ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ರಾಧಿಕಾ ರಾವ್

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಒಂದೇ ಹೆಸರಿನ ಧಾರಾವಾಹಿಗಳು ರಿಪೀಟ್ ಆಗುತ್ತಲೇ ಇರುತ್ತವೆ. 'ರಾಧಾ ಕಲ್ಯಾಣ', 'ರಾಧಾ ರಮಣ', 'ರಾಧಾ ಕೃಷ್ಣ', 'ನನ್ನರಸಿ ರಾಧೆ' ಹೀಗೆ ರಾಧಾ ಎಂಬ ಹೆಸರಿನಲ್ಲಿ ಸಾಕಷ್ಟು ಧಾರಾವಾಹಿಗಳು ಕಿರುತೆರೆಯಲ್ಲಿ ಪ್ರಸಾರಗೊಂಡಿವೆ. 'ಸೀತಾ ರಾಮ', 'ಜಾನಕಿ ರಾಮ' ಹೀಗೆ ಕೆಲವು ಹೆಸರುಗಳಲ್ಲಿ ಹಲವು ಧಾರಾವಾಹಿಗಳು ಮೂಡಿ ಬಂದಿವೆ. ಇಂತಹ ಧಾರಾವಾಹಿಗಳು ಕ್ಲಿಕ್ ಕೂಡ ಆಗಿದೆ.

ಎಷ್ಟೇ ವರ್ಷ ಕಳೆದರೂ ಈ ಧಾರಾವಾಹಿಗಳು, ಇದರಲ್ಲಿ ನಟಿಸಿದವರನ್ನು ಕೂಡ ಪ್ರೇಕ್ಷಕರು ಮರೆಯುವುದಿಲ್ಲ. ಇದೀಗ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಿದ ನಟಿಯ ಹೊಸ ಅಪ್ ಡೇಟ್ ಬಂದಿದೆ. ಹೌದು.. ಧಾರಾವಾಹಿಗಳು ಎಂದರೆ, ಅದರಲ್ಲಿ ಸಾಕಷ್ಟು ನಟ - ನಟಿಯರು ನಟಿಸಿರುತ್ತಾರೆ. ಇವರನ್ನೆಲ್ಲಾ ಪ್ರೇಕ್ಷಕರು ಬಹಳ ವರ್ಷಗಳ ಕಾಲ ಮರೆಯುವುದೇ ಇಲ್ಲ. 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿ ಕೃತ್ತಿಕಾ ರವೀಂದ್ರ ಕೂಡ ನಟಿಸಿದ್ದಾರೆ.

Radha Kalyana Fame Radhika rao expecting first child with Husband Aakarsh Bhat

9 ವರ್ಷಗಳ ಹಿಂದೆ ಮೂಡಿ ಬಂದಿದ್ದ ಈ ಧಾರಾವಾಹಿಯಲ್ಲಿ ಕೃತಿಕಾ ಅವರ ಜೋಡಿಯಾಗಿ ನಟ ಚಂದನ್ ಅಭಿನಯಿಸಿದ್ದರು. ಇಂದಿಗೂ ಕೃತಿಕಾ ಅವರನ್ನು ಜನ ರಾಧಾ ಎಂದೇ ಗುರುತಿಸುತ್ತಾರೆ. ಈ ಧಾರಾವಾಹಿ ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮೇಲೆ ಪರಿಣಾಮ ಬೀರಿತ್ತು. ಇದೀಗ ಈ ಧಾರಾವಾಹಿಯಲ್ಲಿ ನಟಿಸಿದ ನಟಿ ರಾಧಿಕಾ ರಾವ್ ಅವರ ಬಗ್ಗ ಹೊಸ ಸುದ್ದಿಯೊಂದು ಬಂದಿದೆ. 'ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ', 'ರಾಧಾ ಕಲ್ಯಾಣ' ಸೀರಿಯಲ್‌ಗಳ ಮೂಲಕ ಈಕೆ ಮನೆ ಮಾತಾಗಿದ್ದರು. ಇನ್ನು ಸೃಜನ್‌ ಲೋಕೇಶ್ ಅವರ 'ಎಲ್ಲಿದ್ದೆ ಇಲ್ಲಿ ತನಕ' ಎಂಬ ಸಿನಿಮಾದಲ್ಲೂ ನಟಿಸಿದ್ದರು.

ತುಳು ಕಿರುತೆರೆಯಲ್ಲೂ ಮಿಂಚಿದ್ದ ಈ ನಟಿ. ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕರಾವಳಿ ನಟಿ ರಾಧಿಕಾ ರಾವ್ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಅವರು 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಕರ್ಷ್ ಎಂಬುವರ ಜೊತೆಗೆ ಸಪ್ತಪದಿ ತುಳಿದ ಈ ಜೋಡಿ ಈಗ ಪ್ರಮೋಷನ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ. ರಾಧಿಕಾ ಮತ್ತು ಆಕರ್ಷ್ ಭಟ್ ಇಬ್ಬರೂ ಸ್ನೇಹಿತರಾಗಿದ್ದರು. ಬಳಿಕ ಪ್ರೀತಿಯ ಬಲೆಯಲ್ಲಿ ಬಿದ್ದು, ತೇಲಾಡಿದರು. ಇವರಿಬ್ಬರ ಮನೆಯಲ್ಲೂ ಇವರ ಪ್ರೀತಿ ವಿಚಾರವನ್ನು ತಿಳಿಸಿದರು. ಮನೆಯವರೆಲ್ಲಾ ಒಪ್ಪಿಕೊಂಡ ನಂತರ ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು.

Radha Kalyana Fame Radhika rao expecting first child with Husband Aakarsh Bhat

ಇಬ್ಬರೂ ಮದುವೆಯಾಗಿ ಈಗ ಮೂರು ವರ್ಷ ಕಳೆದಿದೆ. ಇದೀಗ ರಾಧಿಕಾ ರಾವ್‌ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ರಾಧಿಕಾ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಪತಿ ಆಕರ್ಷ್ ಅವರು ಭಟ್ ಇಂಟರ್‌ನ್ಯಾಷನಲ್ ಮ್ಯಾಜೀಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಆಕರ್ಷ್ ಅವರು ಕೂಡ ಮೂಲತಃ ಮಂಗಳೂರಿನವರು.

More from Filmibeat

English summary
Radha Kalyana Fame Radhika rao expecting first child with Husband Aakarsh Bhat. Here is Details about Radhika rao serial journey and personnel life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X