ಹೊಸ ಫೋಟೋಶೂಟ್ ಮಾಡಿಸಿ ಮಿರ ಮಿರ ಮಿಂಚುತ್ತಿರುವ ನಟಿ ಶ್ವೇತಾ ಪ್ರಸಾದ್

By ಪ್ರಿಯಾ ದೊರೆ

ನಟಿ ಶ್ವೇತಾ ಪ್ರಸಾದ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಆಗಾಗ ಫೋಟೋಶೂಟ್ ಗಳನ್ನು ಕೂಡ ಮಾಡಿಸುತ್ತಿರುತ್ತಾರೆ.

ಕಿರುತೆರೆಯಲ್ಲಿ ಹೆಚ್ಚು ದಿನಗಳ ಕಾಲ ಇರದಿದ್ದರೂ ಕೂಡ, ಶ್ವೇತಾ ಪ್ರಸಾದ್ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೇ ಸಮಯ ಕಿರುತೆರೆಯಲ್ಲಿದ್ದ ಶ್ವೇತಾ ಅವರಿಗೆ ಈಗಲೂ ಅಭಿಮಾನಿಗಳ ಬಳಗ ಹೆಚ್ಚಾಗಿದೆ.

ಶ್ವೇತಾ ಪ್ರಸಾದ್ ಸದಾ ಆಕ್ಟೀವ್ ಆಗಿ ಇರುತ್ತಾರೆ. ಸದಾ ಬ್ಯುಸಿ ಇರುವ ನಟಿಗೆ ದೊಡ್ಡ ಅಭಿಮಾನಿ ಬಳಗವಿದೆ. ಯಾವಾಗಲೂ ಹೊಸತನಕ್ಕೆ ತುಡಿಯುವ ಶ್ವೇತಾ ಅವರು ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಪ್ರವಾಸ ಬಯಸುವ ಶ್ವೇತಾ ಪ್ರಸಾದ್

ಪ್ರವಾಸ ಬಯಸುವ ಶ್ವೇತಾ ಪ್ರಸಾದ್

ಶ್ವೇತಾ ಪ್ರಸಾದ್ ಸದಾ ಊರೂರು ಸುತ್ತಾಡುತ್ತಿರುತ್ತಾರೆ. ದೇಶಾದ್ಯಂತ ಪ್ರವಾಸ ಮಾಡಿರುವ ನಟಿ ಆಗಾಗ ತಮ್ಮ ಪ್ರವಾಸದ ಫೋಟೋಗಳನ್ನು ಕೂಡ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಶ್ವೇತಾ ಪ್ರಸಾದ್ ಅವರು ಪ್ರತೀ ಭಾಷೆಯನ್ನೂ ಕಲಿಯಲು ಬಯಸಿ, ಬೇರೆ ಬೇರೆ ಪ್ರದೇಶದ ಮಹಿಳೆಯರನ್ನು ಮಾತನಾಡಿಸಿದ್ದರು. ಅವರಿಂದ ಭಾಷೆಯನ್ನು ಕಲಿಯುವ ವೀಡಿಯೋವನ್ನು ಶೇರ್ ಮಾಡಿದ್ದರು. ಇದರಲ್ಲಿ ಬೆಂಗಾಲಿ, ತುಳು, ತಮಿಳು, ಕೊಂಕಣಿ, ಸಂಸ್ಕೃತ, ಹಿಮಾಚಲ ಪ್ರದೇಶದ ಮಹಾಸುಪಹಾರಿ, ನೇಪಾಳಿ ಹೀಗೆ ಹಲವು ಭಾಷೆಯ ಜನರೊಂದಿಗೆ ಮಾತನಾಡಿದ್ದಾರೆ. ಅವರ ಭಾಷೆಯನ್ನು ಕಲಿಯಲು ಪ್ರಯತ್ನಿಸಿದ್ದರು.

