Mahanati: ಮಹಾನಟಿ ಕ್ವಾರ್ಟರ್ ಫಿನಾಲ್ ಹಂತಕ್ಕೆ ತಲುಪುವ 5 ಸ್ಪರ್ಧಿಗಳು ಇವರೇನಾ..?
ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಶೋ ಶುರುವಾಗಿ ಒಳ್ಳೆ ಮನರಂಜನೆ ನೀಡುತ್ತಿದೆ. ವಿಭಿನ್ನವಾದ ರೀತಿಯಲ್ಲಿ ಕಂಟೆಂಟ್ ಗಳನ್ನು ನೀಡುತ್ತಿದೆ. ಮಹಾನಟಿ ನಿನ್ನೆ ಮೊನ್ನೆ ಶುರುವಾಗಿದೆ ಎನಿಸಿದರೂ ಹದಿಮೂರು ವಾರಗಳನ್ನು ಪೂರೈಸಿದೆ. ಇಷ್ಟು ದಿನ ಜಡ್ಜಸ್ ನೀಡಿದ ಟಾಸ್ಕ್ ಗಳನ್ನು ಪೂರೈಸಿದ ಸ್ಪರ್ಧಿಗಳು ಇಂದು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದಾರೆ.
ಒಂಭತ್ತು ಜನ ಸ್ಪರ್ಧಿಗಳಲ್ಲೂ ಯಾವುದೇ ರೀತಿಯ ಆತಂಕದ ವಾತಾವರಣ ಕಾಣಿಸುತ್ತಿಲ್ಲ. ಅಲ್ಲಿರುವವರು ಯಾರ ಜೊತೆಗೂ ಸ್ಪರ್ಧೆಗೆ ಬಿದ್ದಿಲ್ಲ. ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವುದಕ್ಕೆ ಇದೊಂದು ವೇದಿಕೆ ಎಂಬ ತೃಪ್ತಿಯಿಂದಾನೇ ನೋಡುತ್ತಿದ್ದಾರೆ. ಇಂದು ಮತ್ತು ನಾಳೆ ಮಹಾನಟಿ ವೇದಿಕೆಯಲ್ಲಿ ಕ್ವಾರ್ಟರ್ ಫೈನಲ್ ನಡೆಯಲಿದೆ.

ಧಾರಾವಾಹಿಯಲ್ಲಿ ಒಂದು ದಿನದ ನಟನೆ
ಮಹಾನಟಿ ಶುರುವಾದಾಗಿನಿಂದ ವಾರಕ್ಕೊಂದು ವಿಭಿನ್ನ ಕಂಟೆಂಟ್ ಅನ್ನು ನೀಡುತ್ತಾರೆ. ಆರಂಭದಲ್ಲಿ ವೇದಿಕೆ ಮೇಲೆ ಅಭಿನಯಿಸುವುದಕ್ಕೆ ಕಾನ್ಸೆಪ್ಟ್ ಕೊಡುತ್ತಾ ಇದ್ದಂತ ಜಡ್ಜಸ್ ಗಳು ಇದೀಗ ಫೀಲ್ಡ್‌ಗೆ ಬಿಡಲಾಗಿದೆ. ಇಂದು ಎಲ್ಲಾ ಮಹಾನಟಿಯರು ನಿಜವಾಗಿಯೂ ಆಕ್ಟ್ ಮಾಡಿದ್ದಾರೆ. ಧಾರಾವಾಹಿಗಳಲ್ಲಿ ಪಾತ್ರಗಳಿಗೆ ಟ್ವಿಸ್ಟ್ ಕೊಡುವಂತೆ ನಟಿಸಿದ್ದಾರೆ. ಸೀತಾರಾಮದಲ್ಲಿ ರಾಮ್‌ನನ್ನು ತ್ಯಾಗ ಮಾಡುವಂತೆ, ಶ್ರಾವಣಿ ಸುಬ್ರಮಣ್ಯದಲ್ಲಿ ಶ್ರಾವಣಿಗೆ ಜೊತೆಗಾತಿಯಾಗುವಂತೆ, ಲಕ್ಷ್ಮೀ ನಿವಾಸದಲ್ಲಿ ಜಯಂತ್‌ಗೆ ಟಾಂಗ್ ಕೊಡುವ ಹುಡುಗಿಯಾಗಿ ಹೀಗೆ ಧಾರಾವಾಹಿಗಳ ಸೆಟ್‌ನಲ್ಲಿ ರಿಯಲ್ ಆಗಿ ಅಭಿನಯಿಸಿ ಅನುಭವ ಪಡೆದುಕೊಂಡಿದ್ದಾರೆ. ಮಹಾನಟಿ ವೇದಿಕೆ ಒಂದು ರೀತಿಯಾಗಿ ಹೊಸಬರಿಗೆ ಟ್ರೈನಿಂಗ್ ಸೆಂಟರ್ ರೀತಿಯೇ ಆಗಿದೆ ಎಂದರೆ ತಪ್ಪಾಗುವುದಿಲ್ಲ.
ಫೈನಲ್ ಹೋಗುವವರಿಗಾಗಿ ಸಿಂಹಾಸನ
ಹದಿಮೂರು ವಾರಗಳ ಕಾಲ ರಂಜಿಸಿದವರು ಫೈನಲ್ ಹಂತಕ್ಕೆ ತಲುಪುವ ಸಮಯ ಬಂದಿದೆ. ಈ ವಾರ ಕ್ವಾರ್ಟರ್ ಫಿನಾಲೆ ರೌಮನಡ್ ನಡೆಯುತ್ತಿದೆ. ಈಗಾಗಲೇ ಸ್ಪರ್ಧೆಯಲ್ಲಿ ಒಂಭತ್ತು ಮಹಾನಟಿಯರಿದ್ದು, ಕ್ವಾರ್ಟರ್ ಫಿನಾಲೆಗೆ ಹೋಗುವುದಕ್ಕೆ ಆಗುವುದು ಐದು ಜನ ಮಾತ್ರ. ಹೀಗಾಗಿ ಇಂದು ಫಿನಾಲೆಗ ಹೋಗುವವರು ಕುಳಿತುಕೊಳ್ಳುವ ಸಿಂಹಾಸನ ಅನಾವರಣವಾಗಿದೆ. ಸಿಂಹಾಸನಗಳನ್ನು ನೋಡಿದ ಎಲ್ಲಾ ಸ್ಪರ್ಧಿಗಳು ಖುಷಿಯಾಗಿದ್ದಾರೆ.

