For Quick Alerts
  ALLOW NOTIFICATIONS  
  For Daily Alerts

  ರಾಜಿಗೆ ಕುಡಿಸಿದವರ ಹಿಂದೆ ಬಿದ್ದಿದ್ದಾನೆ ಕರ್ಣ: ಸಾನ್ವಿಗೆ ಕಾದಿದೆಯಾ ಗ್ರಹಚಾರ..?

  By ಎಸ್ ಸುಮಂತ್
  |

  ಮೊದಲೇ ಅತ್ತೆ ಸೊಸೆಯ ಸಂಬಂಧ ಹಳ್ಳ ಹಿಡಿದಿತ್ತು. ರಾಜಿ ಏನೇ ಮಾಡಿದರು ಸರಸ್ವತಿ ಸೊಸೆ ಎಂದು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಅದರ ಜೊತೆಗೆ ಮಾತಿಗೆ ಮುಂಚೆ ರೇಗುವುದು, ಮನಸ್ತಾಪ ಮಾಡಿಕೊಳ್ಳುವುದನ್ನೇ ಮಾಡುತ್ತಿದ್ದಾರೆ. ರಾಜಿಯನ್ನು ಮಗಳಾಗಿ ನೋಡಿದ್ದ ಸರಸ್ವತಿ ಸೊಸೆಯಾಗಿ ಸ್ವೀಕರಿಸುವ ತಂಟೆಗೆ ಹೋಗುತ್ತಿಲ್ಲ. ಇದರ ಜೊತೆಗೆ ಕಿತಾಪತಿ ಟೀಂವರಾಜಿಗೆ ಕುಡಿಸಿ ಅವಾಂತರ ಸೃಷ್ಟಿಸಿದೆ.

  ರಾಜಿ ಆ ರೀತಿ ಮಾಡುವವಳಲ್ಲ ಎಂದು ಕರ್ಣನಿಗೆ ಗೊತ್ತಿಲ್ಲದೆ ಏನಿಲ್ಲ. ಆದರೆ ರಾಜಿ ಯಾಕೆ ಆ ರೀತಿ ಮಾಡಿದಳು ಎಂಬುದು ಕರ್ಣನಿಗೆ ನಾನಾ ಪ್ರಶ್ನೆಗಳು ಕಾಡುತ್ತಿವೆ. ಆ ಪ್ರಶ್ನೆಗಳಿಗೆಲ್ಲಾ ಉತ್ತರ ಹುಡುಕಲು ಹೊರಟಿದ್ದಾನೆ. ಆದರೆ ಆ ಉತ್ತರ ಹುಡುಕುವಾಗ ತಗಲಾಕಿಕೊಳ್ಳುವುದು ಮನೆಯವರೆ ಎಂಬುದು ಕರ್ಣನ ಅಂದಾಜಿಗೂ ಇರಲಿಲ್ಲ. ರಾಜಿಯನ್ನು ಕಂಡರೆ ಕೆಂಡಕಾರುವವರೆ ಈ ಕೆಲಸವನ್ನು ಮಾಡಿದ್ದಾರೆ. ಈಗ ಕರ್ಣ ಯಾವ ಶಿಕ್ಷೆ ನೀಡಲಿದ್ದಾನೆ ಎಂಬುದನ್ನು ನೋಡಬೇಕಿದೆ.

  ರಾಖಿ ಕಂಡು ಮೆಸ್ ನಿಂದ ಕಾಲ್ಕಿತ್ತ ಕಂಠಿ, ಮೇಷ್ಟ್ರು!ರಾಖಿ ಕಂಡು ಮೆಸ್ ನಿಂದ ಕಾಲ್ಕಿತ್ತ ಕಂಠಿ, ಮೇಷ್ಟ್ರು!

