ಶಾಂಭವಿಯ ಕುತಂತ್ರ ಫಲಿಸಿತು.. 'ರಾಜಿ'ಯ ದೇಹ ಸೇರಿದ ಸಾರಾಯಿ ಹೆಂಗೆಂಗೋ ಆಡಿಸಿದೆ!

By ಎಸ್ ಸುಮಂತ್

ತೀರಾ ಮುಗ್ಧತೆ, ತೀರಾ ಒಳ್ಳೆಯತನ ಒಳ್ಳೆಯದ್ದಲ್ಲ ಎಂಬುದು ಹಲವು ಬಾರೀ ಪ್ರೂವ್ ಆಗುವ ವಿಚಾರ. ಅದು ರಾಜಿ ವಿಚಾರದಲ್ಲೂ ಅದೇ ರೀತಿಯಾಗುತ್ತಿದೆ. ಎಲ್ಲರಿಗೂ ಒಳ್ಳೆಯದ್ದನ್ನೇ ಬಯಸುತ್ತಾಳೆ. ಶತ್ರುಗಳು ಕೂಡ ಚೆನ್ನಾಗಿರಲಿ ಎಂಬ ಭಾವ ಅವಳದ್ದು. ಆದರೆ, ಅವರ ಬುದ್ದಿ ಯಾವತ್ತಿಗೂ ನೆಟ್ಟಗಾಗುವುದಿಲ್ಲ ಎಂಬುದಕ್ಕೆ ಆಗಾಗ ಮಾಡುವ ಕಿತಾಪತಿಯೇ ಉದಾಹರಣೆ. ಇದೀಗ ಅವರ ಕೆಟ್ಟತನ, ಕುತಂತ್ರದಿಂದ ರಾಜಿ ಮನೆಯವರೆಲ್ಲರಿಂದ ಬೈಸಿಕೊಳ್ಳುವ ಹಂತ ತಲುಪಿದ್ದಾಳೆ.

ರಾಜಿ ತಾನೇ ಎಷ್ಟು ಅಂತ ನೋವು ಸಹಿಸುತ್ತಾಳೆ. ತಂದೆಯ ಮಾತಿಗೆ ಬೆಲೆ ಕೊಟ್ಟು ಇಬ್ಬರು ಮದುವೆಯಾಗಿರುವುದು. ಆದರೆ ಅದನ್ನು ಸರಸ್ವತಿ ಅರ್ಥ ಮಾಡಿಕೊಳ್ಳುತ್ತಿಲ್ಲ. ರಾಜಿಯದ್ದೇ ಏನೋ ಫ್ಲ್ಯಾನ್ ಎಂಬಂತೆ ಆಕೆಯನ್ನು ನಿಂದಿಸುತ್ತಲೇ ಇದ್ದಾಳೆ. ಎಲ್ಲಾ ನೋವನ್ನು ಅಲ್ಲಲ್ಲಿಯೇ ನುಂಗಿಕೊಂಡು ರಾಜಿ ಬದುಕು ನಡೆಸುತ್ತಿದ್ದಾಳೆ. ಆದರೆ ಈಕೆ ನೋವಿನಲ್ಲೂ ಇತ್ತೀಚೆಗೆ ಕರ್ಣನ ಪ್ರೀತಿ ಸಿಗುತ್ತಿದೆ.

