ರಾಧಾ ಕಲ್ಯಾಣ ಖ್ಯಾತಿಯ ಕೃತಿಕಾ ಬಗ್ಗೆ ನಿಮಗೆಷ್ಟು ಗೊತ್ತು?
ಕೃತಿಕಾ ರವೀಂದ್ರ ಸಿನಿಮಾ, ಹಾಗೂ ಕಿರುತೆರೆ ನಟಿಯಾಗಿ ಮಿಂಚಿದ್ದಾರೆ. ಇವರು "ರಾಧಾ ಕಲ್ಯಾಣ" ಎಂಬ ಧಾರವಾಹಿಯ ಮೂಲಕ ಜನಪ್ರಿಯರಾದವರು. 2015ರಲ್ಲಿ ನಡೆದ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ 5' ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕೃತಿಕಾ ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಆನಂದಪುರದ ರವೀಂದ್ರ ಹಾಗೂ ಮೀನಾರವರ ಪುತ್ರಿ. ಇವರು ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ತಾಯಿ ಮೀನಾರವರು ವೃತ್ತಿಯಲ್ಲಿ ಶಿಕ್ಷಕಿ. ಕೃತಿಕಾ ತಮ್ಮ ಶಿಕ್ಷಣವನ್ನು ಆನಂದಪುರದ ಸಾಧನಾ ವಿದ್ಯಾ ಕೇಂದ್ರದಲ್ಲಿ ಪಡೆದಿದ್ದಾರೆ.
ಕೃತಿಕಾ 2008ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ 'ಪಟ್ರೆ ಲವ್ಸ್ ಪದ್ಮ', ಎಂಬ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಳಿಕ 'ಮನೆ ಮಗಳು' ಎಂಬ ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದರು. ಇವರು ನಟಿಸಿದ 'ರಾಧಾ ಕಲ್ಯಾಣ' ರಾಧಿಕಾ ಪಾತ್ರ ಪ್ರಸಿದ್ದಿ ಪಡೆಯಿತು. ಈ ಧಾರಾವಾಹಿಯು ಸುಮಾರು ಮೂರುವರೆ ವರ್ಷಗಳ ಕಾಲ ಪ್ರಸಾರವಾಯಿತು.
ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ ರವೀಂದ್ರ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಇನ್ನು ಮುಂದೆ ನನ್ನನ್ನು ಇದೇ ಹೆಸರಿನಿಂದ ಕರೆಯಿರಿ ಎಂದು ಮನವಿ ಮಾಡಿದ್ದಾರೆ. ಹೌದು 'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಕೃತಿಕಾ ರವೀಂದ್ರ ಮುಂದೆ ರಾಧಿಕಾ ಎಂಬ ಹೆಸರಿನಿಂದಲೇ ಮನೆಮಾತಾದರು. ಸಾಮಾಜಿಕ ಜಾಲತಾಣಗಳು ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಕಾಲದಲ್ಲಿಯೇ ಧಾರಾವಾಹಿಗೆ ಅಭಿಮಾನಿ ಗ್ರೂಪ್ ಗಳು ಸಹ ಹುಟ್ಟಿಕೊಂಡಿದ್ದವು. 'ರಾಧಾ ಕಲ್ಯಾಣ' ಧಾರಾವಾಹಿ ಮುಗಿದ ಬಳಿಕ ಕೃತಿಕಾ ಬಿಗ್ ಬಾಸ್ ಸೀಸನ್ 5 ರಲ್ಲಿ ಪಾಲ್ಗೊಂಡು ಬಹಳಷ್ಟು ವಾರಗಳು ಉಳಿದು ಬಿಗ್ ಬಾಸ್ ಕೃತಿಕಾ ಎಂದು ಫೇಮಸ್ ಆದರು.