  ಮನಸ್ಸಾರೆ ಕ್ಷಮೆ ಕೇಳಿದ ರಾಜಿ

  ಮನಸ್ಸಾರೆ ಕ್ಷಮೆ ಕೇಳಿದ ರಾಜಿ

  ಕುಡಿದ ಮತ್ತಿನಲ್ಲಿ ರಾಜಿ ಕಂಪ್ಲೀಟ್ ಬೇರೆ ರೀತಿಯಲ್ಲಿಯೇ ವರ್ತಿಸಿದ್ದಾಳೆ. ಮನಸ್ಸಲ್ಲಿರುವುದೆಲ್ಲವನ್ನು ಹೊರ ಹಾಕಿದ್ದಾಳೆ. ಅಟ್ ದಿ ಸೇಮ್ ಟೈಮ್ ಸಾನ್ವಿಗೆ ಮನಸ್ಸಾರೆ ಬೈದಿದ್ದಾಳೆ. ಕರ್ಣನ ಹಿಂದೆ ಬಿದ್ದಿರೋದು ಯಾಕೆ, ಮತ್ತೆ ಈ ಮನೆಗೆ ಬಂದಿದ್ಯಾಕೆ ಎಂಬುದನ್ನು ಹೇಳಿದ್ದಾಳೆ. ಇದು ಸಾನ್ವಿಗೆ ಕೋಪ ಬರುವಂತೆ ಮಾಡಿದೆ. ಇದೆ ಕಾರಣಕ್ಕೆ ಮನೆ ಬಿಟ್ಟು ಹೊರಟಿದ್ದಾಳೆ. ಅದಕ್ಕೆ ರಾಜಿ ಪರಿಪರಿಯಾಗಿ ಸಾನ್ವಿ ಬಳಿ ಕ್ಷಮೆಯಾಚಿಸುತ್ತಿದ್ದಾಳೆ. ಆದರೂ ಸಾನ್ವಿ ತನ್ನ ಹಠ ಬಿಡುತ್ತಿಲ್ಲ.

  ಸಾನ್ವಿ ಮಾತಿನಂತೆ ರಾಜಿ ಬಿಡ್ತಾನಾ

  ಸಾನ್ವಿ ಮಾತಿನಂತೆ ರಾಜಿ ಬಿಡ್ತಾನಾ

  ಸಾನ್ವಿ ಮನೆ ಬಿಟ್ಟು ಹೊರಟಿರುವುದು ಕರ್ಣನಿಗೆ ಇಷ್ಟವಿಲ್ಲ. ಅದಕ್ಕೆ ಅವಳಿಗೆ ಬಿಡಿಸಿ ಹೇಳುತ್ತಿದ್ದಾನೆ. ಆದರೆ ಸಾನ್ವಿ ಅದೇ ಚಾನ್ಸ್ ತೆಗೆದುಕೊಂಡು ರಾಜಿಯನ್ನು ಬಿಡು. ಅವಳು ನಿನಗೆ ಸರಿಯಾದ ಜೋಡಿಯಲ್ಲ. ನಾನು ಮತ್ತೆ ನಿನಗಾಗಿಯೇ ಕಾಯುತ್ತಿದ್ದೇನೆ ಎಂದು ಅತ್ತು ಕರೆದು ಮಾಡಿದ್ದಾಳೆ. ಇದು ಕರ್ಣನನ್ನು ಗೊಂದಲಕ್ಕೆ ಸಿಲುಕಿಸಿದೆ. ಇದೆಲ್ಲವನ್ನು ಕೇಳಿಸಿಕೊಂಡ ರಾಜಿ ಗಾಬರಿಯಲ್ಲಿದ್ದಾಳೆ. ಇದೇ ಗಾಬರಿಯಲ್ಲಿ ಅತ್ತೆಗೆ ಡಿಕ್ಕಿ ಹೊಡೆದು ಅಲ್ಲಿಯೂ ಬೈಸಿಕೊಂಡಿದ್ದಾಳೆ.

  ರಾಜಿ ಬಿಡಲು ಮನಸ್ಸಿಲ್ಲ

  ರಾಜಿ ಬಿಡಲು ಮನಸ್ಸಿಲ್ಲ

  ಕರ್ಣನಿಗೆ ಸಾನ್ವಿ ಹೇಳಿದ ಮಾತು ತಲೆಕೆಡಿಸಿದೆ ಎಂಬುದಕ್ಕಿಂತ ಸ್ವಲ್ಪ ಕಸಿವಿಸಿ ಮಾಡಿದೆ. ರಾಜಿಯನ್ನು ಬಿಡುವ ಯೋಚನೆಯಲ್ಲಿ ಇಲ್ಲ ಎಂಬುದು ಅರ್ಥವಾಗಿದೆ. ಆದರೆ ಸಾನ್ವಿ ಖುಷಿಯಾಗಿರಬೇಕು ಎಂದೇ ಬಯಸುತ್ತಾನೆ. ಹೀಗಾಗಿ ಮನೆಗೆ ಬಂದಾಗಲೂ ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದರೆ ರಾಜಿಗೆ ಮೋಸ ಮಾಡುವ ರೀತಿ ನಡೆದುಕೊಳ್ಳುತ್ತಿಲ್ಲ. ಇದು ಕರ್ಣನ ತಲೆಗೆ ಹುಳ ಬಿಟ್ಟಂತಾಗಿದೆ. ಸಾನ್ವಿಗೆ ಹೇಗೆ ಉತ್ತರ ಕೊಡುವುದು ಎಂಬುದನ್ನು ತಿಳಿಯದೆ ಗೊಂದಲದಲ್ಲಿದ್ದಾನೆ.

  ಮನೆಯಲ್ಲಿಯೇ ಇದ್ದಾರೆ ಶತ್ರುಗಳು

  ಮನೆಯಲ್ಲಿಯೇ ಇದ್ದಾರೆ ಶತ್ರುಗಳು

  ರಾಜಿ ಹಬ್ಬಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಳು. ಕರ್ಣ ಹೇಳಿದ ತಕ್ಷಣ ಅಂದವಾಗಿ ರೆಡಿಯಾಗಲು ಹೋದಾಗ ಮನೆಯಲ್ಲಿರುವ ಶತ್ರುಗಳು ರಾಜಿಗೆ ಬಲವಂತವಾಗಿ ಕುಡಿಸಿದರು. ಕುಡಿದ ಮತ್ತಿನಲ್ಲಿ ರಾಜಿ ಎಲ್ಲರ ಮುಂದೆ ವಿಚಿತ್ರವಾಗಿ ಆಡಿದ್ದಳು. ಸಾನ್ವಿ ಯೋಚನೆಯಲ್ಲಿ ಮುಳುಗಿದ್ದ ಕರ್ಣನ ಮುಂದೆ ಅತ್ತುಗೆ ಯಾರದ್ದೋ ಬಳಿ ಫೋನಿನಲ್ಲಿ ಪಿಸುಗುಟ್ಟಿ, ಅವಸರದಲ್ಲಿ ಹೋಗಿದ್ದನ್ನು ನೋಡಿ ಫಾಲೋ ಮಾಡಿದ. ಅಲ್ಲಿ ತನ್ನ ತಮ್ಮ ವಿರಾಟನ ಜೊತೆ ಬಿಸಿ ಊಟ ಮಾಡುತ್ತಿದ್ದನ್ನು ಗಮನಿಸಿದ. ವಿರಾಟ ಮನೆಗೆ ಯಾವಾಗಲೂ ಶತ್ರುವೇ. ಅತ್ತಿಗೆ ಅವನ ಜೊತೆ ಇದ್ದದ್ದನ್ನು ಕಂಡು ಕೆಂಡಾಮಂಡಲಾನಾಗಿದ್ದಾನೆ.

  English summary
  Raaji Serial August 24th Episode Written Update. Here is the details.
  Thursday, August 25, 2022, 0:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X