»   » ಅಯ್ಯೋ 'ರಮಣ'ನ ತಂಗಿ ಈಗ ಮಿಸ್ಸಿಂಗ್: ಎಲ್ಲಿ ಹೋದಳು ಅನ್ವಿತಾ.?

ಅಯ್ಯೋ 'ರಮಣ'ನ ತಂಗಿ ಈಗ ಮಿಸ್ಸಿಂಗ್: ಎಲ್ಲಿ ಹೋದಳು ಅನ್ವಿತಾ.?

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತೀ ಹೆಚ್ಚು ಟಿ.ಆರ್.ಪಿ ಪಡೆದುಕೊಳ್ಳುತ್ತಿರುವ ಧಾರಾವಾಹಿಗಳಲ್ಲಿ 'ರಾಧಾ-ರಮಣ' ಕೂಡ ಒಂದು. ಆರಂಭದಿಂದಲೂ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ 'ರಾಧಾ-ರಮಣ' ಧಾರಾವಾಹಿ ಮೊದಲ ಸ್ಥಾನವನ್ನೇ ಪಡೆದುಕೊಂಡಿದೆ.

ಸಖತ್ ಸಕ್ಸಸ್ ಆಗಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ 'ರಮಣ'ನ ತಂಗಿ ಮಿಸ್ ಆಗಿದ್ದಾಳೆ. ಗಂಡನ ಮನೆಯಿಂದ ಮುನಿಸಿಕೊಂಡು ತವರಿಗೆ ಬಂದಿರುವ 'ಅನ್ವಿತಾ' ಮಿಸ್ ಆಗಿ ಎಲ್ಲಿಗೆ ಹೋಗಿದ್ದಾಳೆ ಅಂತ ಕನ್ಫೂಸ್ ಆಗಬೇಡಿ. ಹಾಗಾದ್ರೆ ಅನ್ವಿತಾ ಎಲ್ಲಿದ್ದಾಳೆ? ಮುಂದೆ ಓದಿ...

ಕಣ್ಮರೆಯಾದಳಾ ಆರಾಧನಳ ನಾದಿನಿ

'ರಾಧಾ-ರಮಣ' ಯುವಕ-ಯುವತಿಯನ್ನ ಸೇರಿದಂತೆ ಮಹಿಳೆಯರನ್ನು ಇಂಪ್ರೆಸ್ ಮಾಡಿರುವ ಧಾರಾವಾಹಿ. ನಾಯಕ 'ಸ್ಕಂದ' ಹಾಗೂ ನಾಯಕಿ 'ಶ್ವೇತಾ' ಕಾಂಬಿನೇಷನ್ ನ ತುಂಬಾನೇ ಮೆಚ್ಚಿಕೊಂಡು ಧಾರಾವಾಹಿಯನ್ನ ಯಶಸ್ವಿಯಾಗಿಸಿದ್ದಾರೆ ಪ್ರೇಕ್ಷಕರು. ಇಂತಹ ಸಮಯದಲ್ಲಿ ರಮಣನ ತಂಗಿ ಅನ್ವಿತಾ ಮಿಸ್ ಆಗಿದ್ದಾಳೆ.

'ಪುಟ್ಮಲ್ಲಿ' ಅವತಾರದಲ್ಲಿ ಅನ್ವಿತಾ ಎಂಟ್ರಿ

ನಟಿ 'ರಕ್ಷಾ'.... ಅಂದರೆ 'ರಾಧಾ-ರಮಣ' ಧಾರಾವಾಹಿಯ ನಾಯಕನ ಸಹೋದರಿ ಪಾತ್ರಧಾರಿ ಅನ್ವಿತಾ ಹೊಸ ಧಾರಾವಾಹಿಯ ಅಭಿನಯದಲ್ಲಿ ಬ್ಯುಸಿ ಆಗಿದ್ದಾರೆ. ರಕ್ಷಾ, 'ಪುಟ್ಮಲ್ಲಿ' ಅನ್ನೋ ಧಾರಾವಾಹಿಯಲ್ಲಿ ಮುಖ್ಯಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಡಿಸೆಂಬರ್ ನಿಂದ ಪ್ರಸಾರ

'ಸಂಜು ತಗಡೂರು' ನಿರ್ದೇಶನದಲ್ಲಿ 'ಸ್ಟಾರ್ ಸುವರ್ಣ'ದಲ್ಲಿ 'ಪುಟ್ಮಲ್ಲಿ' ಧಾರಾವಾಹಿ ಮುಂದಿನ ತಿಂಗಳಿಂದ ಪ್ರಸಾರವಾಗಲಿದೆ. ಈ ಸೀರಿಯಲ್ ನಲ್ಲಿ ಅನ್ವಿತಾ(ರಕ್ಷಾ) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಶ್ರೀಧರ್ ಹೆಗಡೆ 'ಪುಟ್ಮಲ್ಲಿ' ಧಾರಾವಾಹಿಯನ್ನ ನಿರ್ಮಾಣ ಮಾಡುತ್ತಿದ್ದು, ಶರತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ರಾಧಾ-ರಮಣದಲ್ಲಿ ಅನ್ವಿತಾ

'ಪುಟ್ಮಲ್ಲಿ', ಸಾವಿರಾರು ಕನಸುಗಳನ್ನ ಹೊತ್ತು ಗಂಡನ ಮನೆಗೆ ಬರುವ ಹುಡುಗಿಯ ಜೀವನ ಕಥೆ. ನಂತರ ಗಂಡನ ಮನೆಯಲ್ಲಿ ಇವಳ ಆಸೆಗಳು ಏನಾಗುತ್ತೆ ಅನ್ನೋದೆ ಧಾರಾವಾಹಿಯ ಕಥಾಹಂದರ. 'ಪುಟ್ಮಲ್ಲಿ' ಸೀರಿಯಲ್ ನಲ್ಲಿ ಲೀಡ್ ಕ್ಯಾರೆಕ್ಟರ್ ಪ್ಲೇ ಮಾಡ್ತಿರೋ ಅನ್ವಿತಾ(ರಕ್ಷಾ) 'ರಾಧಾ ರಮಣ' ಸೀರಿಯಲ್ ನಲ್ಲೂ ಅಭಿನಯಿಸುತ್ತಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಎರಡು ಧಾರಾವಾಹಿಗಳಲ್ಲಿ ತಮ್ಮ ಅಭಿನಯವನ್ನ ಮುಂದುವರೆಸುತ್ತಾರೆ.

English summary
'Radha Ramana' serial actress Anvitha is playing lead role in Star Suvarna channel's 'Putmalli' serial. ರಾಧಾ-ರಮಣ ಧಾರಾವಾಹಿಯ ಅನ್ವಿತ ಅಭಿನಯದ ಹೊಸ ಧಾರಾವಾಹಿ ಪ್ರಾರಂಭವಾಗುತ್ತಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X