'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಆಡಿಷನ್ ನಲ್ಲಿ ಭಾಗವಹಿಸಲು ಮೆಗಾ ಅವಕಾಶ
ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಮತ್ತೆ ಬರ್ತಿದೆ. ಸುರ್ವಣ ವಾಹಿನಿಯ ಬಹುದೊಡ್ಡ ಕಾರ್ಯಕ್ರಮ ಇದಾಗಿದ್ದು, ಟಿವಿ ಪ್ರೇಕ್ಷಕರನ್ನ ರಂಜಿಸಲು ಸಿದ್ದವಾಗುತ್ತಿದೆ.
ಸಿಟಿ ಹುಡುಗಿಯರು ಹಳ್ಳಿಗೆ ಹೋಗಿ, ಹಳ್ಳಿ ಲೈಫ್ ಜೀವನ ಮಾಡುವ ರಿಯಾಲಿಟಿ ಶೋ ಇದು. ನಗರ ಪ್ರದೇಶದಲ್ಲೇ ಹುಟ್ಟಿ ಬೆಳದು, ಹಳ್ಳಿಯ ಜೀವನದ ಅರಿವು ಇಲ್ಲದ ಯುವತಿಯರು ಮೂರುವರೆ ತಿಂಗಳ ಕಾಲ, ಹಳ್ಳಿ ಜೀವನ ಸೊಬಗಿನ ಅನುಭವ ಪಡೆಯುವುದಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶೀಲರಾಗುವುದೇ ಈ ಕಾರ್ಯಕ್ರಮದ ಸವಾಲು. ವಿಶೇಷವಾದ ಟಾಸ್ಕ್ ಗಳು, ಆಟ-ಪಾಠ, ಹಾಡು, ಡ್ಯಾನ್ಸ್, ಹೀಗೆ ಎಲ್ಲವೂ ಒಳಗೊಂಡಿರುತ್ತೆ.
ಈಗಾಗಲೇ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮ ಈಗ ನಾಲ್ಕನೇ ಸೀಸನ್ ಆರಂಭವಾಗುತ್ತಿದೆ. ಇದಕ್ಕಾಗಿ ಆಡಿಶನ್ ಗೆ ಆಹ್ವಾನ ಮಾಡಲಾಗಿದ್ದು, ನೀವು ಕೂಡ ಭಾಗವಹಿಸುವ ಅವಕಾಶ ಸಿಕ್ಕಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ 18-24 ವರ್ಷದೊಳಗಿನ ಬೆಂಗಳೂರಿನ ಯುವತಿಯರು, ಫೆಬ್ರವರಿ 11 ರಂದು ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಬೆಳಗ್ಗೆ 9ರಿಂದ ನೇರವಾಗಿ ಆಡಿಷನ್ ನಲ್ಲಿ ಪಾಲ್ಗೊಳ್ಳಬಹುದು.
ಆಡಿಷನ್ ನಲ್ಲಿ ಪಾಸ್ ಆದ್ರೆ, ಕಾರ್ಯಕ್ರಮ್ಮಕ್ಕೆ ನೆರವಾಗಿ ಆಯ್ಕೆಯಾಗಬಹುದು. ಸದ್ಯ, ಪ್ರೋಮೋ ಪ್ರಸಾರವಾಗುತ್ತಿದ್ದು, ಸದ್ಯದಲ್ಲೇ ಶೋ ಪ್ರಾರಂಭವಾಗಲಿದೆ. 2015ರಲ್ಲಿ ಕೊನೆಯ ಬಾರಿಗೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಪ್ರಸಾರವಾಗಿತ್ತು.


Click it and Unblock the Notifications











