ಮದುವೆ ಆಗಿ ಆಸ್ಟ್ರೇಲಿಯಾದಲ್ಲಿದ್ದ ರಚ್ಚು ಸಹೋದರಿ ಕಮ್‌ಬ್ಯಾಕ್: ತಮಿಳಿನಲ್ಲಿ 'ಅಣ್ಣ' ಎಂದ ನಿತ್ಯಾ ರಾಮ್!

By ಅನಿತಾ ಬನಾರಿ

ಡಿಪಂಲ್ ಕ್ವೀನ್ ರಚಿತಾ ರಾಮ್ ಹಾಗೂ ಅವರ ಸಹೋದರಿ ನಿತ್ಯಾ ರಾಮ್ ಇಬ್ಬರೂ ಕನ್ನಡಿಗರಿಗೆ ತುಂಬಾನೇ ಚಿರಪರಿಚಿರು. ತಂಗಿ ರಚಿತಾ ರಾಮ್ ಸಿನಿಮಾದಲ್ಲಿ ಫೇಮಸ್ ಆಗಿದ್ರೆ, ಅಕ್ಕ ನಿತ್ಯಾ ರಾಮ್ ಕಿರುತೆರೆಯಲ್ಲಿ ಫೇಮಸ್.

ಕನ್ನಡವಷ್ಟೇ ಅಲ್ಲದೇ ತೆಲುಗು ಹಾಗೂ ತಮಿಳು ಭಾಷೆಯ ಧಾರಾವಾಹಿಗಳಲ್ಲೂ ನಿತ್ಯಾ ರಾಮ್ ನಟಿಸಿ ಜನಪ್ರಿಯರಾಗಿದ್ದರು. ಆದರೆ, ಮದುವೆ ಬಳಿಕ ನಿತ್ಯಾ ರಾಮ್ ನಟನೆಯಿಂದ ದೂರನೇ ಉಳಿದಿದ್ದರು. ಆದ್ರೀಗ ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

Rachita Ram sister Nithya Ram returned acting after four years with Tamil serial Anna

ಹೌದು! ನಿತ್ಯ ರಾಮ್ ಅನ್ನೋ ಹೆಸರು ದಕ್ಷಿಣ ಭಾರತಕ್ಕೇ ಗೊತ್ತು. ಕನ್ನಡದ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಿತ್ಯಾ ರಾಮ್ ಮದುವೆಯ ನಂತರ ನಟನೆಯಿಂದ ದೂರ ಉಳಿದಿದ್ದರು.

ನಿತ್ಯಾ ರಾಮ್ ಉದ್ಯಮಿ ಗೌತಮ್ ಜೊತೆ ಸಪ್ತಪದಿ ತುಳಿದಿದ್ದರು. ಪತಿ ಆಸ್ಟ್ರೇಲಿಯದಲ್ಲಿ ನೆಲೆಸಿದ್ದರಿಂದ ಅಲ್ಲಿಯೇ ವಾಸವಿದ್ದರು. ಕಳೆದ ನಾಲ್ಕು ವರ್ಷದಿಂದ ಅಲ್ಲೇ ಇದ್ದಿದ್ದರಿಂದ ನಟನೆಯಿಂದ ದೂರವೇ ಉಳಿದಿದ್ದರು. ಇದೀಗ ಆಕೆ ಮತ್ತೆ ಭಾರತಕ್ಕೆ ವಾಪಾಸಾಗಿದ್ದು ನಟನೆ ಕಡೆ ಮುಖ ಮಾಡಿರೋದು ಬಹಳಷ್ಟು ಜನರಿಗೆ ಸಂತಸ ತಂದಿದೆ.

ತಮಿಳು ಧಾರಾವಾಹಿ 'ಅಣ್ಣ'ದಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆ ನಟನೆಗೆ ಮರಳಿದ್ದಕ್ಕೆ ಈಕೆ ಸಕತ್ ಖುಷಿಯಲ್ಲಿದ್ದಾರೆ. ನಟಿ ನಿತ್ಯಾ ರಾಮ್ ವೈಯಕ್ತಿಕ ಕಾರಣಗಳಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ನಟನೆಯಿಂದ ದೂರವಿದ್ದರು. ನಾಲ್ಕು ವರ್ಷದ ಬ್ರೇಕ್‌ನ ನಂತರ ಈಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.

Rachita Ram sister Nithya Ram returned acting after four years with Tamil serial Anna

ನಾಲ್ಕು ವರ್ಷದ ನಂತರ ಮತ್ತೆ ಬಣ್ಣ ಹಚ್ಚಿರುವ ನಿತ್ಯಾ ರಾಮ್‌ಗೆ ಮೊದಮೊದಲಿಗೆ ಭಯವಾಗಿತ್ತಂತೆ. ನಾಲ್ಕು ವರ್ಷ ತುಂಬಾ ದೊಡ್ಡ ಗ್ಯಾಪ್ ಎಂದೆನಿಸಿತ್ತು. ಒಮ್ಮೆ ಕ್ಯಾಮೆರಾ ರೋಲ್ ಆಗಲು ಶುರುವಾದ ಮೇಲೆ ಕಳೆದುಹೋದ ಕಾನ್ಫಿಡೆನ್ಸ್ ಮತ್ತೆ ವಾಪಸ್ ಬಂದಿದೆ. 'ಅಣ್ಣ' ಧಾರಾವಾಹಿಯ ಪ್ರೋಮೊ ರಿಲೀಸ್ ಆಗುತ್ತಿದ್ದಂತೆ ನಿತ್ಯಾ ರಾಮ್ ಉತ್ಸಾಹವೆಲ್ಲ ಮರಳಿ ಬಂದಿದೆ.

ನಿತ್ಯಾರಾಮ್ ಆಸ್ಟ್ರೇಲಿಯಾದಿಂದ ವಾಪಸ್ ಬಂದಿದ್ದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಈಗ ಮತ್ತೆ ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ತನ್ನ ನಟನೆಯ ಮೂಲಕ ಜನರನ್ನು ಗೆಲ್ಲುವುದಕ್ಕೆ ಕಾಯುತ್ತಿದ್ದಾರೆ. ಇತ್ತ ನಿತ್ಯಾ ರಾಮ್ ಅವರ ತಂಗಿ ಕನ್ನಡದ ಜನಪ್ರಿಯ ನಟಿ ರಚಿತಾ ರಾಮ್ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ರಚಿತಾ ರಾಮ್ ಹಲವಾರು ಪ್ರಾಜೆಕ್ಟ್‌ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ತಮ್ಮನ್ನು ತಾವು ಬ್ಯುಸಿ ಇಟ್ಟುಕೊಂಡಿದ್ದಾರೆ. ಆಕೆಯು ಅಕ್ಕನಿಗೆ ಫಿಲ್ಮ್ ಇಂಡಸ್ಟ್ರಿಗೆ ಕರೆತರಲು ಯತ್ನಿಸುತ್ತಿದ್ದಾರ. ಇದೀಗ ಅಕ್ಕ ತಂಗಿ ಇಬ್ಬರೂ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವುದು ಅವರ ಅಪ್ಪಟ ಅಭಿಮಾನಿಗಳಿಗೆ ಸಂತಸ ತಂದಿದೆ.

More from Filmibeat

English summary
Rachita Ram's sister Nithya Ram returned to acting after four years with the Tamil serial Anna, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X