'ರಾಧಾ ಕಲ್ಯಾಣ' ಸೀರಿಯಲ್ ನಟಿ ರಾಧಿಕಾ ರಾವ್ ತುಂಬು ಗರ್ಭಿಣಿ: ತಾಯ್ತನದ ಫೋಟೋಶೂಟ್ ವೈರಲ್
ಮೊದಲ ಮಗುವಿಗೆ ಗರ್ಭಿಣಿಯಾಗಿರುವ ಕನ್ನಡ ನಟಿ ರಾಧಿಕಾ ರಾವ್ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ರಾವ್ ಇತ್ತೀಚೆಗೆ ತನ್ನ ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ.
ಸಿನಿಮಾ ತಾರೆಯರು ಹಾಗೂ ಕಿರುತೆರೆ ನಟಿಯರು ಪ್ರೆಗ್ನೆನ್ಸಿಯ ಫೋಟೋಶೂಟ್ ಮಾಡಿಸಿಕೊಳ್ಳುವುದು ಕಾಮನ್ ಆಗಿದೆ. ಆದರೆ, ರಾಧಿಕಾ ರಾವ್ ಪಕ್ಕಾ ದೇಸಿ ಲುಕ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ನಟಿ ಬೇಬಿ ಬಂಪನ್ನು ತೋರಿಸಿದ್ದಾರೆ.

ರಾಣಿಯಂತೆ ಕಂಗೊಳಿಸಿದ ರಾಧಿಕಾ
ಚಿನ್ನದ ಝರಿ ಬಾರ್ಡರ್‌ನ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದ್ದಾರೆ. ರಾಯಲ್ ಥೀಮ್ ಫೋಟೋಶೂಟ್‌ನಲ್ಲಿ ನಟಿ ಯಾವ ರಾಣಿಗಿಂತಲೂ ಕಡಿಮೆಯಾಗಿ ಕಾಣುತ್ತಿಲ್ಲ. ಈ ಕ್ಲಾಸಿ ಬ್ಯಾಕ್‌ಡ್ರಾಪ್ ಒಟ್ಟಾರೆಯಾಗಿ ಫೋಟೋಶೂಟ್‌ನ ನೋಟಕ್ಕೆ ಹೆಚ್ಚು ಅಂದವನ್ನು ನೀಡುತ್ತಿದೆ. ಅಲ್ಲದೆ, ಇದರೊಂದಿಗೆ ಎಥ್ನಿಕ್ ಆಕ್ಸೆಸರಿಗಳನ್ನು ಅಥವಾ ಚಿನ್ನಾಭರಣಗಳನ್ನು ಧರಿಸುವುದರೊಂದಿಗೆ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ.
ಪ್ರೆಗ್ನೆಂಟ್ ಎಂದು ಘೋಷಿಸಿದ ರಾಧಿಕಾ ರಾವ್
ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಪತಿ ಆಕರ್ಷ್ ಜೊತೆಗೆ ಇರುವ ಫೋಟೋ ಶೇರ್ ಮಾಡಿದ್ದ ರಾಧಿಕಾ ರಾವ್ "ನೀವು + ನಾನು = ಮೂರು" ಎಂದು ಕ್ಯೂಟ್ ಆಗಿ ಬರೆದುಕೊಂಡಿದ್ದರು. ಮಾತ್ರವಲ್ಲದೇ ಮೊದಲ ಬಾರಿಗೆ ತಮ್ಮ ಬೇಬಿ ಬಂಪನ್ನು ಚಿತ್ರದ ಮೂಲಕ ತೋರಿಸಿದ್ದಾರೆ.

ರೀಲ್ಸ್‌ನಲ್ಲೂ ಮಂಗಳೂರು ನಟಿ ಮೋಡಿ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ' ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು ರಾಧಿಕಾ ರಾವ್. ನವಿರಾದ ಪ್ರೇಮಕಥೆಯನ್ನು ಹಾಸ್ಯವಾಗಿ ಪ್ರದರ್ಶಿಸಿದ್ದ ಈ ಧಾರಾವಾಹಿಯು ಬಹುಬೇಗನೆ ಹಿಟ್ ಆಗಿತ್ತು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯುವರಾಣಿ'ಯಲ್ಲಿ ಇಶಾ ಆಗಿ ನಟಿಸಿ ಸೈ ಎನಿಸಿಕೊಂಡರು.
ಸಿನಿಮಾದಲ್ಲಿಯೂ ಮೋಡಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾ ಆಗಿ ಕಾಣಿಸಿಕೊಂಡಿದ್ದ ಕರಾವಳಿ ಬೆಡಗಿ ರಾಧಿಕಾ ರಾವ್ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡ ಚೆಲುವೆ. 'ಪುದರುಗೊಂಜಿ ಬುಡೆದಿ', 'ಏಸ' ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದ ರಾಧಿಕಾ ರಾವ್ 'ಲುಂಗಿ' ಸಿನಿಮಾದಲ್ಲಿಯೂ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದರು. ಇದರ ಜೊತೆಗೆ ಸೃಜನ್ ಲೋಕೇಶ್ ಅಭಿನಯದ 'ಎಲ್ಲಿದ್ದೆ ಇಲ್ಲಿ ತನಕ' ಸಿನಿಮಾದಲ್ಲಿ ನಾಯಕಿಯ ಗೆಳತಿಯಾಗಿ ಕಾಣಿಸಿಕೊಂಡಿದ್ದಾರೆ.
ಮಾಡೆಲ್ ಹೌದು!
ಅಂದ್ಹಾಗೆ, ನಟನೆಯ ಹೊರತಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ರಾಧಿಕಾ ಗುರುತಿಸಿಕೊಂಡಿದ್ದಾರೆ. ಜ್ಯುವೆಲ್ಲರಿ ಜಾಹೀರಾತು, ಧಾತ್ರಿ ಹೇರ್ ಆಯಿಲ್, 2016 ರ ಹ್ಯಾಂಗ್ಯೂ ಕ್ಯಾಲೆಂಡರ್ ನಲ್ಲಿ ರೂಪದರ್ಶಿಯಾಗಿ ಮಿಂಚಿದ ರಾಧಿಕಾ ಅವರಿಗೆ ಮುಂಚಿನಿಂದಲೂ ಫೋಟೋ ತೆಗೆಸಿಕೊಳ್ಳುವುದು, ಭಿನ್ನ-ವಿಭಿನ್ನ ರೀತಿಯಲ್ಲಿ ಫೋಟೋ ತೆಗೆಸಿಕೊಳ್ಳುವುದು ಎಂದರೆ ತುಂಬ ಇಷ್ಟ.


Click it and Unblock the Notifications











