For Quick Alerts
  ALLOW NOTIFICATIONS  
  For Daily Alerts

  ಎಲ್ಲರ‌ ಮುಂದೆ ರಾಜಿ ನನ್ನ ಹೆಂಡ್ತಿ ಅಂತಿದ್ದಾನೆ ಕರ್ಣ..!

  By ಎಸ್ ಸುಮಂತ್
  |

  ಅಪ್ಪನ ಆರೋಗ್ಯದ ದೃಷ್ಟಿಯಿಂದ.. ರಾಜಿಯ ಭವಿಷ್ಯದ ದೃಷ್ಟಿಯಿಂದ ಕರ್ಣ ತಲೆಬಗ್ಗಿಸಿ, ಅಪ್ಪನ ಮಾತಿಗೆ ಕಟ್ಟುಬಿದ್ದು ರಾಜಿಯನ್ನು ಮದುವೆಯಾದ. ಬಳಿಕ ಇಬ್ಬರ ನಡುವೆ ಅಂಥದ್ದೇನು ಸಂಬಂಧ, ಸ್ನೇಹ ಸರಿ ಇರಲಿಲ್ಲ. ಇಬ್ಬರ ನಡುವೆ ಬೇಸರ ಮನಸ್ತಾಪವೇ ಎದ್ದು ಕಾಣುತ್ತಿತ್ತು. ಆದರೆ ಕರ್ಣ ದಿನ ಕಳೆದಂತೆ ಬದಲಾಗುತ್ತಾ ಹೋದ. ರಾಜಿಯನ್ನು ಹೆಂಡತಿಯಲ್ಲದೇ ಹೋದರೂ ಸ್ನೇಹಿತೆಯಂತೆ ಕಾಣಲು ಶುರು ಮಾಡಿದ. ಈಗಲೂ ಅದೇ ಸ್ನೇಹವೇ ಇಬ್ಬರನ್ನು ನೆಮ್ಮದಿಯಾಗಿರಿಸಿದೆ. ರಾಜಿ ಆ ಸ್ನೇಹದಿಂದಲೇ ಸಂತಸ ಪಡುತ್ತಿದ್ದಾಳೆ.

  ಕರ್ಣ ಈ ಮುಂಚೆಯೇ ಸಾನ್ವಿಯನ್ನು ಪ್ರೀತಿ ಮಾಡಿದ್ದ. ಆದರೆ ಅನಿವಾರ್ಯತೆ, ಪರಿಸ್ಥಿತಿಗೆ ತಲೆಕೊಟ್ಟು ರಾಜಿಯನ್ನು ಮದುವೆಯಾದ ಬಳಿಕ ಸಾನ್ವಿ ಮನೆಯನ್ನೇ ಬಿಟ್ಟು ಹೋಗಿದ್ದಳು. ನನಗೆ ಮೋಸ ಮಾಡಿದೆ ಎಂದು ದೂರಿದ್ದಳು. ಆದರೆ ಇದೀಗ ಕರ್ಣನ ಮನೆಗೆ ಮತ್ತೆ ಬಂದಿದ್ದಾಳೆ. ಬಂದವಳು ಸುಮ್ಮನೆ ಇಲ್ಲ ರಾಜಿಯನ್ನು ಪ್ರತಿಕ್ಷಣ ಕಾಡಿಸುತ್ತಿದ್ದಾಳೆ. ಪ್ರತಿಕ್ಷಣ ಏನಾದರೊಂದು ಸಮಸ್ಯೆ ಕೊಡಲು ಯೋಜನೆ ರೂಪಿಸುತ್ತಿದ್ದಾಳೆ. ಆದರೆ ಸಾನ್ವಿಯ ಕೆಟ್ಟತನವೇ ರಾಜಿಗೆ ವರವಾಗುತ್ತಿದೆ.

  'ಮರಳಿ ಮನಸಾಗಿದೆ' & 'ಬೆಟ್ಟದ ಹೂ' ಮಹಾಸಂಚಿಕೆಯಲ್ಲಿ ಒಂದಾಗುತ್ತಾರಾ ಈ ಜೋಡಿಗಳು!'ಮರಳಿ ಮನಸಾಗಿದೆ' & 'ಬೆಟ್ಟದ ಹೂ' ಮಹಾಸಂಚಿಕೆಯಲ್ಲಿ ಒಂದಾಗುತ್ತಾರಾ ಈ ಜೋಡಿಗಳು!

  ಸಾನ್ವಿಯ ಆಟ ಮಿತಿ ಮೀರುತ್ತಿದೆ

  ಸಾನ್ವಿಯ ಆಟ ಮಿತಿ ಮೀರುತ್ತಿದೆ

  ರಾಜಿ ಎಷ್ಟು ಮುಗ್ದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಓದಿಲ್ಲ, ಬರೆದಿಲ್ಲ ಆದರೆ ಸಂಸಾರ ಜ್ಞಾನ ಹೆಚ್ಚಾಗಿಯೇ ಇದೆ. ಯಾರಿಗೂ ನೋಯಿಸಿದವಳಲ್ಲ. ಎಷ್ಟೇ ಕಷ್ಟ ಬಂದರೂ ತನ್ನೊಳಗೆ ಇಟ್ಟುಕೊಂಡು ನಗುವ ತೋರುವವಳು ರಾಜಿ. ಹೊರಗೆಲ್ಲಾ ಓಡಾಡಿದವಳಲ್ಲ. ಶಾಪಿಂಗ್ ಅಂತ ತಿರುಗಿದವಳಲ್ಲ. ಇಂಥ ಮುಗ್ಧ ಹುಡುಗಿಯನ್ನು ಸಾನ್ವಿ ಶಾಪಿಂಗ್ ಹೋಗು ಅಂತ ಕಳುಹಿಸುತ್ತಿದ್ದಾಳೆ. ಅದು ತನಗೆ ಬಟ್ಟೆ ತರುವಂತೆ. ನಿನ್ನ ಟೇಸ್ಟ್‌ ಬೇರೆ, ರಾಜಿಗೆ ಇರುವ ಟೇಸ್ಟ್ ಬೇರೆ ಇದು ಬೇಡ ಎಂದು ಕರ್ಣ ಹೇಳಿದರು ಕೇಳುತ್ತಿಲ್ಲ. ಹಾಗೇನು ಇಲ್ಲ ನಮ್ಮಿಬ್ಬರ ಟೇಸ್ಟ್ ಒಂದೇ ಎಂದು ಹಠ ಮಾಡುತ್ತಿದ್ದಾಳೆ. ಶಾಪಿಂಗ್ ಲೀಸ್ಟ್ ಕೊಟ್ಟಿದ್ದಲ್ಲದೆ ಕರ್ಣನಿಂದಲೇ ಎಟಿಎಂ ಕಾರ್ಡ್ ಕೂಡ ಕೊಡಿಸಿದ್ದಾಳೆ.

  ಕಾಫಿ ನಾಡು ಚಂದು ಕಾಪಿ ಹೊಡೆದ 'ನಾಗಿಣಿ 2' ನಮ್ರತಾ: ವಿಡಿಯೋ ವೈರಲ್ಕಾಫಿ ನಾಡು ಚಂದು ಕಾಪಿ ಹೊಡೆದ 'ನಾಗಿಣಿ 2' ನಮ್ರತಾ: ವಿಡಿಯೋ ವೈರಲ್

  ರಾಜಿ ಪರ ನಿಂತ ಕರ್ಣ

  ರಾಜಿ ಪರ ನಿಂತ ಕರ್ಣ

  ರಾಜಿ ಮಾಡುವ ಎಲ್ಲಾ ಕೆಲಸಗಳಲ್ಲೂ ಎಡವಟ್ಟು ಮಾಡಿಸಲು ಸಾನ್ವಿ ಸಜ್ಜಾಗಿದ್ದಾಳೆ. ಅದರಂತೆ ಹೊಟ್ಟೆ ಹಸಿವು ಊಟ ಬೇಕು ಎಂದು ಹೇಳಿದ್ದ ಸಾನ್ವಿ, ಎಲ್ಲಾ ಅಡುಗೆ ತಯಾರಿ ಮಾಡಿ, ಬಾಕ್ಸ್ ಗೆ ಹಾಕಿದ್ದ ಊಟವನ್ನೇ ಮಾಯ ಮಾಡಿದ್ದಾಳೆ. ಊಟ ತುಂಬಿದ ಬಾಕ್ಸ್ ತರುತ್ತಿದ್ದ ಜಾಗದಲ್ಲಿ ಖಾಲಿ ಬಾಕ್ಸ್ ಇರಿಸಿದ್ದಾಳೆ. ಕರ್ಣನ ಮುಂದೆ ರಾಜಿಯನ್ನು ಗದರಿದ್ದಾಳೆ. ಆಗ ಕರ್ಣನು ಕೋಪಗೊಂಡಿದ್ದಾನೆ. ಮನೆಯೊಳಗೆ ಅಮ್ಮನು ಸೇರಿ ಬೈಯ್ಯುವಾಗ ಕರ್ಣ ರಾಜಿಯ ಪರವೇ ನಿಂತಿದ್ದಾನೆ. ರಾಜಿಗೆ ಒಂದೆರಡು ಕೆಲಸವಲ್ಲ ಹತ್ತಾರು ಕೆಲಸ ಮಾಡುತ್ತಾಳೆ. ಮನೆಯಲ್ಲಿ ಕ್ಷಮಿಸುವುದಕ್ಕೆ ಆಗದೆ ಇರುವ ತಪ್ಪು ಮಾಡಿದವರನ್ನೇ ಕ್ಷಮಿಸಿದ್ದೀವಿ. ಇನ್ನು ರಾಜಿ ಮಾಡಿದ ಈ ಸಣ್ಣ ತಪ್ಪು ಕ್ಷಮಿಸುವುದಕ್ಕೆ ಆಗಲ್ಲವಾ ಎಂದು ಹೆಂಡತಿ ಪರ ನಿಂತಿದ್ದಾನೆ.

