ನಿಶ್ಚಿತಾರ್ಥ ಮಾಡಿಕೊಂಡ 'ರಾಧಾ ಕಲ್ಯಾಣ' ಕುವರಿ ರಾಧಿಕಾ ರಾವ್

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪೈಕಿ 'ರಾಧಾ ಕಲ್ಯಾಣ' ಕೂಡ ಒಂದು. ಜೀ ಕನ್ನಡ ವಾಹಿನಿಗೆ ಹೆಚ್ಚು ಟಿ.ಆರ್.ಪಿ ತಂದು ಕೊಡುತ್ತಿರುವ 'ರಾಧಾ ಕಲ್ಯಾಣ' ಸೀರಿಯಲ್ ನಲ್ಲಿ ರಾಧಾ ಆಗಿ ನಟಿಸುತ್ತಿರುವ ರಾಧಿಕಾ ರಾವ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

'ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ರಾಧಿಕಾ ರಾವ್ ಬಹುಬೇಗ ಫೇಮಸ್ ಆದರು. ಮನೆಮನಗಳಲ್ಲಿ 'ಮಂಗಳೂರು ಹುಡ್ಗಿ ಅಮೂಲ್ಯ' ಆಗಿಯೇ ಗುರುತಿಸಿಕೊಂಡಿರುವ ರಾಧಿಕಾ ರಾವ್ ಸದ್ಯ ಪ್ರೀತಿಸಿದ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಮದುವೆ ನಡೆಯಲಿದೆ.

ಹಾಗಾದ್ರೆ, ರಾಧಿಕಾ ರಾವ್ ಮದುವೆ ಆಗುತ್ತಿರುವ ಹುಡುಗ ಯಾರು.? ಆತನ ಹಿನ್ನಲೆ ಏನು ಅಂತೀರಾ.? ಸಂಪೂರ್ಣ ವಿವರ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

ಹೇಗಿದೆ ಜೋಡಿ.?

ಹೇಗಿದೆ ಜೋಡಿ.?

ಇತ್ತೀಚೆಗಷ್ಟೇ ನಟಿ ರಾಧಿಕಾ ರಾವ್ ಮತ್ತು ಆಕರ್ಷ್ ಭಟ್ ರವರ ನಿಶ್ಚಿತಾರ್ಥ ನಡೆಯಿತು. ಮೂಲತಃ ಮಂಗಳೂರಿನವರಾದ ಆಕರ್ಷ್ ಭಟ್ ಮ್ಯಾಜಿಷಿಯನ್. ಕಾಮನ್ ಫ್ರೆಂಡ್ ಮೂಲಕ ಭೇಟಿಯಾದ ಇವರಿಬ್ಬರು ಇದೀಗ ದಂಪತಿಯಾಗಲು ಸಜ್ಜಾಗಿದ್ದಾರೆ.

ಪ್ರಪೋಸ್ ಮಾಡಿದ್ದು ಯಾರು.?

ಪ್ರಪೋಸ್ ಮಾಡಿದ್ದು ಯಾರು.?

ಹಾಗ್ನೋಡಿದ್ರೆ, ರಾಧಿಕಾ ಮತ್ತು ಆಕರ್ಷ್ ಭೇಟಿ ಆಗಿದ್ದು ಕೆಲವೇ ತಿಂಗಳುಗಳ ಹಿಂದೆಯಷ್ಟೇ. ಕಳೆದ ಮಾರ್ಚ್ ನಲ್ಲಿ ಫ್ರೆಂಡ್ ಮೂಲಕ ರಾಧಿಕಾ ರನ್ನ ಭೇಟಿಯಾದ ಆಕರ್ಷ್ ಜುಲೈನಲ್ಲಿ ಪ್ರಪೋಸ್ ಮಾಡಿದ್ದಾರೆ. ಇದೀಗ ಇಬ್ಬರು ಕುಟುಂಬದವರನ್ನು ಒಪ್ಪಿಸಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಮದುವೆ ಯಾವಾಗ.?

ಮದುವೆ ಯಾವಾಗ.?

ಸದ್ಯಕ್ಕೆ ಧಾರಾವಾಹಿಯಲ್ಲಿ ಬಿಜಿಯಾಗಿರುವ ರಾಧಿಕಾ ರಾವ್ ಮುಂದಿನ ವರ್ಷದ ಮಾರ್ಚ್ ನಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಮಂಗಳೂರಿನಲ್ಲೇ ರಾಧಿಕಾ-ಆಕರ್ಷ್ ಮದುವೆ ನಡೆಯಲಿದೆ.

ಶುಭಾಶಯಗಳ ಮಹಾಪೂರ

ಶುಭಾಶಯಗಳ ಮಹಾಪೂರ

ನವ ಜೋಡಿ ರಾಧಿಕಾ ರಾವ್-ಆಕರ್ಷ್ ಭಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಮುದ್ದು ಮುಖದ ಚೆಲುವೆ ರಾಧಿಕಾ ರಾವ್ ಗೆ ಕ್ಲೀನ್ ಬೌಲ್ಡ್ ಆಗಿದ್ದ ಹುಡುಗರಿಗೆ ಮಾತ್ರ ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್ ಆಗಿದೆ.

More from Filmibeat

English summary
Kannada Serial Radha Kalyana Actress Radhika Rao gets engaged to Aakarsh Bhat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X