ಸುದೀಪ್ ಮುಂದೆ ಕಿತ್ತಾಡಿಕೊಂಡ ಇಬ್ಬರು ಚೈತ್ರಾ: ಕಿಚ್ಚ ಹೇಳಿದ್ದೇನು?

ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಈಗಾಗಲೆ ಒಂಟಿ ಮನೆಯಿಂದ ಎಲಿಮಿನೇಟ್ ಆಗಿ ಗುರುಲಿಂಗ ಸ್ವಾಮೀಜಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಜೊತೆಗೆ ಒಂದು ವಾರ ಬಿಗ್ ಮನೆಯಲ್ಲಿ ಗೆಸ್ಟ್ ಆಗಿದ್ದ ರವಿ ಬೆಳಗೆರೆ ಸಹ ಮನೆಯಿಂದ ಹೊರ ಬಂದಿದ್ದಾರೆ.

ಒಂದು ವಾರ ಕಳೆಯುತ್ತಿದ್ದಂತೆ ಮನೆಯಲ್ಲಿ ಕಿತ್ತಾಟ, ಗಾಸಿಪ್, ಮನಸ್ತಾಪಗಳು ಹೆಚ್ಚಾಗುತ್ತಿವೆ. ಸೂಪರ್ ಸಂಡೇ ವಿತ್ ಕಿಚ್ಚ ಎಪಿಸೋಡ್ ನಲ್ಲಿ ಸ್ಪರ್ಧಿಗಳ ಕೋಪ, ಮನಸ್ತಾಪ, ಕಿತ್ತಟಗಳು ಬಹಿರಂಗವಾಗಿವೆ. ಸುದೀಪ್ ಮುಂದೆಯೆ ಚೈತ್ರಾ ವಾಸುದೇವನ್ ಮತ್ತು ಚೈತ್ರಾ ಕೋಟೂರ್ ಇಬ್ಬರು ಕಿತ್ತಾಡಿಕೊಂಡಿದ್ದಾರೆ.

Recommended Video

Bigg Boss Kannada 7:Kuri Pratap is getting Rs.25K Per Day in Bigg Boss House | FILMIBEAT KANNADA

ಕಿತ್ತಾಡಿಕೊಳ್ಳುತ್ತಿದ್ದರೆ ನನ್ನ ಅವಶ್ಯಕತೆ ಇಲ್ಲಿ ಇಲ್ಲ

ಕಿತ್ತಾಡಿಕೊಳ್ಳುತ್ತಿದ್ದರೆ ನನ್ನ ಅವಶ್ಯಕತೆ ಇಲ್ಲಿ ಇಲ್ಲ

ಚೈತ್ರಾ ಮತ್ತು ಚೈತ್ರಾ ಇಬ್ಬರ ಕಿತ್ತಾಟ ನೋಡಿ ಸುದೀಪ್ "ನೀವ್ ನೀವೇ ಮಾತನಾಡಿಕೊಂಡು, ನೀವೆ ಕಿತ್ತಾಡಿಕೊಳ್ಳುತ್ತಿದ್ದರೆ ನನ್ನ ಅವಶ್ಯಕತೆ ಇಲ್ಲಿ ಇಲ್ಲ" ಎಂದು ಸುದೀಪ್ ಹೇಳಿದ್ದಾರೆ. ನಂತರ ಇಬ್ಬರು ಸೈಲೆಂಟ್ ಆಗಿದ್ದಾರೆ. ಅಸಲಿಗೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಲು ಕಾರಣವಾಗಿದ್ದು ಚೈತ್ರಾ ಎನ್ನುವ ಹೆಸರು.

ಬಿಗ್ ಮನೆಯಲ್ಲಿ ಐಡೆಂಟಿಟಿ ಕ್ರೈಸಿಸ್

ಬಿಗ್ ಮನೆಯಲ್ಲಿ ಐಡೆಂಟಿಟಿ ಕ್ರೈಸಿಸ್

ಚೈತ್ರಾ ಎನ್ನುವ ಇಬ್ಬರು ಒಂದೇ ಮನೆಯಲ್ಲಿ ಇರುವುದರಿಂದ ಐಡೆಂಟಿಟಿ ಕ್ರೈಸಿಸ್ ಆಗುತ್ತಿದೆಯಂತೆ. ಈ ಬಗ್ಗೆ ಸುದೀಪ್ ಕೇಳಿದಾಗ ಚೈತ್ರಾ ಎನ್ನುವ ಒಂದೇ ಹೆಸರಿನವರು ಒಂದೆ ಮನೆಯಲ್ಲಿ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಇಬ್ಬರು ಚೈತ್ರಾ ಒಪ್ಪಿಕೊಂಡಿದ್ದಾರೆ.

ಚೈತ್ರಾ ವಾಸುದೇವನ್ ಹೇಳಿದ್ದೇನು?

ಚೈತ್ರಾ ವಾಸುದೇವನ್ ಹೇಳಿದ್ದೇನು?