ಸ್ಯಾಂಡಲ್‌ವುಡ್‌ಗೂ ಸಹ ಪಾದಾರ್ಪಣೆ ಮಾಡಿದ ನಟಿ 'ಕೆಂಗುಲಾಬಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಸದ್ಯ 'ರಾಜ ನಿವಾಸ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ನಡುವೆ ಒಲವೇ ಎಂಬ ಆಲ್ಬಂ ಸಾಂಗ್‌ನಲ್ಲಿಯೂ ಅಭಿನಯಿಸಿದ್ದು, ಕಿರುತೆರೆಗೆ ಮರಳುವ ಬಗ್ಗೆ ಮಾತನಾಡಿದ್ದರು. 2011ರ ಸಮಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ 'ರಾಧಾ ಕಲ್ಯಾಣ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿನ ರಾಧಿಕಾ, ವಿಶು ಪಾತ್ರಗಳು ಸಾಕಷ್ಟು ಪ್ರಖ್ಯಾತಿ ಪಡೆದಿದ್ದರು. ರಾಧಿಕಾ ಪಾತ್ರದಲ್ಲಿ ನಟಿ ಕೃತಿಕಾ ರವೀಂದ್ರ, ವಿಶು ಪಾತ್ರದಲ್ಲಿ ನಟ ಚಂದನ್ ಕುಮಾರ್ ಅಭಿನಯಿಸಿದ್ದರು. ಈ ಧಾರಾವಾಹಿ ಮುಗಿದು 6 ವರ್ಷಗಳಾಗುತ್ತಾ ಬಂತು. ಆದರೆ ಕೃತಿಕಾ ಮಾತ್ರ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಂಡಿಲ್ಲ.
ಆನಂದಪುರದಲ್ಲಿ ಅಪ್ಪ-ಅಮ್ಮನ ಮುದ್ದಿನ ಮಗಳಾಗಿ ಆನಂದದಿಂದ ಆಡಿ ಬೆಳೆದ ಹುಡುಗಿ ಕಿರುತೆರೆಯಲ್ಲಿ ರಾಧಿಕಾ ಆಗಿ ಮನೆ ಮಗಳು ಎನಿಸಿಕೊಳ್ಳುತ್ತಾ ಬಿಗ್ ಬಾಸ್‌ನಿಂದ ಕೃತಿಕಾ ಆಗಿ ಪರಿಚಯವಾಗುತ್ತಾ ಹಿರಿತೆರೆಯಲ್ಲೂ ಮುದ್ದು ಕೆಂಗುಲಾಬಿಯಾಗಿ ಮಿಂಚಿದ್ದಾರೆ. ಕೃತಿಕಾರಲ್ಲಿದ್ದ ಪ್ರತಿಭೆ ಅವರನ್ನು ಬಣ್ಣದ ಬದುಕಿನತ್ತ ಕರೆದೊಯ್ಯಿತು. ಇವರು ಬಾಲ ನಟಿಯಾಗಿ ಪರಿಚಯವಾದದ್ದು 'ಝಿಂಬಾ' ಧಾರವಾಹಿಯ ಮೂಲಕ.

ಬಳಿಕಾ ಮನೆಮಗಳು ಧಾರಾವಾಹಿ ಮೂಲಕ ತಮ್ಮದೊಂದು ಛಾಫು ಮೂಡಿಸಿದರು. ಮನೆಮಗಳಾಗಿ ಮಿಂಚಿದ್ದನ್ನು ಕಂಡು ಇವರನ್ನು ಅರಸಿ ಬಂದದ್ದು 'ರಾಧಾ ಕಲ್ಯಾಣ' ಧಾರಾವಾಹಿಯ ರಾಧಿಕಾ ಪಾತ್ರ. ಈ ಧಾರಾವಾಹಿಯ ಯಶಸ್ಸು ಯಾವ ಮಟ್ಟದಲ್ಲಿತ್ತು ಎಂದರೆ ಕೃತಿಕಾರನ್ನು ರಾಧಿಕಾ ಎಂದೇ ಗುರುತಿಸುವ ಮಟ್ಟಕ್ಕೆ ಮನೆಮಾತಾದರು.
'ಕೆಂಗುಲಾಬಿ' ಚಿತ್ರ ನಾಯಕಿ ಪ್ರಧಾನ ಚಿತ್ರವಾಗಿದ್ದು, ಕೃತಿಕಾ ಇದರಲ್ಲಿ ನಾಯಕಿಯಾಗಿ ಮಿಂಚದ್ದಾರೆ. ಕೃತಿಕಾ ನಟನಾ ಪ್ರಾವಿಣ್ಯಕ್ಕೆ ಈ ಚಿತ್ರ ಕನ್ನಡಿಯಾಗಿದೆ. ಇನ್ನೇನು ಒಂದು ತಿಂಗಳ ಸಮಯದಲ್ಲಿ ಆಡಿಯೋ ಬಿಡುಗಡೆಯಾಗಲಿದ್ದು, ಅತೀ ಶೀಘ್ರದಲ್ಲೇ ಈ 'ಕೆಂಗುಲಾಬಿ' ತನ್ನ ಕಂಪು ಸೂಸಲಿದೆ.


Click it and Unblock the Notifications











