ಸಾಕ್ಷಿ ಸಮೇತ ಕರೆತಂದರು ತಪ್ಪಿಸಿಕೊಂಡ ಕುತಂತ್ರಿಗಳು: ಮತ್ತೆ ರಾಜಿಯೇ ತಪ್ಪಿತಸ್ಥೆ..!
ರಾಜಿ ವಿಚಾರದಲ್ಲಿ ಒಂದು ಅಮೂಲ್ಯವಾದ ಸತ್ಯ ಅರ್ಥವಾಗಬೇಕಾಗಿದ್ದದ್ದು ಕೇವಲ ಕರ್ಣನಿಗೆ ಮಾತ್ರವಲ್ಲ. ಮುಖ್ಯವಾಗಿ ಸರಸ್ವತಿಗೆ ರಾಜಿಯನ್ನು ಸರಸ್ವತಿ ನಿನ್ನೆ ಮೊನ್ನೆಯಿಂದಲೋ ಅಥವಾ ಕರ್ಣನಿಂದ ತಾಳಿ ಕಟ್ಟಿಸಿಕೊಂಡಾಗಿನಿಂದಲೋ ನೋಡುತ್ತಿಲ್ಲ. ಬದಲಿಗೆ ಮಗಳಂತೆ ಸಾಕಿದ್ದಾಳೆ. ಮಗಳಂತೆಯೇ ಕಾಳಜಿ ವಹಿಸಿದ್ದಾಳೆ, ಮಗಳೆಂದುಕೊಂಡು ಜೀವನದ ಜವಾಬ್ದಾರಿ ತೆಗೆದುಕೊಳ್ಳಲು ಹೊರಟಿದ್ದವರು ಸರಸ್ವತಿ. ಆದರೆ ಕರ್ಣನನ್ನು ಮದುವೆಯಾದಳು ಎಂಬ ಒಂದೇ ಒಂದು ಕಾರಣಕ್ಕೆ ಇಂದು ರಾಜಿ ದುಶ್ಮನ್ ಆಗಿದ್ದಾಳೆ.
ಮನೆಯಲ್ಲಿರುವ ಇಬ್ಬರು ಸೊಸೆಯಂದಿರು ರಾಜಿಯನ್ನು ಇನ್ನಿಲ್ಲದ ದೇಷ ಮಾಡಲು ಆರಂಭಿಸಿದ್ದಾರೆ. ಅದಕ್ಕೆ ಬೇಕಾದ ಕುತಂತ್ರವನ್ನು ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ರಾಜಿ ಕೆಟ್ಟವರ ಉಪಾಯಕ್ಕೇನೆ ಬಲಿಯಾಗುತ್ತಿದ್ದಾಳೆ. ವಿರಾಟ್ ಬಲವಂತವಾಗಿ ಕುಡಿಸಿ, ಮನೆಯಲ್ಲಿ ಅವಾಂತರ ಸೃಷ್ಟಿಸುವಂತೆ ಮಾಡಿದ್ದಾನೆ. ಕರ್ಣ ಕಣ್ಣ ಮುಂದೆಯೇ ಸಾಕ್ಷಿ ತಂದು ನಿಲ್ಲಿಸಿದರು ಯಾರು ನಂಬುತ್ತಿಲ್ಲ.

ಅತ್ತಿಗೆಯರಿಂದ ರಾಜಿಯನ್ನು ಕಾಪಾಡುತ್ತಾನಾ?
ಮನೆಯಲ್ಲಿರುವ ಇಬ್ಬರು ಅತ್ತಿಗೆಯರು ಸದಾಕಾಲ ಕೆಡುಕನ್ನೆ ಕಕ್ಕುತ್ತಿದ್ದಾರೆ. ಸ್ವಾರ್ಥಿಗಳಾಗಿ ಯೋಚನೆ ಮಾಡುತ್ತಾರೆ. ಇದು ಕರ್ಣನಿಗೂ ಗೊತ್ತಿರುವ ವಿಚಾರ. ಈ ವಿಚಾರದಲ್ಲಿ ಆಗಾಗ ವಾರ್ನಿಂಗ್ ಕೂಡ ಮಾಡಿದ್ದಾನೆ. ಆದರೆ ಈಗ ಕರ್ಣ ಸಾಕ್ಷಿ ಸಮೇತ ಮನೆಗೆ ಬಂದಿದ್ದಾನೆ. ವಿರಾಟನೆ ಈ ರೀತಿ ಮಾಡಿದ್ದು ಎಂದು ಹೇಳಿದರು ಅದನ್ನು ಯಾರು ನಂಬುತ್ತಿಲ್ಲ. ಜೊತೆಗೆ ಇಬ್ಬರು ಅತ್ತಿಗೆಯಂದಿರೆ ಕರ್ಣನ ವಿರುದ್ಧ ನಿಂತಿದ್ದಾರೆ.