ವರಮಹಾಲಕ್ಷ್ಮೀ ಪೂಜೆಗೆ ತಯಾರಿ

ವರಮಹಾಲಕ್ಷ್ಮೀ ಪೂಜೆಗೆ ತಯಾರಿ

ಮನೆಯಲ್ಲಿ ಲಕ್ಷ್ಮೀಯ ಪೂಜೆ ಶುರುವಾಗಿದೆ‌ ಈ ಪೂಜೆಯನ್ನು ಹೊಸದಾಗಿ ಮದುವೆಯಾಗಿರುವ ಕರ್ಣ ಮತ್ತು ರಾಜಿ‌ ಕೂತು ಮಾಡಬೇಕಾದ ವ್ರತವಾಗಿದೆ. ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದೆ. ಮನೆಯಲ್ಲಿ ಪೂಜೆಗೆ ಅಲಂಕಾರವೂ ಆಗಿದೆ. ರಾಜಿ ನೈವೇದ್ಯವನ್ನು ತಯಾರಿಸಿದ್ದಾಳೆ. ಆದರೆ ಈ ನಡುವೆ ಲಕ್ಷ್ಮೀ ಪೂಜೆಗೆ ರಾಜಿಯನ್ನು ಕೂರದಂತೆ ಮಾಡಲು ಎಲ್ಲಾ ರೀತಿಯ ಫ್ಯ್ಲಾನ್ ಕೂಡ ರೆಡಿಯಾಗಿದೆ.

ರಾಜಿಗೆ ಕುಡಿಸಿ ರಾದ್ಧಾಂತ ಸೃಷ್ಟಿ

ರಾಜಿಗೆ ಕುಡಿಸಿ ರಾದ್ಧಾಂತ ಸೃಷ್ಟಿ

ಇದೆಲ್ಲಾ ಶಾಂಭವಿಯ ಫ್ಲ್ಯಾನ್ ಆಗಿದೆ. ರಾಜಿಯನ್ನು ಪೂಜೆಗೆ ಕೂರಿಸಬಾರದು ಎಂದು ಈ ರೀತಿ ಫ್ಲ್ಯಾನ್ ಮಾಡಿದ್ದಾಳೆ. ಅದಕ್ಕೆ ತೀರ್ಥ ಎಂದು, ತೀರ್ಥದ ಚೆಂಬಿನಲ್ಲಿ ಮಧ್ಯ ಮಿಕ್ಸ್ ಮಾಡಿದ್ದಳು. ಅದರ ಜೊತೆಗೆ ಶಾಂಭವಿ ಜೊತೆ ಇರುವ ಕಿರಾತಕ, ರಾಜಿಗೆ ಯಾವಾಗಲೂ ಕಾಟ ಕೊಡುವ ದುಷ್ಟ ಇದೀಗ ಬಾಟಲ್ ಹಿಡಿದು ಬಂದು ರಾಜಿಗೆ ಬಲವಂತವಾಗಿ ಕುಡಿಸಿದ್ದಾನೆ. ಹಿಂದೆ ನಿಂತು ಶಾಂಭವಿ ಅಂಡ್ ಟೀಂ ಮಾಡಿದ ಫ್ಲ್ಯಾನ್ ಮೊದಲ ಹಂತಕ್ಕೆ ವರ್ಕೌಟ್ ಆಗಿದೆ. ಮನೆಯಲ್ಲಿ ನೋಡಿದರೆ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಜಿಗೆ ದುಷ್ಟರ ಕೆಂಗಣ್ಣು ಬಿದ್ದಿದೆ.

ಸಾನ್ವಿಗೆ ಜಾಡಿಸಿದ 'ರಾಜಿ'

ಸಾನ್ವಿಗೆ ಜಾಡಿಸಿದ 'ರಾಜಿ'