ಬಾಲ್ಯದ ದಿನಗಳಿಗೆ ಜಾರಿದ ನಿರ್ದೇಶಕ
ಬಾಲ್ಯದ ದಿನಗಳನ್ನು ಯಾರಿಂದಾನೂ ಮರೆಯುವುದಕ್ಕೆ ಆಗುವುದಿಲ್ಲ. ಹಾಗಂತ ದೊಡ್ಡವರಾದ ಮೇಲೆ ಬಾಲ್ಯದ ದಿನಗಳಲ್ಲಿ ಆಡಿದಂತೆ ಆಡುವುದಕ್ಕೂ ಆಗಲ್ಲ. ಅಂದಿನ ದಿನಗಳು ಕಣ್ಣ ಮುಂದೆ ಬಂದಾಗ ನೆನೆದು, ನಕ್ಕು ಸುಮ್ಮನಾಗಬೇಕಷ್ಟೇ. ಮಹಾನಟಿ ವೇದಿಕೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಅವರಿಗೂ ಬಾಲ್ಯದ ದಿನಗಳನ್ನು ನೆನೆಸಿದೆ. ಸಿಂಹಾಸನಗಳನ್ನು ಕಂಡ ತರುಣ್ ಸುಧೀರ್ ಮ್ಯೂಸಿಕಲ್ ಚೇರ್ ಆಟವನ್ನು ನೆನೆಸಿಕೊಂಡಿದ್ದಾರೆ. ಮ್ಯೂಸಿಕಲ್ ಚೇರ್ ನಮಗೆ ಲೈಫ್ ಅನ್ನು ಹೇಳಿಕೊಟ್ಟಿದೆ. ಆದರೆ ಆ ವಯಸ್ಸಲಗಲಿ ಅದೆಲ್ಲ ನಮಗೆ ಗೊತ್ತೆ ಆಗಿಲ್ಲ. ನಮ್ಮ ಸುತ್ತ ಮುತ್ತ ಏನೇನೋ ನಡೆಯುತ್ತದೆ. ಆದರೆ ನಮ್ಮ ಗುರಿಯ ಮೇಲೆ ಎಷ್ಟು ಫೋಕಸ್ ಆಗಿದ್ದೀಯ ಎಂಬುದನ್ನು ಹೇಳಿಕೊಟ್ಟಿದೆ ಎಂದಿದ್ದಾರೆ.
ಫೈನಲ್ ಹೋಗುವವರು ಇವರೇನಾ..?
ಮಹಾನಟಿ ವೇದಿಕೆಯಲ್ಲಿ ಒಬ್ಬೊಬ್ಬರು ಅದ್ಭುತವಾದ ಪ್ರತಿಭೆಗಳೇ ಆಗಿದ್ದಾರೆ. ಸಾಕಷ್ಟು ಜನ ಈಗಾಗಲೇ ಅಭಿಮಾನಿಗಳಾಗಿದ್ದಾರೆ. ಹೀಗಾಗಿ ಫಿನಾಲೆಗೆ ಇವರೇ ಹೋಗಬಹುದು ಎಂದು ಅಂದಾಜು ಮಾಡುತ್ತಿದ್ದಾರೆ. ಪ್ರತಿವಾರವೂ ಮಹಾನಟಿ ಶೋ ನೋಡುವವರು ಹಲವರ ಹೆಸರನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ಮಹಾನಟಿ ವೇದಿಕೆಯಲ್ಲಿ ಫೈನಲ್ ಪ್ರವೇಶ ಮಾಡುವವರು ಗಗನಾ ಬಾರಿ, ಬಿಂದು ಹೊನ್ನಾಳಿ, ಪ್ರಿಯಾಂಕ, ಅಮೃತಾ, ಶ್ವೇತಾ ಭಟ್ ಎನ್ನುತ್ತಿದ್ದಾರೆ. ಈ ಐದು ಜನಕ್ಕೆ ಹೆಚ್ಚಿನ ವೋಟ್ ಬರುತ್ತಿದೆ.


Click it and Unblock the Notifications











