'ರಾಜಿ'ಯನ್ನು ಕಾಪಾಡಲು ಕರ್ಣನಿಂದ ಮಾತ್ರ ಸಾಧ್ಯ..!
ವಿರಾಟನ ಆರ್ಭಟ ಜಾಸ್ತಿಯಾಗಿದೆ. ಆತನ ಕೆಟ್ಟ ಚಾಳಿಯಿಂದಾಗಿ ರಾಜಿ ಅಪಾಯಕ್ಕೆ ಸಿಲುಕಿದ್ದಾಳೆ. ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಆದರೆ ಈಗ ರಾಜಿಯ ಪ್ರಾಣ ಕಾಪಾಡಬೇಕಾಗಿರುವುದು ಕರ್ಣನಿಂದ ಮಾತ್ರ ಸಾಧ್ಯ. ಯಾಕೆಂದರೆ ಸುತ್ತ ಮುತ್ತ ಇರುವ ಅಷ್ಟು ಜನರನ್ನು ವಿರಾಟ ತನ್ನ ರೌಡಿತನದಿಂದ ಹೆದರಿಸಿ ನಿಲ್ಲಿಸಿದ್ದಾನೆ. ರಾಜಿಯ ಪ್ರಾಣ ಹೋಗುತ್ತಿದ್ದರು ಯಾರು ಕೂಡ ಮುಂದೆ ಬಂದು ಕಾಪಾಡುವ ಧೈರ್ಯ ಮಾಡುತ್ತಿಲ್ಲ. ಹೀಗಾಗಿ ಕರ್ಣ ಬಂದು ರಾಜಿಯನ್ನು ಕಾಪಾಡಬೇಕಿದೆ.
ಅತ್ತ ಕರ್ಣ ರಾಜಿಯನ್ನು ಹುಡುಕಿ ಹುಡುಕಿ ಬೇಸತ್ತಿದ್ದನು. ಇನ್ನು ಸಿಗುವುದೇ ಇಲ್ಲವೇನೋ ಎಂಬ ನೋವಿನಲ್ಲಿದ್ದ. ಗಣೇಶನ ಮುಂದೆ ಕೂತು ಅಸಹಾಯಕನಂತೆ ಬೇಡಿಕೊಂಡಿದ್ದನು. ಕರ್ಣನ ಸ್ಥಿತಿ ಕಂಡ ಗಣೇಶ ಕೂಡ ಒಂದು ದಾರಿಯನ್ನು ನೀಡಿದ್ದಾನೆ. ಅದು ಕರ್ಣನಿಗೆ ರಾಜಿ ಇರುವ ಸ್ಥಳವನ್ನು ಕನ್ಫರ್ಮ್ ಮಾಡಿದೆ. ವಿರಾಟ ಆರ್ಭಟಿಸುವ ಮುನ್ನ ಕರ್ಣ ಅಲ್ಲಿ ಎಂಟ್ರಿ ಕೊಡಲಿದ್ದಾನೆ.

ರಾಜಿಯ ಕೈರುಚಿ ಮರೆಯುವುದಕ್ಕೆ ಹೇಗೆ ಸಾಧ್ಯ?
ಅಡುಗೆ ವಿಚಾರದಲ್ಲಿ ಎಲ್ಲರಿಗೂ ಕೈರುಚಿ ಬರುವುದಿಲ್ಲ. ಜೊತೆಗೆ ಒಬ್ಬರು ಕೊಟ್ಟ ಅದ್ಭುತ ಟೇಸ್ಟ್ ಅನ್ನು ಮತ್ತೊಬ್ಬರು ಮೀರಿಸುವುದಕ್ಕೂ ಆಗಲ್ಲ. ಆ ಟೇಸ್ಟ್ ಅನ್ನು ಅಳಿಸಿ ಹಾಕುವುದಕ್ಕೂ ಆಗುವುದಿಲ್ಲ. ಆ ವಿಚಾರದಲ್ಲಿ ರಾಜಿಯದ್ದು ಸೇಮ್. ಅವರ ಅತ್ತೆ ಸರಸ್ವತಿಗೆ ರಾಜಿ ಮಾಡಿದ ಅಡುಗೆ ತಿಂದರೆ ಆ ಟೇಸ್ಟ್ ಮರೆಯಲು ಸಾಧ್ಯವೇ ಇರುವುದಿಲ್ಲ. ಈಗ ದೇವಯ್ಯ ತಂದುಕೊಟ್ಟ ಪ್ರಸಾದದಲ್ಲೂ ರಾಜಿಯ ಕೈರುಚಿ ಅಡಗಿರುವುದು ಗೊತ್ತಾಗಿದೆ. ಸರಸ್ವತಿ ಅದನ್ನು ತಿಂದು ಇದು ರಾಜಿಯ ಕೈರುಚಿಯೇ ಆಗಿದೆ ಎಂದು ಹೇಳುತ್ತಿದ್ದದ್ದು ಕರ್ಣನ ಕಿವಿಗೆ ಬಿದ್ದಿದೆ. ಹಳೆಯದ್ದೆಲ್ಲವನ್ನು ಒಂದು ಕ್ಷಣ ಮೆಲುಕು ಹಾಕಿದಾಗ ರಾಜಿ ಎಲ್ಲಿದ್ದಾಳೆ ಎಂಬ ಸುಳಿವು ಸಿಕ್ಕಿದೆ.

