ತಂದೆಯಾಗುತ್ತಿರುವ ಸಂಭ್ರಮದಲ್ಲಿ 'ರಾಧಾ ರಮಣ' ಖ್ಯಾತಿಯ ನಟ ಸ್ಕಂದ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟ ಸ್ಕಂದ ಅಶೋಕ್ ತಂದೆಯಾಗುತ್ತಿದ್ದಾರೆ. ರಮಣ್ ಅಂತಾನೆ ಖ್ಯಾತಿ ಗಳಿಸಿರುವ ಸ್ಕಂದ ಇತ್ತೀಚಿಗೆ ಪತ್ನಿಯ ಸೀಮಂತ ಕಾರ್ಯವನ್ನು ಅದ್ದೂರಿಯಾಗಿ ಮಾಡಿದ್ದಾರೆ.

ಸ್ಕಂದ ಪತ್ನಿ ಶಿಖಾ ಎರಡು ತಿಂಗಳ ಹಿಂದೆ ಗರ್ಭಿಣಿ ಆಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಈಗ ಅದ್ದೂರಿಯಾಗಿ ಸೀಮಂತ ಕಾರ್ಯ ನೆರವೇರಿದೆ. ಕೊರೊನಾ ಲಾಕ್ ಡೌನ್ ಪರಿಣಾಮ ಸೀಮಂತ ಕಾರ್ಯದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರಭಾಗಿಯಾಗಿದ್ದಾರೆ.

ಸ್ಕಂದ ಪತ್ನಿಯ ಸೀಮಂತ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ಪತ್ನಿಯ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

Radha Ramana Fame Actor Skanda Ashoks Wife Baby Shower

ಸ್ಕಂದ, ಪತ್ನಿ ಶಿಖಾ ಪ್ರಸಾದ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಸ್ಕಂದ ಮತ್ತು ಶಿಖಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ಕಂದ ಅಶೋಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಕಂದ ಮದುವೆಗೆ ಸ್ಯಾಂಡಲ್ ವುಡ್ ಗಣ್ಯರು, ಕಿರುತೆರೆ ಕಲಾವಿವರು ಸಾಕ್ಷಿಯಾಗಿದ್ದರು.

Radha Ramana Fame Actor Skanda Ashoks Wife Baby Shower

ಸ್ಕಂದ ರಾಧಾ ರಮಣ ಧಾರಾವಾಹಿಯ ಜೊತೆಗೆ ಸಿನಿಮಾದಲ್ಲಿಯೂ ಅಭಿನಯಸಿದ್ದಾರೆ. ಯೂಟರ್ನ್, ಚಾರುಲತ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ವಿಶೇಷ ಅಂದರೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂನಲ್ಲಿಯೂ ಸ್ಕಂದ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Radha Ramana fame Actor Skanda Ashok's wife Baby Shower Photo viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X