ಈ ಮುಂಚೆ ಕರ್ಣ ಮತ್ತು ಸಾನ್ವಿ ಪ್ರೀತಿ ಮಾಡುತ್ತಾ ಇದ್ರು. ಬಳಿಕ ತಂದೆಯ ಆರೋಗ್ಯದ ಸ್ಥಿತಿ, ರಾಜಿ ಮತ್ತು ಕರ್ಣನನ್ನು ಕಟ್ಟು ಹಾಕಿತ್ತು. ತಂದೆಯ ಮಾತಿಗೆ ಬೆಲೆ ಕೊಟ್ಟು ಇಬ್ಬರು ಮದುವೆಯಾದರು. ಆದರೆ ಆ ಕ್ಷಣದಲ್ಲಿ ಮುನಿಸಿಕೊಂಡು ಹೋಗಿದ್ದ ಸಾನ್ವಿ ಅದ್ಯಾಕೋ ಏನೋ ಫ್ಲ್ಯಾನ್ ಮಾಡಿಕೊಂಡು ಮತ್ತೆ ಮನೆಗೆ ಬಂದು ಸೇರಿಕೊಂಡಿದ್ದಾಳೆ. ಜೊತೆಗೆ ಆಗಾಗ ರಾಜಿಯನ್ನು ಉರಿಸುತ್ತಾ ಇರುತ್ತಾಳೆ. ಕರ್ಣನ ಜೊತೆ ಕ್ಲೋಸ್ ಆಗಿರುವಂತೆ ನಟಿಸುತ್ತಾಳೆ. ರಾಜಿ ಇದೆಲ್ಲವನ್ನು ಮನದಲ್ಲಿಯೇ ಇಟ್ಟುಕೊಂಡು ಕೊರಗುತ್ತಿದ್ದಳು. ಆದರೆ ಇದೀಗ ಕುಡಿದ ಮತ್ತಿನಲ್ಲಿ ಆ ಎಲ್ಲಾ ನೋವನ್ನು ತೆಗೆದು ಜಾಡಿಸಿದ್ದಾಳೆ. ನನ್ನ ಗಂಡನ್ನು ಬೆನ್ನತ್ತಿದ್ದ ಬೇತಾಳ ನೀನು ಅಂತ ಕಪಾಳಕ್ಕೆ ಹೊಡೆದಿದ್ದಾಳೆ. ಸರಸ್ವತಿ ರಾಜಿಯ ಅವತಾರ ನೋಡಿ, ಕುಡಿದಿದ್ದಿಯಾ ಎಂದು ಗರಂ ಆಗಿದ್ದಾಳೆ.

ಕರ್ಣನಿಂದ ಮಾತ್ರ ಪರಿಸ್ಥಿತಿ ಸುಧಾರಿಸಲು ಸಾಧ್ಯ!

ಕರ್ಣನಿಂದ ಮಾತ್ರ ಪರಿಸ್ಥಿತಿ ಸುಧಾರಿಸಲು ಸಾಧ್ಯ!

ಕರ್ಣನಿಗೆ ರಾಜಿ ಏನು ಎಂಬುದು ಅರ್ಥವಾಗಿದೆ. ಅದಕ್ಕಾಗಿಯೇ ಮನೆಯವರೆಲ್ಲಾ ಸೇರಿ ಬೈಯ್ಯುವಾಗ ರಾಜಿ ಪರ ನಿಲ್ಲುತ್ತಾನೆ. ಪೂಜೆಗೆ ಇನ್ನು ಸಿದ್ದತೆ ಮಾಡಿಕೊಳ್ಳದ ರಾಜಿಯನ್ನು ಕರ್ಣ ಪ್ರೀತಿಯಿಂದ ಮಾತಾಡಿ, ಧೈರ್ಯ ತುಂಬಿದ್ದಾನೆ. ನೋಡಿದವರಿಗೆಲ್ಲಾ ಹೊಟ್ಟೆ ಕಿಚ್ಚಾಗಬೇಕು. ಕರ್ಣನ ಹೆಂಡತಿ ಎಷ್ಟು ಮುದ್ದಾಗಿದ್ದಾಳೆ ಅಂತ ಕರ್ಣ ಹೇಳಿದಾಕ್ಷಣ ರಾಜಿಗೆ ಗಗನವೇ ಕೈಗೆ ಸಿಕ್ಕಷ್ಟು ಖುಷಿಯಾಗಿತ್ತು. ರಾಜಿ ಕುಡಿಯಲ್ಲ ಎಂಬುದು ಗೊತ್ತು. ಇದೀಗ ರಾಜಿಯ ಈ ಅವತಾರಕ್ಕೆ ಕಾರಣ ಯಾರು ಎಂಬುದನ್ನು ಪತ್ತೆ ಹಚ್ಚಿ ಕರ್ಣ, ರಾಜಿಯ ಪರ ನಿಲ್ಲಬೇಕಿದೆ.

More from Filmibeat

English summary
Raaji Serial August 18th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X