Chaithra Rai : ತೆರೆ ಮರೆಗೆ ಸರಿದಿದ್ದು ಯಾಕೆ ಕಿರುತೆರೆ ಜನಪ್ರಿಯ ನಟಿ ಚೈತ್ರಾ ರೈ!

By ಪೂರ್ವ

ಚೈತ್ರಾ ರೈ ಅಂದರೆ, ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯರಾದ ಚೈತ್ರಾ ರೈ ಬಳಿಕ ತೆಲುಗಿನಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಹಾಗೆಯೇ ಪ್ರಜ್ವಲ್ ದೇವರಾಜ್ ಸಿನಿಮಾದಲ್ಲಿ ಕೂಡ ಚೈತ್ರಾ ರೈ ಬಣ್ಣ ಹಚ್ಚಿದ್ದಾರೆ. ತೆಲುಗು ರಂಗದಲ್ಲಿ ಸಾಕಷ್ಟು ಸಕ್ರಿಯವಾಗಿದ್ದ ನಟಿ ಇದೀಗ ಕಾಣೆಯಾಗಿದ್ದಾರೆ. ವರ್ಷಗಳಿಂದ ಚೈತ್ರಾ ನಟನೆಯಿಂದ ದೂರವಿದ್ದಾರೆ. ವೈಯಕ್ತಿಕ ಕಾರಣಕ್ಕೆ ಅವರು ತೆಲುಗು ಧಾರಾವಾಹಿ ಬಿಟ್ಟಿದ್ದರು. 'ರಾಧಾ ಕಲ್ಯಾಣ' ನಂತರದಲ್ಲಿ ಚೈತ್ರಾ ತೆಲುಗು ಕಿರುತೆರೆಗೆ ಹಾರಿದರು. ಅಲ್ಲಿ ಅವರು ಒಂದಾದ ಮೇಲೆ ಒಂದರಂತೆ ಧಾರಾವಾಹಿ ಮಾಡಿದ್ದಾರೆ

ಕಿರುತೆರೆಯಲ್ಲಿ ಚೈತ್ರಾಗೆ ದೊಡ್ಡ ಹೆಸರಿದೆ

ಕಿರುತೆರೆಯಲ್ಲಿ ಚೈತ್ರಾಗೆ ದೊಡ್ಡ ಹೆಸರಿದೆ

ತೆಲುಗು ಕಿರುತೆರೆಯಲ್ಲಿ ಚೈತ್ರಾಗೆ ದೊಡ್ಡ ಹೆಸರು ಮಾಡಿದ್ದಾರೆ. ಅಲ್ಲಿ ಚೈತ್ರಾ ರೈಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಸೃಷ್ಟಿ ಮಾಡಿಕೊಂಡಿದ್ದಾರೆ. ಕನ್ನಡದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ವಿಶಾಖ ಪಾತ್ರ ಮಾಡಿದ್ದ ನಟಿ ಚೈತ್ರಾ ರೈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚೈತ್ರಾ ರೈ ಮದುವೆಯಾದ ಬಳಿಕ ಕಿರುತೆರೆಯಲ್ಲಿ ಕಾಣಿಸುತ್ತಿಲ್ಲ. ಇದೀಗ ಅವರು ಮಗಳ ಜೊತೆ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಚೈತ್ರಾ

ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಚೈತ್ರಾ

2021 ಆಗಸ್ಟ್ 16 ರಂದು ಚೈತ್ರಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ಕುರಿತು ಸ್ವತಃ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದರು. ಚೈತ್ರಾ ರೈ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಗಿ ಆಕ್ಟಿವ್ ಆಗಿದ್ದಾರೆ. ಮಗಳ ಫೋಟೊ ಹಾಗೆ ವಿಡಿಯೋಗಳನ್ನೂ ನಟಿ ಚೈತ್ರಾ ಶೇರ್ ಮಾಡುತ್ತಿರುತ್ತಾರೆ. ಇದೀಗ ಮಗಳನ್ನು ತಬ್ಬಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಈ ವಿಡಿಯೋಗೆ 44,047 ಜನ ಲೈಕ್ ನೀಡಿದ್ದಾರೆ. 'ರಾಧಾ ಕಲ್ಯಾಣ'ದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದ ಈಕೆ ಎಲ್ಲರ ಮನ ಗೆದ್ದಿದ್ದಾರೆ. ಚೈತ್ರಾ ರೈ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯತ್ತ ಅಷ್ಟೊಂದು ಗಮನ ಹರಿಸದ ನಟಿ ತೆಲುಗು ಕಿರುತೆರೆಗೆ ಎಂಟ್ರಿ ನೀಡಿದ್ದರು.

ವೈಯಕ್ತಿಕ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ

ವೈಯಕ್ತಿಕ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ

ಹಾಗಾದ್ರೆ ಮದುವೆಯಾದ ಬಳಿಕ ನಟನಾ ಲೋಕಕ್ಕೆ ಗುಡ್ ಬೈ ಹೇಳಿದ್ರಾ? ಮದುವೆಯಾದ ಬಳಿಕ ಎಲ್ಲಾ ನಟಿಯರು ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸುತ್ತಿದ್ದಾರೆ. ಹಾಗೆಯೇ ನಟಿ ಚೈತ್ರಾ ರೈ ಕೂಡ ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಹೆಚ್ಚು ಉತ್ಸಾಹದಿಂದ ಇದ್ದಾರೆ. ಹಾಗೆಯೇ ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ ಈ ನಟಿ. ಈ ನಟಿಯ ಬೇಬಿ ಬಂಪ್ ವಿಡಿಯೋ ,ಫೋಟೊಸ್, ಹಾಗೆನೇ ಸೀಮಂತದ ಫೋಟೊಗಳು, ತಮ್ಮ ಮುದ್ದು ಮಗಳ ಫೋಟೊಗಳು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

ಕಂದಮ್ಮನ ಜೊತೆ ಚೈತ್ರಾ ರೈ ಫುಲ್ ಖುಷ್

ಕಂದಮ್ಮನ ಜೊತೆ ಚೈತ್ರಾ ರೈ ಫುಲ್ ಖುಷ್

ಫೋಟೊಗಳಿಗೆ ಸಖತ್ ಲೈಕ್ಸ್‌ ಬರುತ್ತಿದ್ದು ಪುಟ್ಟ ಕಂದಮ್ಮನ ಜೊತೆ ಚೈತ್ರಾ ರೈ ಫುಲ್ ಖುಷಿಯಾಗಿದ್ದಾರೆ. 'ರಾಧಾ ಕಲ್ಯಾಣ' ಧಾರಾವಾಹಿ ಬಳಿಕ ಕನ್ನಡ ಕಿರುತೆರೆಯಲ್ಲಿ ಈ ನಟಿ ಖಳ ನಾಯಕಿಯಾಗಿ ಪರದೆ ಹಂಚಿಕೊಂಡಿದ್ದರು. ಬಳಿಕ ಕನ್ನಡ ಕಿರುತೆರೆಯಿಂದ ದೂರ ಸರಿದಿದ್ದಾರೆ. ಇನ್ನೂ ಕನ್ನಡ ಕಿರುತೆರೆಗೆ ಯಾವಾಗ ಕಮ್‌ಬ್ಯಾಕ್ ಮಾಡಲಿದ್ದಾರೆ ಈ ನಟಿ. ಇನ್ನೂ ಕನ್ನಡ ಕಿರುತೆರೆಗೆ ಯಾವಾಗ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಈಗ ತಮ್ಮ ಪುಟ್ಟ ಮಗುವಿನ ಆರೈಕೆ ಮಾಡುತ್ತಿದ್ದಾರೆ.

More from Filmibeat

English summary
Radha kalyana chaitr Rai intresting life style details. here is more information
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X