ವಿರಾಟನ ವಿರುದ್ಧ ಸಾಕ್ಷಿಗಳಿಲ್ಲ
ತಮ್ಮ ಎರಡನೇ ಅತ್ತಿಗೆ ನಿಧಾನವಾಗಿ ಮಾತನಾಡುತ್ತಾ, ಊಟ ತೆಗೆದುಕೊಂಡು ಹೋಗಿದ್ದನ್ನು ಕರ್ಣ ಹಿಂಬಾಲಿಸಿದ್ದ. ಅಲ್ಲಿ ವಿರಾಟನನ್ನು ಕಂಡು ಶಾಕ್ ಆಗಿದ್ದ. ಇವನೇ ರಾಜಿಗೆ ಕುಡಿಸಿರುವುದು ಕರ್ಣನಿಗೆ ಕನ್ಫರ್ಮ್ ಆಗಿತ್ತು. ಅದಕ್ಕಾಗಿಯೇ ಮನೆಗೆ ಎಳೆದು ತಂದು, ಗೆಸ್ಟ್ ಹೌಸ್ ಇವನಿಗ್ಯಾಕೆ ಬಿಟ್ಟುಕೊಟ್ಟಿದ್ದು ಎಂದು ಪ್ರಶ್ನಿಸಿದ್ದಾನೆ. ರಾಜಿಗೆ ಇವನೇ ಕುಡಿಸಿರಬೇಕು ಎಂಬ ಅನುಮಾನ. ಆದರೆ, ವಿರಾಟ್ ಆ ತಪ್ಪನ್ನು ನಾನು ಮಾಡಿಯೇ ಇಲ್ಲ ಎಂದು ಮೊಂಡು ವಾದ ಮಾಡುತ್ತಿದ್ದಾನೆ.

ಸೊಸೆಯಂದಿರೆಲ್ಲಾ ರಾಜಿಗೆ ವಿರುದ್ಧವೇ!
ಇತ್ತ ಸೊಸೆಯಂದಿರು ಕರ್ಣನ ಮಾತಿಗೆ ವ್ಯಂಗ್ಯವಾಡಿದ್ದಾರೆ. ತಪ್ಪು ವಿರಾಟನೆ ಮಾಡಿರುವುದು. ಕುಡಿಸಿರುವುದು ವಿರಾಟನೇ ಎಂದಾಗ ಮನೆಯವರು ಶಾಕ್ ಆಗಿದ್ದಾರೆ. ಯಾಕಂದ್ರೆ ಈ ಮನೆಯಲ್ಲಿ ರಾಜಿ ಮಾತ್ರವೇ ಸತ್ಯ ಹೇಳುವುದು, ರಾಜಿ ಮಾತನ್ನಷ್ಟೇ ನಂಬುವುದು. ಇನ್ಯಾರು ಸತ್ಯ ಹೇಳುವುದಿಲ್ಲವಲ್ಲ, ಅದಕ್ಕಾಗಿ ಹೇಳಿದ್ದನ್ನು ಸುಮ್ಮನೆ ಒಪ್ಪಿಕೊಂಡು ಬಿಡುವುದು ಉತ್ತಮ ಎಂದು ಮೊದಲ ಸೊಸೆ ಅಣಕವಾಡುತ್ತಿದ್ದಾಳೆ.

ರಾಜಿಯನ್ನು ಕರೆತರುತ್ತಾನ ಕರ್ಣ
ರಾಜಿ ತಾಳ್ಮೆಯ ಹುಡುಗಿ. ಎಲ್ಲರೂ ಏನೇ ಹೇಳಿದರು, ಅವಮಾನ ಮಾಡಿದರು ತುಂಬಾನೇ ಸಹಿಸಿಕೊಳ್ಳುತ್ತಾಳೆ. ಹಾಗಂತ ಆಕೆಗೇನು ಮನಸ್ಸೇ ಇರುವುದಿಲ್ಲವಾ. ಆ ಮನಸ್ಸನ್ನು ಅರ್ಥ ಮಾಡಿಕೊಳ್ಳದೆಯೇ ಎಲ್ಲರು ನೋಯಿಸುತ್ತಿದ್ದಾರೆ. ಇದರ ಮಧ್ಯೆ ಸಾನ್ವಿ ಬೇರೆ ಕರ್ಣನನ್ನು ಮನವೊಲಿಸುತ್ತಿದ್ದಾಳೆ. ನನ್ನ ಜೊತೆ ಬಂದು ಬಿಡು, ಅವಳನ್ನು ಬಿಟ್ಟು ಬಿಡು ಎಂದು ಹೇಳುತ್ತಿದ್ದಾಳೆ. ಕರ್ಣನ ಮನಸ್ಸಲ್ಲಿ ಆ ಯೋಚನೆ ಇಲ್ಲದೆಯೇ ಇರಬಹುದು, ಆದರೆ ಅದನ್ನು ರಾಜಿಗೆ ಅರ್ಥ ಮಾಡಿಸಿಲ್ಲ. ಹೀಗಾಗಿ ಎಲ್ಲದರಿಂದ ನೊಂದಿರುವ ರಾಜಿ ತನ್ನ ಲಗೇಜ್ ಎತ್ತುಕೊಂಡು ಹೊರ ನಡೆದೆ ಬಿಟ್ಟಿದ್ದಾಳೆ. ಈಗ ರಾಜಿಯನ್ನು ಸಮಾಧಾನ ಮಾಡಲು ಸಾಧ್ಯವಿರುವುದು ಕರ್ಣನಿಗೆ ಮಾತ್ರ. ರಾಜಿಯ ಮನವೊಲಿಸಿ ಕರೆದುಕೊಂಡು ಬರುತ್ತಾನ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











