ಅನ್ವಿತಾ ಮುಂದೆ ಸಿಕ್ಕಿ ಬಿದ್ದ ರಾಣಿ: ಇಂದು ಅಲ್ಲೋಲ ಕಲ್ಲೋಲ ಗ್ಯಾರೆಂಟಿ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಸದ್ಯ 'ವಿವಾಹ ವಾರ್ಷಿಕೋತ್ಸವ' ಎಂಬ ಹೊಸ ಅಧ್ಯಾಯ ಶುರುವಾಗಿದೆ.
ರಾಧಾ ಹಾಗೂ ರಮಣ, ಅನ್ವಿತಾ ಹಾಗೂ ಆದಿತ್ಯ ಮದುವೆ ಆಗಿ ಒಂದು ವರ್ಷ ಕಳೆದಿದೆ. ಸದ್ಯ 'ಅವನಿ' (ರಾಣಿ) ಕೂಡ ಸಿಕ್ಕಿರುವ ಕಾರಣ ರಮಣ್ ದೊಡ್ಡ ಪಾರ್ಟಿ ಅರೇಂಜ್ ಮಾಡಿದ್ದಾರೆ.
ಜೀವನದಲ್ಲಿ ಪಾರ್ಟಿ, ಬಗೆಬಗೆಯ ತಿಂಡಿ-ತಿನಿಸುಗಳನ್ನೇ ಕಾಣದ ಅವನಿ ಹೆಸರಿನಲ್ಲಿ ನಾಟಕ ಮಾಡುತ್ತಿರುವ ರಾಣಿ ಪಾರ್ಟಿಯಲ್ಲಿ ಮುಳುಗಿ ಹೋಗಿದ್ದಾಳೆ. ಆಡಂಬರದ ಬಟ್ಟೆ, ಒಡವೆಗಳನ್ನ ಧರಿಸಿ ಯುವರಾಣಿಯಂತೆ ಮಿಂಚುತ್ತಿರುವ ರಾಣಿ ಅನ್ವಿತಾ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಸತೀಶನ ಜೊತೆಗೆ ರಾಣಿ ಮಾತನಾಡುತ್ತಿರುವುದನ್ನ ಅನ್ವಿತಾ ಕೇಳಿಸಿಕೊಂಡಿದ್ದಾಳೆ. ಹಾಗಾದ್ರೆ, ಪಾರ್ಟಿಯಲ್ಲಿ ಇಂದು ಅಲ್ಲೋಲ ಕಲ್ಲೋಲ ಗ್ಯಾರೆಂಟಿ. ಮುಂದೆ ಓದಿರಿ...

'ಅವನಿ' ತೊದಲಲಿಲ್ಲ ಯಾಕೆ.?
ಮನೆಯಲ್ಲಿ ಎಲ್ಲರ ಜೊತೆಗೆ ತೊದಲು ನುಡಿಗಳಿಂದ ಮಾತನಾಡುವ ಅವನಿ ಹೆಸರಿನ ರಾಣಿ ಫೋನ್ ನಲ್ಲಿ ಸರಾಗವಾಗಿ ಮಾತನಾಡುತ್ತಿದ್ದದ್ದು, ಅನ್ವಿತಾ ಗಮನಕ್ಕೆ ಬಂದಿದೆ.

ನಾಟಕ ಯಾಕೆ ಮಾಡ್ತಿದ್ದೀಯಾ.?
ಫೋನ್ ನಲ್ಲಿ ಅವನಿ (ರಾಣಿ) ಮಾತನಾಡುತ್ತಿದ್ದನ್ನ ಅನ್ವಿತಾ ಸ್ಪಷ್ಟವಾಗಿ ಕೇಳಿಸಿಕೊಂಡಿದ್ದಾಳೆ. ಅವನಿ ಸ್ವಲ್ಪ ಕೂಡ ತೊದಲದೆ, ಸಲೀಸಲಾಗಿ ಮಾತನಾಡಿದ್ದು ಅನ್ವಿತಾಗೆ ಆಘಾತ ನೀಡಿದೆ. ಹೀಗಾಗಿ, ಹಿಂದು ಮುಂದು ಯೋಚನೆ ಮಾಡದೆ ಸೀದಾ ಅವನಿ (ರಾಣಿ) ಮುಂದೆ ಹೋಗಿ ''ಯಾಕೆ ನಾಟಕ ಮಾಡ್ತಿದ್ದೀಯಾ.?'' ಅಂತ ಅನ್ವಿತಾ ಕೇಳಿದ್ದಾಳೆ.

ಪಾರ್ಟಿಯಲ್ಲಿ ಮಾದ.!
ದೀಪಿಕಾ ಮಾಡಿರುವ ಪ್ಲಾನ್ ಅನುಸಾರವಾಗಿ ಪಾರ್ಟಿಯಲ್ಲಿ ಮಾದ ಸರ್ವರ್ ವೇಷದಲ್ಲಿದ್ದಾನೆ. ಯಾವುದೇ ಕ್ಷಣದಲ್ಲಿ ಮಾದ, ರಾಣಿಯನ್ನ ಕರೆದುಕೊಂಡು ಹೋಗಬಹುದು. ಹಾಗಾದ್ರೆ, ಪಾರ್ಟಿಯಲ್ಲಿ ಅಲ್ಲೋಲ ಕಲ್ಲೋಲ ನಡೆಯುವುದು ಗ್ಯಾರೆಂಟಿ.

ದೀಪಿಕಾ ಪ್ಲಾನ್ ಸಕ್ಸಸ್ ಆಗುತ್ತಾ.?
ದೀಪಿಕಾ ಮಾಡಿರುವ ಪ್ಲಾನ್ ಮಾದನಿಗೆ ಮಾತ್ರ ಗೊತ್ತು. ತಾಯಿ ಸಿತಾರ ದೇವಿಗೆ ಮಗಳು ದೀಪಿಕಾ ಹಾಕಿರುವ ಸ್ಕೆಚ್ ಇನ್ನೂ ಗೊತ್ತಾಗಿಲ್ಲ. ಈ ನಡುವೆ ಅನ್ವಿತಾ ಮುಂದೆ ರಾಣಿ ತಗಲಾಕೊಂಡಿದ್ದಾಳೆ. ಇಂದು ಏನಾಗುತ್ತೋ, ನೋಡಬೇಕು.


Click it and Unblock the Notifications











