For Quick Alerts
  ALLOW NOTIFICATIONS  
  For Daily Alerts

  'ರಾಜಿ' ತಾಳ್ಮೆಯ ಕಟ್ಟೆ ಒಡೆದಿದೆ.. ಕೆಣಕಿದ ವಿರಾಟನ ಜೀವದ ಕತೆಯೇನು?

  By ಎಸ್ ಸುಮಂತ್
  |

  ವಿರಾಟನ ಅಟ್ಟಹಾಸವನ್ನು ರಾಜಿ ತಾನೇ ಎಷ್ಟು ಅಂತ ಸಹಿಸಿಕೊಳ್ಳುತ್ತಾಳೆ. ಸೈಲೆಂಟಾಗಿ, ಮುಗ್ದರಂತೆ ಇರುವುದು ವೀಕ್ನೆಸ್ ಅಲ್ಲ. ತಾಳ್ಮೆ ಇರುವವರು ಯಾವಾಗಲೂ ತಾಳ್ಮೆಯನ್ನು ಪ್ರದರ್ಶನ ಮಾಡುತ್ತಾ ಇರುತ್ತಾರೆ. ಆದರೆ ಒಮ್ಮೆ ತಾಳ್ಮೆಯ ಕಟ್ಟೆ ಒಡೆದು ರೊಚ್ಚಿಗೆದ್ದರೆ ಮುಗೀತು. ಎದುರುಗಡೆಯಿದ್ದವರ ಪ್ರಾಣಕ್ಕೂ ಕುತ್ತು ಬಂದರೂ ಅನುಮಾನವಿಲ್ಲ. ಈಗ ರಾಜಿಯ ವಿಚಾರದಲ್ಲೂ ನಡೆದದ್ದು ಅದೇ.

  ರಾಜಿಯನ್ನು ಗಂಡ ಮನೆಯಲ್ಲಿದ್ದಗಲೂ ಬಿಡಲಿಲ್ಲ. ಆಕೆಯನ್ನು ಅಕ್ಕ-ತಮ್ಮ ಸೇರಿಕೊಂಡು ಸಾಕಷ್ಟು ಹಿಂಸೆ ಕೊಟ್ಟಿದ್ದಾರೆ. ಆದರೂ ಅದೆಲ್ಲವನ್ನು ರಾಜಿ ಸಹಿಸಿಕೊಂಡಿದ್ದಾಳೆ. ಆದರೆ ತುಂಬಾ ದೂರ ಬಂದ ಮೇಲೂ ಅವನ ಅಟ್ಟಹಾಸ ಮುಂದುವರೆದಿರುವ ಕಾರಣ ರಾಜಿ, ಈಗ ತನ್ನ ಶೌರ್ಯವನ್ನು ತೋರಿಸಿದ್ದಾಳೆ. ಮಚ್ಚು ಹಿಡಿದು, ವಿರಾಟನ ಚಳಿ ಬಿಡಿಸಿದ್ದಾಳೆ.

  ಆರ್ಯವರ್ಧನ್ ಎಲ್ಲಿದ್ದಾನೆ ಎಂದು ಅನುಗೆ ಸುಳಿವು ಸಿಕ್ಕಿದೆಆರ್ಯವರ್ಧನ್ ಎಲ್ಲಿದ್ದಾನೆ ಎಂದು ಅನುಗೆ ಸುಳಿವು ಸಿಕ್ಕಿದೆ