ಉತ್ತಮ ಮನಸ್ಥಿತಿಯ ಬೆಡಗಿ

ಉತ್ತಮ ಮನಸ್ಥಿತಿಯ ಬೆಡಗಿ

ಇನ್ನು ಇತ್ತೀಚೆಗೆ ಶ್ವೇತಾ ಪ್ರಸಾದ್ ಅವರು ಹೊಸ ಎನ್‌ಜಿಓ ಅನ್ನು ಕೂಡ ಪ್ರಾರಂಭಿಸಿದ್ದರು. ಈ ಬಗ್ಗೆಯೂ ವೀಡಿಯೋ ಮಾಡಿದ್ದರು. ಅವರ ತಂದೆ ಪ್ರಸಾದ್ ಫೌಂಡೇಷನ್ ಮೂಲಕ ಎನ್‌ಜಿಒ ಸಂಸ್ಥೆ ಆರಂಭಿಸಿದ್ದರು. ಇದಕ್ಕೂ ಮುನ್ನವೇ ಬಿಸಿನೆಸ್‌ನಲ್ಲಿ ತೊಡಗಿರುವ ಶ್ವೇತಾ ಪ್ರಸಾದ್ ಅವರು ತಮ್ಮ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸದಾ ಇತರರಿಗೆ ಸಹಾಯ ಮಾಡುವ ಶ್ವೇತಾ ಪ್ರಸಾದ್ ಅವರ ಗುಣ ಎನ್‌ಜಿಓ ತೆರೆಯಲು ಪ್ರೇರೇಪಿಸಿದೆ. ಈ ಬಗ್ಗೆ ಸಂಕ್ರಾಂತಿ ಹಬ್ಬದಲ್ಲಿ ಮಾಹಿತಿಯನ್ನು ಹಂಚಿಸಿಕೊಂಡಿದ್ದರು.

ಅಭಿಮಾನಿಗಳ ಜೊತೆಗೆ ಸಂಪರ್ಕ

ಅಭಿಮಾನಿಗಳ ಜೊತೆಗೆ ಸಂಪರ್ಕ

ಇನ್ನು ಆಗಾಗ ಶ್ವೇತಾ ಪ್ರಸಾದ್ ಅವರು ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಮೂಲತಃ ಶಿವಮೊಗ್ಗ ಚೆಲುವೆಯಾದ ಶ್ವೇತಾ ಓದಿದ್ದು, ಇರುವುದು ಎಲ್ಲಾ ಬೆಂಗಳೂರಿನಲ್ಲೇ. ಫೇಮಸ್ ಆರ್ ಜೆ ಪ್ರದೀಪ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದವರು ಕಿರುತೆರೆಗೆ ಆಗಮಿಸಿದರು. 'ಶ್ರೀರಸ್ತು ಶುಭಮಸ್ತು', 'ರಾಧಾರಮಣ' ಧಾರಾವಾಹಿಗಳಲ್ಲಿ ನಟಿಸಿ ಎಲ್ಲರ ಮನ ಗೆದ್ದರು. ಈಗ ಸಿನಿಮಾ, ಕಿರುತೆರೆಗಳಿಂದ ಕೊಂಚ ದೂರವೇ ಉಳಿದಿದ್ದಾರೆ. ಆದರೆ, ಅಭಿಮಾನಿಗಳ ಜೊತೆಗೆ ಸಂಪರ್ಕ ಉಳಿಸಿಕೊಂಡಿದ್ದಾರೆ.

ಸಕತ್ ಹಾಟ್ ಫೋಟೊಶೂಟ್

ಸಕತ್ ಹಾಟ್ ಫೋಟೊಶೂಟ್

ಈಗ ಕಂಪ್ಲೀಟ್ ಬದಲಾಗಿರುವ ಶ್ವೇತಾ ಆರ್ ಪ್ರಸಾದ್ ಗ್ಲಾಮರ್ ಗೊಂಬೆಯಂತಾಗಿದ್ದಾರೆ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿರುವ ಶ್ವೇತಾ ಪ್ರಸಾದ್ ಅವರು ಈಗ ಮಿರ ಮಿರನೆ ಮಿಂಚುವ ಬಟ್ಟೆಯನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ ತುಂಬಾ ಹಾಟ್ ಫೋಟೋಗೆ ಪೋಸ್ ಕೊಡುವ ಶ್ವೇತಾ, ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಸಿಲ್ವರ್ ಕಲರ್ ಲೆಹೆಂಗಾದಲ್ಲಿ ಮಾಡಿಸಿರುವ ಹೊಸ ಫೋಟೊಶೂಟ್‌ ಫೋಟೊಗಳು ವೈರಲ್ ಆಗಿದೆ. ಅಪ್ಸರೆಯಂತೆ ಫೋಟೊಶೂಟ್‌ನಲ್ಲಿ ಕಂಗೊಳಿಸಿದ್ದಾರೆ.

More from Filmibeat

English summary
Radha Ramana Fame Actress Shwetha Prasad Hot Photoshoot. Fans comment that Shwetha Prasad is the most beautiful in Lehenga. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X