ವಿರಾಟನ ಟಾರ್ಚರ್‌ನಿಂದ ನೊಂದ ರಾಜಿ
ರಾಜಿಗೆ ಮನೆಯಲ್ಲಿ ಇರುವ ಹಲವು ಮಂದಿ ಶತ್ರುಗಳೇ. ಆ ಶತ್ರುಗಳೆಲ್ಲಾ ವಿರಾಟನನ್ನು ಮುಂದೆ ಬಿಟ್ಟು ಇನ್ನಷ್ಟು ಹಿಂಸೆ ಕೊಡುತ್ತಿದ್ದಾರೆ. ಈ ಹಿಂದೆ ಇದೇ ವಿರಾಟ, ರಾಜಿಗೆ ಆಲ್ಕೋಹಾಲ್ ಕುಡಿಸಿದ್ದ. ಅದನ್ನು ಪ್ರೂವ್ ಮಾಡಲು ಹೋಗಿ ಕರ್ಣ ಸೋತಿದ್ದ. ಈಗ ರಾಜಿ ಇರುವ ಜಾಗವನ್ನು ಕರ್ಣನಿಗಿಂತ ಮೊದಲೇ ಹೋಗಿ, ರಾದ್ಧಾಂತ ಸೃಷ್ಟಿಸಿದ್ದಾನೆ. ರಾಜಿಯನ್ನು ಪ್ರಾಣ ಭಯಕ್ಕೆ ದೂಡಿದ್ದಾನೆ.

ರಾಜಿ ರೌದ್ರವತಾರಕ್ಕೆ ಬೆಚ್ಚಿದ ವಿರಾಟ
ರಾಜಿ ನೋಡುವ ತನಕ ನೋಡಿದಳು. ಬಳಿಕ ನೆಲದಲ್ಲಿಯೇ ಬಿದ್ದಿದ್ದ ಮಚ್ಚು ಎತ್ತಿಕೊಂಡು ವಿರಾಟನಿಗೆ ಬೀಸಲು ಯತ್ನಿಸಿದಳು. ವಿರಾಟ ದಿಗ್ಬ್ರಾಂತನಾಗಿ ಭಯಗೊಂಡ. ಪ್ರಾಣ ಉಳಿಸಿಕೊಳ್ಳಲು ಅತ್ತ ಕಡೆ ಇತ್ತ ಕಡೆ ಓಡಾಡಿದ. ರಾಜಿಯನ್ನು ಮನವಿ ಮಾಡಿದ. ನೋಡು ರಾಜಿ ಅದೇನು ಆಟದ ಸಾಮಾನು ಅಲ್ಲ. ದಯವಿಟ್ಟು ಅದನ್ನು ಬಿಸಾಕು ಎಂದು ಅಂಗಲಾಚಿದ. ಅವನ ಸೈನಿಕರು ರಾಜಿ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಅವರ ಮೇಲೂ ಮಚ್ಚು ಬೀಸಿದಳು. ಆದರೆ ಯಾರಿಗೂ ಯಾವ ಪ್ರಾಣಪಾಯವೂ ಆಗಿಲ್ಲ.

ವಿರಾಟನ ಕಥೆ ಕರ್ಣನಿಂದ ಅಂತ್ಯ
ಕರ್ಣನಿಗೆ ರಾಜಿ, ದೇವಯ್ಯನ ಮನೆಯಲ್ಲಿಯೇ ಇದ್ದಾಳೆ ಎಂಬುದು ಖಚಿತವಾಗಿದೆ. ಹೀಗಾಗಿ ಅವಳನ್ನು ಕರೆತರಲು ಹೊರಟಿದ್ದಾನೆ. ಇತ್ತ ಕಡೆ ವಿರಾಟ, ರಾಜಿಯನ್ನು ಮತ್ತಷ್ಟು ಹಿಂಸಿಸುತ್ತಿದ್ದಾನೆ. ರಾಜಿ ಮಚ್ಚು ಬೀಸುವಾಗ ಹಿಂದೆಯಿಂದ ಬಂದ ಒಬ್ಬ ರೌಡಿ ಅವಳ ಕೈಯ್ಯನ್ನು ಜೋರಾಗಿ ಹಿಡಿದು, ಮಚ್ಚನ್ನು ಕೆಳಗೆ ಬೀಳುವಂತೆ ಮಾಡಿದ್ದಾನೆ. ಮಚ್ಚು ಬೀಳುತ್ತಿದ್ದಂತೆ, ಅವಳನ್ನು ಎಲ್ಲಾ ರೌಡಿಗಳು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ವಿರಾಟ ಗಹಗಹಿಸಿ ನಗುತ್ತಾ, ಚಾಕು ತೆಗೆದು ಜೋರಾಗಿ ಚುಚ್ಚಲು ಹೋಗಿದ್ದಾನೆ. ಅಷ್ಟರಲ್ಲಿ ಕರ್ಣ ಅಲ್ಲಿಗೆ ಬರಲೇಬೇಕು. ಬಂದು ಕಾಪಾಡಲೇಬೇಕು. ವಿರಾಟನಿಕೆ ಕರ್ಣನಿಂದಲೇ ಅಂತ್ಯ ಸಿಗಬೇಕಿದೆ.


Click it and Unblock the Notifications