  ಒಲ್ಲದ ಮನಸ್ಸುಗಳಿಂದ ದೂರಾದ ರಾಜಿ

  ಒಲ್ಲದ ಮನಸ್ಸುಗಳಿಂದ ದೂರಾದ ರಾಜಿ

  ರಾಜಿ ಮದುವೆಯಾದಾಗಿನಿಂದಲೂ ಕರ್ಣನ ಮನೆಯಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾಳೆ. ಅವಮಾನ ಎದುರಿಸಿದ್ದಾಳೆ. ವಾರಗಿತ್ತಿಯರೇ ಶತ್ರುಗಳಾಗಿ ನಿಂತಿದ್ದಾರೆ. ರಾಜಿಗೆ ಹೆಚ್ಚು ಅಪಾಯ ಆಗಿದ್ದೆ ಆ ಇಬ್ಬರು ಸೊಸೆಯಂದಿರಿಂದ. ಅದಕ್ಕೆ ತಕ್ಕನಾಗಿ ಕರ್ಣನಿಂದ ದೂರಾಗಿದ್ದ ಸಾನ್ವಿ ಬೇರೆ ಮನೆಗೆ ಒಕ್ಕರಿಸಿದ್ದಳು. ಕರ್ಣನನ್ನು ತನ್ನತ್ತ ಸೆಳೆಯಲು ಪ್ರಯತ್ನಪಟ್ಟಳು. ಇದೆಲ್ಲ ನೋಡಿದ ರಾಜಿ, ಕರ್ಣನಾದರೂ ಸಂತೋಷದಿಂದ ಇರಲಿ ಎಂದು ಮನೆ ಬಿಟ್ಟು ಬಂದಿದ್ದಳು.

  ಆದಿಗೆ ಎರಡನೇ ಮದುವೆ ಭಾಗ್ಯ! ಹಾಗಿದ್ರೆ ಪಾರು ಕತೆ ಏನು?ಆದಿಗೆ ಎರಡನೇ ಮದುವೆ ಭಾಗ್ಯ! ಹಾಗಿದ್ರೆ ಪಾರು ಕತೆ ಏನು?

  ಅತ್ತೆಗೂ ಅರಿವಾಯ್ತು ರಾಜಿ ಬೆಲೆ

  ಅತ್ತೆಗೂ ಅರಿವಾಯ್ತು ರಾಜಿ ಬೆಲೆ

  ಮನೆಯ ಸೊಸೆಯಂದಿರು ಕುಣಿಯುವಂತೆ ಮನೆಯ ಯಜಮಾನಿ ಸರಸ್ವತಿಯೂ ಕುಣಿಯುತ್ತಿದ್ದಳು. ರಾಜಿ ಮದುವೆಯಾಗದೆ ಇದ್ದಾಗ ಮಗಳಂತೆಯೇ ನೋಡಿಕೊಳ್ಳುತ್ತಿದ್ದಳು. ಆದರೆ ಸೊಸೆಯಾಗಿ ಬಂದಾಗ ಸ್ವೀಕರಿಸಿಕೊಳ್ಳುವುದಕ್ಕೆ ತಯಾರಿರಲಿಲ್ಲ. ಹೀಗಾಗಿ ಸರಸ್ವತಿ ಕೂಡ ರಾಜಿಗೆ ಅವಮಾನ ಮಾಡಿದ್ದಳು. ಈಗ ಮನೆ ಬಿಟ್ಟು ಹೋಗಿದ್ದಾಳೆ. ಅವಳ ಬಗ್ಗೆ ಮಮಕಾರ ಹುಟ್ಟಿದೆ. ಆದಷ್ಟು ಬೇಗ ಮನೆಗೆ ಬರುವಂತೆ ಮಾಡು ಗಣೇಶ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತಿದ್ದಾಳೆ.

  ರಾಜಿಯನ್ನು ಹುಡುಕುತ್ತಿರುವ ಕರ್ಣ

  ರಾಜಿಯನ್ನು ಹುಡುಕುತ್ತಿರುವ ಕರ್ಣ

  ರಾಜಿ ಮನೆ ಬಿಟ್ಟು ದೇವಯ್ಯನ ಮನೆ ಸೇರಿದ್ದಾಳೆ. ಅವಳನ್ನು ನೋಡಿಕೊಳ್ಳುವುದಕ್ಕೆ, ಆಸರೆ ನೀಡುವುದಕ್ಕೆ ಅಂತ ಇರುವುದು ದೇವಯ್ಯ ಮಾತ್ರ. ಎಲ್ಲಾ ಕಡೆಯಲ್ಲೂ ಹುಡುಕಿ ಅಲೆದಲೆದು, ಕಡೆಗೆ ಕರ್ಣ ದೇವಯ್ಯನ ಮನೆಗೂ ಬಂದಿದ್ದ. ಆದರೆ ರಾಜಿಗೆ ಮಾತುಕೊಟ್ಟ ಕಾರಣ ರಾಜಿಯ ಸುಳಿವನ್ನು ಕರ್ಣನಿಗೆ ದೇವಯ್ಯ ನೀಡಲೇ ಇಲ್ಲ. ಬದಲಿಗೆ ಇಲ್ಲಿ ಇಲ್ಲವೆಂದೆ ಕಳುಹಿಸಿಬಿಟ್ಟ. ಈಗ ಕಾಡು ಮೇಡು ಎನ್ನದೆ ಹುಡುಕುತ್ತಿದ್ದಾನೆ. ಕರ್ಣನ ತಾಯಿ ಸರಸ್ವತಿ ಮಗನಿಗೆ ಸಮಾಧಾನದ ಮಾತುಗಳನ್ನು ಆಡಿದ್ದಾಳೆ. ಸಿಕ್ಕೆ ಸಿಗುತ್ತಾಳೆ ಎಂದಿದ್ದಾಳೆ.

