಮನೆಯಲ್ಲೂ ಇಬ್ಬರಿಗೂ ಮದುವೆ ಮಾಡಲು ಓಡಾಡುವಾಗ, ನೀವಿಬ್ಬರೇ ಏಕೆ ಮದುವೆಯಾಗಬಾರದು ಎಂದು ಎರಡೂ ಮನೆಯಲ್ಲೂ ಹೇಳಿ ಮದುವೆ ಮಾಡಿಸಿಯೇ ಬಿಟ್ಟಿದ್ದಾರೆ. ಹಾಗಾಗಿ ಇದು ಅರೇಂಜ್ಡ್ ಮಾರೇಜ್ ಎನ್ನುತ್ತಾರೆ ನಟಿ ಸ್ವಾತಿ.


Click it and Unblock the Notifications