ಹೆಸರಿನ ಸಮಸ್ಯೆಯಿಂದ ಏನಾಗುತ್ತಿದೆ ಎಂದು ಚೈತ್ರಾ ವಾಸುದೇವನ್ ವಿವರಿಸಿದ್ದಾರೆ. "ಮನೆಯಲ್ಲಿ ಲೈಟ್ ಆಫ್ ಆದ್ಮೇಲೆ ಎಲ್ಲರು ಮಾತನಾಡುತ್ತಿದ್ದರು. ನಾನು ಮಲಗಿದ್ದೆ. ಎಚ್ಚರವಾದಾಗ ಏನು ಮಾತನಾಡುತ್ತಿದ್ದಾರೆ ಅಂತ ನೋಡಿದಾಗ ಚೈತ್ರಾ ಕೋಟೂರ್ ಹೇಳುತ್ತಿದ್ದರು ಚೈತ್ರಾ ಮತ್ತು ಶೈನ್ ಎನ್ನುವ ಹೆಸರು ಇಟ್ಟಕೊಂಡು ಮಾತನಾಡುತ್ತಿದ್ದರು"

ನನಗೆ ಮದುವೆಯಾಗಿದೆ

ನನಗೆ ಮದುವೆಯಾಗಿದೆ

"ನನಗೇನು ಭಯ ಅಂದರೆ ನಮ್ಮನೆಲಿ ಅಜ್ಜಿ ಇದ್ದಾರೆ. ತುಂಬ ವಯಸ್ಸಾಗಿ, ಅವರು ಈ ಕಾರ್ಯಕ್ರಮ ನೋಡುತ್ತಿರುತ್ತಾರೆ. ಕತ್ತಲೆ ಇರುವುದರಿಂದ ಯಾವ ಚೈತ್ರಾ ಅಂತ ಅವರಿಗೂ ಗೊತ್ತಾಗುವುದಿಲ್ಲ. ನನಗೆ ಮದವೆಯಾಗಿದೆ, ನನ್ನ ಗಂಡ ತುಂಬ ಪ್ರೀತಿ ಮಾಡುತ್ತಾರೆ. ಮನೆಯವರೆಲ್ಲ ಇವಳಿಗೇನು ಬಂತು ಅಲ್ಲಿ ಹೋಗಿ ಚೈತ್ರಾ ಮತ್ತು ಶೈನ್ ಎಂದು ಕೇಳಿ ಬರುತ್ತಿದೆಯಲ್ಲ ಎಂದು ಗೊಂದಲ ಆಗುತ್ತಾರೆ" ಹಾಗಾಗಿ ಒಂದೆ ಹೆಸರಿನಿಂದ ಸಮಸ್ಯೆಯಾಗುತ್ತಿದೆ ಎಂದು ಚೈತ್ರಾ ವಾಸುದೇವನ್ ಬೇಸರ ಹೊರಹಾಕಿದ್ದಾರೆ.

ರೊಚ್ಚಿಗೆದ್ದ ಚೈತ್ರಾ ಕೋಟೂರ್

ರೊಚ್ಚಿಗೆದ್ದ ಚೈತ್ರಾ ಕೋಟೂರ್

ವಾಸುದೇವನ್ ಮಾತು ಕೇಳಿ ಚೈತ್ರಾ ಕೋಟೂರ್ ರೊಚ್ಚಿಗೆದ್ದಿದ್ದಾರೆ "ನಮಗೇನು ಮನೆ-ಮಠ ಇಲ್ಲವಾ, ಅಪ್ಪ-ಅಮ್ಮ ಇಲ್ಲವಾ ನಮ್ಮನ್ನ ನೋಡುವ ಜನ ಇಲ್ಲವಾ, ಹೆಂಗಂದಹಾಗೆ ಬಂದಿದ್ದೀವಾ" ಎಂದು ಏರು ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ್ರು. "ನಾನು ಕೂಡ ಸಭ್ಯ ಹುಡುಗಿ, ಬರಹಗಾರ್ತಿ" ಎಂದು ಹೇಳುತ್ತಾ ಚೈತ್ರಾ ವಾಸುದೇವನ್ ಗೆ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ರಂಗೇರಲಿದೆ ಬಿಗ್ ಮನೆ

ಮತ್ತಷ್ಟು ರಂಗೇರಲಿದೆ ಬಿಗ್ ಮನೆ

ಇಬ್ಬರ ವಾಗ್ವಾದ ಜಾಸ್ತಿ ಆಗುತ್ತಿದ್ದಂತೆ ಸುದೀಪ್ ಮಧ್ಯ ಪ್ರವೇಶ ಮಾಡಿ ಇಬ್ಬರನ್ನು ತಣ್ಣಗೆ ಮಾಡಿದ್ರು. ಸದ್ಯ ಇಬ್ಬರ ಜಗಳ ಅಲ್ಲಿಗೆ ನಿಂತಿದೆ. ಆದ್ರೆ ಇನ್ಮುಂದೆ ಇಬ್ಬರ ನಡುವೆ ಯಾವ್ಯಾವ ವಿಚಾರಕ್ಕೆ, ಹೆಸರಿನ ವಿಚಾರವಾಗಿ ಸಮಸ್ಯೆ ಉಂಟಾಗಬಹುದು ಎನ್ನುವುದು ಕಾದು ನೋಡಬೇಕು. ಇನ್ನು ಒಂದೇ ವಾರ ಕಳೆದಿರುವುದರಿಂದ ಬಿಗ್ ಮನೆ ಕೊಂಚ ಶಾಂತವಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಮನೆ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ.

More from Filmibeat

English summary
Quarrel between Chaitra kottoor and Chaitra Vasudevan in front of Sudeep in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X