  ವಿರಾಟನಿಗೆ ಕ್ಲಾಸ್

  ವಿರಾಟನಿಗೆ ಕ್ಲಾಸ್

  ರಾಜಿ ಅದೆಷ್ಟು ಮುಗ್ದಳು ಎಂದರೆ ಪ್ರೀತಿ ಕೊಟ್ಟವರಿಗೆ ಪ್ರೀತಿ ಕೊಡುತ್ತಾಳೆ. ಕೋಪ ಮಾಡಿಕೊಂಡವರ ಮುಂದೆ ಸಮಾಧಾನವಾಗಿ ಇರುತ್ತಾಳೆ. ನಿಂದಿಸಿದವರಿಗೂ ಒಂದು ಮಾತನಾಡುವುದಿಲ್ಲ. ಇಂಥ ಹುಡುಗಿಯನ್ನು ಇಷ್ಟಪಡುವವರು 90% ಆದರೆ ದ್ವೇಷ ಮಾಡುವವರು ಇದ್ದಾರೆ. ಅದರಲ್ಲಿ ವಿರಾಟ ಮೊದಲಿಗ. ರಾಜಿ ದೇವಯ್ಯ ಮನೆಯಲ್ಲಿ ಇದ್ದಾಳೆ ಎಂಬುದನ್ನು ತಿಳಿದು ಅಲ್ಲಿಗೂ ಬಂದು ತೊಂದರೆ ಕೊಡುತ್ತಿದ್ದಾನೆ. ಬಚ್ಚಿಟ್ಟುಕೊಂಡಿದ್ದ ರಾಜಿಯನ್ನು ಹೊರತರಲು ದೇವಯ್ಯನ ಪ್ರಾಣದ ಜೊತೆಗೆ ಆಟವಾಡಿದ್ದಾನೆ. ಬಾರದೆ ಹೋದಲ್ಲಿ ದೇವಯ್ಯನ ಪ್ರಾಣವನ್ನು ತೆಗೆಯುವುದಾಗಿ ಅಬ್ಬರಿಸಿದ್ದಾನೆ. ದೇವಯ್ಯನಿಗಾಗಿ ಹೊರಗೆ ಬಂದ ರಾಜಿ, ವಿರಾಟನಿಗೆ ಪ್ರಾಣ ಬಾಯಿಗೆ ಬರುವಂತೆ ಮಾಡಿದ್ದಾಳೆ. ನನ್ನ ಜೀವನ ಹಾಳು ಮಾಡಿದೆ, ನೆಮ್ಮದಿ ಹಾಳು ಮಾಡಿದ್ದೀಯಾ. ಆದರೆ ನಾನು ಇನ್ನು ಸುಮ್ಮನೆ ಕೂರುವುದಿಲ್ಲ. ಇಷ್ಟು ದಿನವೇ ಒಂದು ಲೆಕ್ಕ ಇನ್ನು ಮುಂದೆ ಬೇರೆಯದ್ದೇ ಲೆಕ್ಕ ಎಂದು ಪಕ್ಕದಲ್ಲಿಯೇ ಬಿದ್ದಿದ್ದ ಮಚ್ಚನ್ನು ತೆಗೆದು ವಿರಾಟನ ಕುತ್ತಿಗೆಗೆ ಇಟ್ಟಿದ್ದಾಳೆ.

  English summary
  Star suvarna serial raaji Written Update on September 7th episode. Here is the details about virat scared.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X