ರವಿಚಂದ್ರನ್ ಬಳಿಕ ಈಗ ರಚಿತಾ ರಾಮ್ ಕಿಡ್ನ್ಯಾಪ್!
ನಟಿ ರಚಿತಾ ರಾಮ್ ಅಪಹರಣವಾಗಿದ್ದಾರೆ! ಕೆಲವು ದಿನಗಳ ಹಿಂದಷ್ಟೆ ನಟ ರವಿಚಂದ್ರನ್ ಅಪಹರಣವಾಗಿದ್ದರು ಈಗ ರಚಿತಾ ರಾಮ್ ಸರದಿ. ರವಿಚಂದ್ರನ್ ಅವರನ್ನು ಅಪಹರಣ ಮಾಡಿದ್ದ ಅದೇ ಮಕ್ಕಳ ಗ್ಯಾಂಗ್ ಈಗ ರಚಿತಾ ರಾಮ್ ಅವರನ್ನೂ ಅಪಹರಿಸಿದೆ.
ರಚಿತಾ ರಾಮ್ ಎಂದಿನಂತೆ ತಮ್ಮ ಕಾರಿಗೆ ಹತ್ತಿದಾಗ ಹಿಂದಿನಿ ಸೀಟಿನಲ್ಲಿ ಕೂತಿದ್ದ ಚೋಟು ಅಪಹರಣಕಾರರು ರಚಿತಾ ರಾಮ್ ತಲೆಗೆ ಬಂದೂಕಿಟ್ಟು ಅಪಹರಣ ಮಾಡಿದ್ದಾರೆ. ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ನೋಡಿದರೆ ಎಲ್ಲರೂ ಮಕ್ಕಳೇ!
ರಚಿತಾ ರಾಮ್ ಅನ್ನು ಬಲವಂತವಾಗಿ ವಿಮಾನ ಹತ್ತುವಂತೆ ಮಾಡಲಾಗಿದೆ. ವಿಮಾನ ಹತ್ತಿದ ರಚಿತಾ ರಾಮ್‌ಗೆ ಅಲ್ಲೂ ಶಾಕ್! ವಿಮಾನದಲ್ಲೂ ಚಿತ್ರ ವಿಚಿತ್ರ ವೇಷ ಧರಿಸಿದ ಮಕ್ಕಳೇ ಇದ್ದಾರೆ. ಅದೇ ವಿಮಾನದಲ್ಲಿ ನಟ ರವಿಚಂದ್ರನ್ ಸಹ ಕೂತಿದ್ದಾರೆ ಅದೂ ನಿರಾಳವಾಗಿ ಪೇಪರ್ ಓದುತ್ತಾ.

ಈ ಅಪಹರಣದ ಹಿಂದೆ ಇರುವುದು ಮಾಸ್ಟರ್ ಆನಂದ್ ಎಂಬುದು ರವಿಚಂದ್ರನ್ ಅವರಿಂದ ರಚಿತಾ ರಾಮ್‌ಗೆ ತಿಳಿದು ಬಂದಿದೆ. ಪೈಲೆಟ್ ವೇಷದಲ್ಲಿದ್ದ ಮಾಸ್ಟರ್ ಆನಂದ್, ಈ ಅಪಹರಣಗಳ ಹಿಂದಿನ ನಿಜವಾದ ಮಾಸ್ಟರ್ ಮೈಂಡ್ ನಾನಲ್ಲ ಅವರದ್ದು ಎಂದಾಗ ಅಲ್ಲಿ ಕಾಣುತ್ತಾರೆ ಹಿರಿಯ ನಟಿ ಲಕ್ಷ್ಮಿ!
ನಟಿ ಲಕ್ಷ್ಮಿಯೇ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರನ್ನು ಮಕ್ಕಳ ಕೈಯಿಂದ ಅಪಹರಣ ಮಾಡಿಸಿ ವಿಮಾನದಲ್ಲಿ ಕೊಂಡೊಯ್ಯುತ್ತಿದ್ದಾರೆ. ಹಾಗೆಂದು ಅವರನ್ನು ಅಜ್ಞಾತ ಸ್ಥಳಕ್ಕೇನೂ ಕೊಂಡೊಯ್ಯತ್ತಿಲ್ಲ, ಬದಲಿಗೆ ಎಲ್ಲರ ಮನೆ-ಮನೆಗಳಿಗೆ ತಲುಪಿಸಲೆಂದೇ ಅವರ ಅಪಹರಣವಾಗಿದೆ!

ಆಗಿರುವುದಿಷ್ಟೆ, ಜೀ ಕನ್ನಡದಲ್ಲಿ ಡ್ರಾಮಾ ಜೂನಿಯರ್ಸ್ ಸೀಸನ್ ನಾಲ್ಕು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ರವಿಚಂದ್ರನ್, ರಚಿತಾ ರಾಮ್ ಇಬ್ಬರೂ ಅದರಲ್ಲಿ ಜಡ್ಜ್‌ಗಳಾಗಿ ಪಾಲ್ಗೊಳ್ಳಲಿದ್ದಾರೆ. ಅದೇ ಕಾರ್ಯಕ್ರಮದ ಪ್ರಚಾರದ ಭಾಗವಾಗಿ ಜಾಹೀರಾತುಗಳನ್ನು ಚಾನೆಲ್ ಪ್ರಸಾರ ಮಾಡುತ್ತಿದ್ದು, ಜಾಹೀರಾತಿನಲ್ಲಿ ಮಕ್ಕಳೆ ರಚಿತಾ ರಾಮ್ ಅವರನ್ನು ಅಪಹರಣ ಮಾಡುವ ಕ್ರಿಯೇಟಿವ್ ದೃಶ್ಯಗಳನ್ನು ಸಂಯೋಜಿಸಲಾಗಿದೆ.
ಈ ಬಾರಿಯ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಅನ್ನು ನಟಿ ಲಕ್ಷ್ಮಿ ಜೊತೆಗೆ ರವಿಚಂದ್ರನ್, ರಚಿತಾ ರಾಮ್ ಜಡ್ಜ್ ಮಾಡಲಿದ್ದಾರೆ. ಈ ಹಿಂದಿನ ಶೋಗಳು ಬಹಳವೇ ಜನಪ್ರಿಯವಾಗಿದ್ದವು. ಇದೀಗ ನಾಲ್ಕನೇ ಸೀಸನ್ ನಡೆಯಲಿದ್ದು, ಅದಕ್ಕಾಗಿ ಭರ್ಜರಿಯಾಗಿಯೇ ತಯಾರಾಗಿದೆ ಜೀ ಕನ್ನಡ. 19ನೇ ಮಾರ್ಚ್‌ನಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.


Click it and Unblock the Notifications