  ರಾಜಿ ಬಗ್ಗೆ ಮನದಲ್ಲೇ ಗುಣಗಾನ

  ರಾಜಿ ಬಗ್ಗೆ ಮನದಲ್ಲೇ ಗುಣಗಾನ

  ಸಾನ್ವಿ ಕರ್ಣನ ಮನೆ ಸೇರಿರುವುದೇ ಇಬ್ಬರನ್ನು ದೂರ ಮಾಡುವುದಕ್ಕೆ. ಅದರ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆಂದೆ ಕರ್ಣನನ್ನು ಒಬ್ಬಂಟಿಯಾಗಿ ಕರೆದುಕೊಂಡು ಹೋಗಿದ್ದಳು. ಆದರೆ ರಾಜಿಯ ಮುಗ್ಧತೆ ಆ ಬಗ್ಗೆ ಅನುಮಾನವನ್ನೇ ಪಡಲಿಲ್ಲ. ಕರ್ಣ ಆದರೂ ಬಾಯಿಬಿಟ್ಟು ಕೇಳಿದ. ನಾನು ಸಾನ್ವಿ ಇಬ್ಬರೇ ಹೋಗಿದ್ದಕ್ಕೆ ನಿನಗೆ ಏನು ಅನ್ನಿಸಿತು ಅಂತ. ರಾಜಿ, ಸಾನ್ವಿಗೆ ಊಟ ಕೊಟ್ಟಿಲ್ಲ ಅಂತ ನೆನಪು ಮಾಡಿಕೊಂಡು ಹೋದಳು. ಈ ಗುಣವೇ ಕರ್ಣನನ್ನು ಕಾಡಿದ್ದು.,

  ಸಾನ್ವಿಯ ಫ್ಲ್ಯಾನ್ ಫ್ಲಾಪ್

  ಸಾನ್ವಿಯ ಫ್ಲ್ಯಾನ್ ಫ್ಲಾಪ್

  ರಾಜಿಗೆ ಏನು ಗೊತ್ತಿಲ್ಲ ಎಂದು ಗೊತ್ತಿದ್ದರು ಶಾಪಿಂಗ್ ಮಾಡುವುದಕ್ಕೆ ಕಳುಹಿಸಿದಳು. ರಾಜಿ ಇಲ್ಲ ಎನ್ನದೇ ಶಾಪಿಂಗ್ ಹೋದಾಗ ಸಾನ್ವಿ ರೌಡಿಗಳನ್ನು ಹಿಂದೆ ಬಿಟ್ಟಿದ್ದಾಳೆ. ರೌಡಿಗಳೆಲ್ಲಾ ರಾಜಿಯನ್ನು ಸುತ್ತುವರೆದು ಕಿರಿಕಿರಿ ಮಾಡುವಾಗ ಕರ್ಣ ಅಲ್ಲಿಗೆ ಬರುತ್ತಾನೆ. ಬಂದವನೇ ಎಲ್ಲರನ್ನು ಹೊಡೆದಿದ್ದಾನೆ. ನೀನು ಯಾರೋ ಎಂದು ಕೇಳೊದವರಿಗೆ ನಾನು ಕರ್ಣ, ರಾಜಿ ನನ್ನ ಹೆಂಡತಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾನೆ. ಇದು ಸಾನ್ವಿಯ ಹೊಟ್ಟೆಯಲ್ಲಿ ಬೆಂಕಿ ಹೊತ್ತಿಸಿದೆ.

  English summary
  Raaji Serial August 9th Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X