ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?

ಸ್ಯಾಂಡಲ್ ವುಡ್ ನಲ್ಲಂತೂ ಸಾಲು ಸಾಲು ಮದುವೆಗಳು ನಡೆಯುತ್ತಿವೆ. ಕಳೆದ ವಾರವಷ್ಟೇ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿನ್ನೆಯಷ್ಟೇ ನಟಿ ಹಿತಾ ಚಂದ್ರಶೇಖರ್ ಮತ್ತು ನಟ ಕಿರಣ್ ಶ್ರೀನಿವಾಸ್ ವೈವಾಹಿಕ ಬದುಕಿಗೆ ಅಡಿಯಿಟ್ಟರು. ಈಗ ಇದೇ ಸಾಲಿಗೆ ಸೇರಲಿದ್ದಾರೆ ಕನ್ನಡ ನಟಿ ನಿತ್ಯ ರಾಮ್.

ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಸಪ್ತಪದಿ ತುಳಿಯಲು ದಿನಗಣನೆ ಶುರುವಾಗಿದೆ. ಇನ್ನೂ ಮೂರು ದಿನಗಳಲ್ಲಿ ನಿತ್ಯ ರಾಮ್ ವಿವಾಹ ಮಹೋತ್ಸವ ಜರುಗಲಿದೆ.

ಹೀಗಿರುವಾಗಲೇ, ನಟಿ ನಿತ್ಯ ರಾಮ್ ನಿಶ್ಚಿತಾರ್ಥ ನೆರವೇರಿದೆ. ಆಸ್ಟ್ರೇಲಿಯಾದ ಉದ್ಯಮಿಯ ಕೈಬೆರಳಿಗೆ ನಿತ್ಯ ರಾಮ್ ಉಂಗುರ ತೊಡಿಸಿದ್ದಾರೆ. ಹಾಗಾದ್ರೆ, ನಿತ್ಯ ರಾಮ್ ಕೈಹಿಡಿಯುವ ಹುಡುಗ ಯಾರು.? ಹೇಗಿದ್ದಾರೆ.? ನೀವೇ ನೋಡಿ...

ಸದ್ದಿಲ್ಲದೇ ನೆರವೇರಿದೆ ನಿತ್ಯ ರಾಮ್ ನಿಶ್ಚಿತಾರ್ಥ

ಸದ್ದಿಲ್ಲದೇ ನೆರವೇರಿದೆ ನಿತ್ಯ ರಾಮ್ ನಿಶ್ಚಿತಾರ್ಥ

ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಮದುವೆ ನಡೆಯಲಿದೆ ಎಂದು ಕಳೆದ ತಿಂಗಳಿಂದ ಸುದ್ದಿ ಆಗುತ್ತಲೇ ಇತ್ತು. ಆದ್ರೀಗ, ಸದ್ದಿಲ್ಲದೆ ನಿತ್ಯ ರಾಮ್ ಎಂಗೇಜ್ ಮೆಂಟ್ ಮುಗಿದಿದೆ. ನವ ಜೋಡಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಹುಡುಗ ಯಾರು.?

ಹುಡುಗ ಯಾರು.?

ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಬಿಸಿನೆಸ್ ಮ್ಯಾನ್ ಜೊತೆಗೆ ನಿತ್ಯ ರಾಮ್ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಅಷ್ಟು ಬಿಟ್ಟರೆ, ಆ ಉದ್ಯಮಿಯ ಹೆಸರು, ಹಿನ್ನಲೆ ಬಗ್ಗೆ ನಿತ್ಯ ರಾಮ್ ಕುಟುಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಸಡಗರದಲ್ಲಿ ನವ ಜೋಡಿ

ಸಡಗರದಲ್ಲಿ ನವ ಜೋಡಿ

ನಿಶ್ಚಿತಾರ್ಥ ಸಮಾರಂಭಕ್ಕೆ ಹಳದಿ ಬಣ್ಣದ ಸೀರೆಯಲ್ಲಿ ನಿತ್ಯ ರಾಮ್ ಕಂಗೊಳಿಸಿದರೆ, ಪೀಚ್ ಕಲರ್ ಕುರ್ತಾದಲ್ಲಿ ನಿತ್ಯ ರಾಮ್ ಭಾವಿ ಪತಿ ಮಿಂಚಿದರು. ಉಂಗುರ ಬದಲಾಯಿಸಿಕೊಂಡ ಫೋಟೋಗಳನ್ನ ನಿತ್ಯ ರಾಮ್ ಇನ್ಸ್ಟಾಗ್ರಾಮ್ ನಲ್ಲಿ ಖುಷಿಯಿಂದ ಶೇರ್ ಮಾಡಿಕೊಂಡಿದ್ದಾರೆ.

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿರುವ ನಟಿ

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿರುವ ನಟಿ

ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ನಿತ್ಯ ರಾಮ್. 'ಬೆಂಕಿಯಲ್ಲಿ ಅರಳಿದ ಹೂವು', 'ಕರ್ಪೂರದ ಗೊಂಬೆ', 'ರಾಜಕುಮಾರಿ', 'ಎರಡು ಕನಸು', ನಂದಿನಿ' ಧಾರಾವಾಹಿಗಳಲ್ಲಿ ನಿತ್ಯ ರಾಮ್ ನಟಿಸಿದ್ದಾರೆ. ಬರೀ ಕನ್ನಡ ಮಾತ್ರ ಅಲ್ಲ.. ತೆಲುಗಿನ 'ಮುದ್ದು ಬಿಡ್ಡ', ತಮಿಳಿನ 'ಅವಳ್' ಧಾರಾವಾಹಿಗಳಲ್ಲೂ ನಿತ್ಯ ಮಿಂಚಿದ್ದಾರೆ. ಕನ್ನಡದ 'ಮುದ್ದು ಮನಸು' ಸಿನಿಮಾದಲ್ಲಿ ನಿತ್ಯ ರಾಮ್ ಅಭಿನಯಿಸಿದ್ದಾರೆ.

More from Filmibeat

English summary
Kannada Actress Rachita Ram sister, TV Actress Nithya Ram got engaged.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X