»   » ಮನೆಯಲ್ಲಿಯೇ ಕುಳಿತು 'ರಾಧಾ ರಮಣ' ಮೂಲಕ ಆಸ್ಟ್ರೇಲಿಯಾ ನೋಡಿರಿ...

ಮನೆಯಲ್ಲಿಯೇ ಕುಳಿತು 'ರಾಧಾ ರಮಣ' ಮೂಲಕ ಆಸ್ಟ್ರೇಲಿಯಾ ನೋಡಿರಿ...

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ 'ರಾಧಾ ರಮಣ' ವೀಕ್ಷಕರಿಗೊಂದು ಸಿಹಿ ಸುದ್ದಿ. ಆಸ್ಟ್ರೇಲಿಯಾದ ಅದ್ಭುತ ಸ್ಥಳಗಳನ್ನು ನಿಮ್ಮ ಮನೆಯಲ್ಲಿಯೇ ಕುಳಿತು, 'ರಾಧಾ ರಮಣ' ಮೂಲಕ ಕಣ್ತುಂಬಿಕೊಳ್ಳಿರಿ...

ಆಸ್ಟ್ರೇಲಿಯಾದ ಬ್ರಿಸ್ಬೇನ್ ಸ್ಟೋರಿ ಬ್ರಿಡ್ಜ್, ಟಾಂಗಲೂಮಾ ಐಲ್ಯಾಂಡ್, ಸ್ಟ್ರೀಟ್ ಆಫ್ ಗೋಲ್ಡ್ ಕೋಸ್ಟ್ ಮೊದಲಾದ ರಮಣೀಯ ಸ್ಥಳಗಳಲ್ಲಿ 'ರಾಧಾ ರಮಣ' ಧಾರಾವಾಹಿಯ ಚಿತ್ರೀಕರಣ ನಡೆದಿದೆ.

ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸಿದ 'ರಾಧಾ ರಮಣ' ಧಾರಾವಾಹಿಯ ಸಂಚಿಕೆಗಳು ಜುಲೈ 17 ರಿಂದ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಮುಂದೆ ಓದಿರಿ...

ಬಿಸಿನೆಸ್ ಟ್ರಿಪ್

ಧಾರಾವಾಹಿಯಲ್ಲಿ ರಮಣ್ ಮತ್ತು ದೀಪಿಕಾಗೆ ಇದು ಬಿಸಿನೆಸ್ ಟ್ರಿಪ್ ಆಗಿದ್ರೆ, ರಾಧಾಗೆ ಮಾತ್ರ ಇದು ಹಾಲಿಡೇ ಟ್ರಿಪ್.

ಬ್ರಿಸ್ಬೇನ್ ಸ್ಟೋರಿ ಬ್ರಿಡ್ಜ್ ಮುಂದೆ...

ಬ್ರಿಸ್ಬೇನ್ ಸ್ಟೋರಿ ಬ್ರಿಡ್ಜ್ ಮುಂದೆ ರಾಧಾ ಮತ್ತು ರಮಣ್ ಕಳೆದ ಸುಂದರವಾದ ರೋಮ್ಯಾಂಟಿಕ್ ಕ್ಷಣಗಳು, ಗೋಲ್ಡ್ ಕೋಸ್ಟ್ ಸ್ಟ್ರೀಟ್ ನಲ್ಲಿ ಇಬ್ಬರು ಜೊತೆಯಾಗಿ ನಡೆದಾಡಿದ್ದು, ಟಾಂಗಲೂಮಾ ಐಲ್ಯಾಂಡ್ ನಲ್ಲಿ ಸನ್ ಸೆಟ್ ನೋಡಿದ್ದು ಆಕರ್ಷಕವಾಗಿ ಚಿತ್ರೀಕರಣಗೊಂಡಿದೆ.

ರಮಣ್ ಕನಸು...

ರಮಣ್ ತಂದೆ ಹುಟ್ಟುಹಾಕಿದ ಟಾಯ್ ಬಿಸಿನೆಸ್ ನ ಪ್ರಪಂಚದಾದ್ಯಂತ ವಿಸ್ತರಿಸಬೇಕು ಎಂಬುದು ರಮಣ್ ಕನಸು. ಈ ಕನಸು ನನಸಾಗುತ್ತದೆಯೇ.?

ದೀಪಿಕಾ ಸ್ವಾರ್ಥ

ಆಸ್ಟ್ರೇಲಿಯಾದಲ್ಲಿ ಮತ್ತೆ ತನ್ನ ಪ್ರೀತಿಯನ್ನು ಪಡೆಯಬೇಕೆಂಬ ದೀಪಿಕಾಳ ಸ್ವಾರ್ಥ ಕೈಗೂಡುತ್ತದೆಯೇ.?

ಕಾಂಟ್ರ್ಯಾಕ್ಟ್ ಮದುವೆ.?

ಕಾಂಟ್ರ್ಯಾಕ್ಟ್ ಮದುವೆಯನ್ನು ಮರೆಸಿ ರಾಧಾ ಮತ್ತು ರಮಣ್ ಸಂಬಂಧ ಗಟ್ಟಿಗೊಳಿಸಲು ಸಾಕ್ಷಿಯಾಗಬಹುದೇ ಬ್ರಿಸ್ಬೇನ್.? ಇಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ, ತಪ್ಪದೇ 'ರಾಧಾ ರಮಣ' ಧಾರಾವಾಹಿ ವೀಕ್ಷಿಸಿ...

ಪರಮೇಶ್ವರ ಗುಂಡ್ಕಲ್ ಏನಂತಾರೆ.?

''ನಮ್ಮ ಜನಪ್ರಿಯ 'ರಾಧಾ ರಮಣ' ಧಾರಾವಾಹಿಯನ್ನು ಬ್ರಿಸ್ಬೇನ್ ಸಿಟಿ ಮತ್ತು ಗೋಲ್ಡ್ ಕೋಸ್ಟ್ ನಲ್ಲಿ ಚಿತ್ರೀಕರಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಸ್ಟ್ರೇಲಿಯಾ ಟೂರಿಸಂ ಇಲಾಖೆಗೆ ಧನ್ಯವಾದಗಳನ್ನು ಹೇಳಲೇಬೇಕು. ಆಸ್ಟ್ರೇಲಿಯಾದಲ್ಲಿನ ಭವ್ಯವಾದ ಸ್ಥಳಗಳಲ್ಲಿ ಚಿತ್ರೀಕರಿಸಿದ್ದು, ಧಾರಾವಾಹಿಯು ಮತ್ತಷ್ಟು ಜನಪ್ರಿಯವಾಗುವುದಲ್ಲದೇ, ವೀಕ್ಷಕರ ಗಮನ ಸೆಳೆಯಲಿದೆ'' ಎನ್ನುತ್ತಾರೆ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್.

English summary
'Radha Ramana' in Australia episodes to telecast from July 17th at 9pm in Colors Kannada Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada