'ರಾಧಾ ರಮಣ' ದೀಪಿಕಾಗೆ ಮದುವೆ ಫಿಕ್ಸ್ ಆಯ್ತು.! ಹುಡುಗ ಯಾರು.?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಸಿತಾರ ದೇವಿ ಪುತ್ರಿ ದೀಪಿಕಾ ಪಾತ್ರವನ್ನ ಪೋಷಿಸುತ್ತಿದ್ದವರು ಅನುಷಾ ಹೆಗ್ಡೆ.

ಇಡೀ 'ರಾಧಾ ರಮಣ' ಸೀರಿಯಲ್ ನಲ್ಲಿ ರಮಣ್ ಹಿಂದೆ ಬಿದ್ದಿದ್ದ ದೀಪಿಕಾ ಕ್ಲೈಮ್ಯಾಕ್ಸ್ ನಲ್ಲಿ ಮಾತ್ರ ಬೇರೆಯವರನ್ನ ಮದುವೆ ಆಗಿದ್ದರು. ಇದೀಗ ನಿಜ ಜೀವನದಲ್ಲೂ ಹಸೆಮಣೆ ಏರಲು ಅನುಷಾ ಹೆಗ್ಡೆ ಸಜ್ಜಾಗಿದ್ದಾರೆ. ತೆಲುಗು ನಟ ಪ್ರತಾಪ್ ಸಿಂಗ್ ಶಾ ಜೊತೆಗೆ ವೈವಾಹಿಕ ಜೀವನ ಆರಂಭಿಸಲು ಅನುಷಾ ಹೆಗ್ಡೆ ಸಿದ್ಧತೆ ನಡೆಸಿದ್ದಾರೆ.

ತೆಲುಗಿನ ಸೀರಿಯಲ್ ನಲ್ಲಿ ನಟಿಸುತ್ತಿರುವ ಪ್ರತಾಪ್ ಸಿಂಗ್ ಶಾ ಮತ್ತು ಅನುಷಾ ಹೆಗ್ಡೆ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿ ಇದೀಗ ಮದುವೆವರೆಗೂ ಬಂದು ತಲುಪಿದೆ. ಮುಂದೆ ಓದಿರಿ...

ತೆಲುಗಿನಲ್ಲೂ ಮಿಂಚುತ್ತಿರುವ ಅನುಷಾ

ತೆಲುಗಿನಲ್ಲೂ ಮಿಂಚುತ್ತಿರುವ ಅನುಷಾ

ತೆಲುಗಿನಲ್ಲಿ ಜನಪ್ರಿಯತೆ ಪಡೆದಿರುವ 'ನಿನ್ನೆ ಪೆಳ್ಳಾಡತಾ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅನುಷಾ ಹೆಗ್ಡೆ ನಟಿಸುತ್ತಿದ್ದಾರೆ. ಇದೇ ಸೀರಿಯಲ್ ನಲ್ಲಿ ಪ್ರತಾಪ್ ಸಿಂಗ್ ಶಾ ಕೂಡ ಅಭಿನಯಿಸುತ್ತಿದ್ದು, ಶೂಟಿಂಗ್ ನಡುವೆ ಇಬ್ಬರ ಮಧ್ಯೆ ಪ್ರೀತಿ ಮೊಳಕೆಯೊಡೆದಿದೆ.

ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಿದ ಪ್ರತಾಪ್ ಸಿಂಗ್

ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಿದ ಪ್ರತಾಪ್ ಸಿಂಗ್

ಇತ್ತೀಚೆಗಷ್ಟೇ ತೆಲುಗು ವಾಹಿನಿಯ ಅವಾರ್ಡ್ ಫಂಕ್ಷನ್ ನಡೆದಿದ್ದು, ಆ ವೇದಿಕೆ ಮೇಲೆಯೇ ಅನುಷಾ ಹೆಗ್ಡೆಗೆ ಪ್ರತಾಪ್ ಸಿಂಗ್ ಶಾ ಲವ್ ಪ್ರಪೋಸ್ ಮಾಡಿದ್ದಾರೆ. ಜೊತೆಗೆ ಮಂಡಿಯೂರಿ ಅನುಷಾ ಹೆಗ್ಡೆ ಬೆರಳಿಗೆ ಉಂಗುರ ತೊಡಿಸಿದ್ದಾರೆ.

ಯಾರು ಈ ಪ್ರತಾಪ್ ಸಿಂಗ್ ಶಾ.?

ಯಾರು ಈ ಪ್ರತಾಪ್ ಸಿಂಗ್ ಶಾ.?

ಮೂಲತಃ ಉತ್ತರ ಭಾರತದವರಾದರೂ ಪ್ರತಾಪ್ ಸಿಂಗ್ ಶಾ ಹೈದರಾಬಾದ್ ನಲ್ಲಿ ವಾಸಿಸುತ್ತಿದ್ದಾರೆ. ತೆಲುಗಿನ ಸೀರಿಯಲ್ ಗಳಲ್ಲಿ ಪ್ರತಾಪ್ ಸಿಂಗ್ ಶಾ ನಟಿಸುತ್ತಿದ್ದಾರೆ. ರಜಪೂತ ಸಮುದಾಯದವರಾದ ಪ್ರತಾಪ್ ಸಿಂಗ್ ಶಾ... ಪುತ್ತೂರು ಬೆಡಗಿ ಅನುಷಾ ಹೆಗ್ಡೆಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಮುಂದಿನ ವರ್ಷ ಮದುವೆ

ಮುಂದಿನ ವರ್ಷ ಮದುವೆ

ಸದ್ಯ ಅನುಷಾ ಹೆಗ್ಡೆ-ಪ್ರತಾಪ್ ಸಿಂಗ್ ಶಾ ನಡುವಿನ ಪ್ರೀತಿ ಅಧಿಕೃತವಾಗಿದೆ. ಇಬ್ಬರ ಪ್ರೀತಿಗೆ ಕುಟುಂಬದವರು ಕೂಡ ಸಮ್ಮತಿ ಕೊಟ್ಟಿದ್ದಾರೆ. ಮುಂದಿನ ವರ್ಷ ಈ ಜೋಡಿಯ ಮದುವೆ ನಡೆಯಲಿದೆ ಎನ್ನಲಾಗಿದೆ.

More from Filmibeat

English summary
Kannada Serial Radha Ramana Actress Anusha Hegde to marry Telugu serial star Prathap Singh Shah.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X