ಸಿತಾರ ದೇವಿ ಆಸೆ ನುಚ್ಚುನೂರು: ಅವನಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ.!
''ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನ ರಮಣ್ ನನ್ನ ಹೆಸರಿಗೆ ಬರೆಯುತ್ತಾನೆ. ಆಸ್ಟ್ರೇಲಿಯಾದಲ್ಲಿರುವ ಪ್ರಾಜೆಕ್ಟ್ ನನ್ನ ಪಾಲಾಗುತ್ತೆ. ನಾನು ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ ಆಗುವೆ'' ಅಂತೆಲ್ಲಾ ಸಿತಾರ ದೇವಿ ಕನಸು ಕಾಣ್ತಿದ್ರು.
''ನಿಮಗೆ ರಮಣ್ ಬಗ್ಗೆ ತುಂಬಾ ಹೆಮ್ಮೆ ಆಗುತ್ತೆ'' ಅಂತ ಎಲ್ಲರೂ ಪದೇ ಪದೇ ಹೇಳ್ತಿದ್ರಿಂದ, ''ಆಸ್ತಿ ನನ್ನ ಹೆಸರಿಗೆ ಬರುತ್ತಿದೆ'' ಎಂಬ ಗುಂಗಿನಲ್ಲೇ ಸಿತಾರ ದೇವಿ ಇದ್ದರು. ಆದ್ರೆ, ಅದ್ಯಾವಾಗ ವಿವಾಹ ವಾರ್ಷಿಕೋತ್ಸವದ ಪಾರ್ಟಿಯಲ್ಲಿ ಎಲ್ಲರ ಮುಂದೆ ಆಸ್ಟ್ರೇಲಿಯಾದ ಪ್ರಾಜೆಕ್ಟ್ 'ಅವನಿ' ಹೆಸರಿಗೆ ಬರೆದಿರುವೆ ಅಂತ ರಮಣ್ ಘೋಷಿಸಿದ್ರೋ, ಸಿತಾರ ದೇವಿಗೆ ಆದ ಆಘಾತ ಅಷ್ಟಿಷ್ಟಲ್ಲ.
ಇಲ್ಲಿಯವರೆಗೂ ಸಿತಾರ ದೇವಿ ಕಂಡ ಕನಸೆಲ್ಲಾ ನುಚ್ಚುನೂರಾಗಿದೆ. ಕೋಟಿ ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಅವನಿ ಹೆಸರಿಗೆ ಹೋದ ಕಾರಣ, ಸಿತಾರ ದೇವಿ ಹೃದಯ ಸಮುದ್ರ ಕಲಕಿದೆ.
ಯಾವುದು ಆಗಬಾರದು ಅಂತ ಸಿತಾರ ದೇವಿ ಅಂದುಕೊಳ್ತಿದ್ರೋ, ಅದು ಕಡೆಗೂ ನಡೆದೇ ಹೋಯ್ತು. ಇನ್ನು 'ಅವನಿ' ನಾಟಕಕ್ಕೆ ಸಿತಾರ ದೇವಿ ಯಾವ ತಿರುವು ಕೊಡ್ತಾರೋ.. ಏನೋ..? ಮುಂದೆ ಓದಿರಿ...

ಕಡೆಗೂ ಘೋಷಿಸಿದ ರಮಣ್
''ವಿವಾಹ ವಾರ್ಷಿಕೋತ್ಸವ'ದ ಪಾರ್ಟಿಯಲ್ಲಿ ದೊಡ್ಡ ಅನೌನ್ಸ್ ಮೆಂಟ್ ಮಾಡುವೆ'' ಅಂತ ರಮಣ್ ಹೇಳುತ್ತಲೇ ಇದ್ದರು. ಆದ್ರೆ, ಆ ಘೋಷಣೆ ಯಾವ ಕುರಿತಾದದ್ದು ಎಂಬುದು ಸಿತಾರ ದೇವಿಗೆ ಗೊತ್ತಿರಲಿಲ್ಲ. ಪಾರ್ಟಿಯಲ್ಲಿ ಆಸ್ಟ್ರೇಲಿಯಾದ ಪ್ರಾಜೆಕ್ಟ್ ಅವನಿ ಹೆಸರಿಗೆ ಅಂತ ರಮಣ್ ಘೋಷಿಸಿದ್ಮೇಲೆ, ಸಿತಾರ ದೇವಿ ಅಕ್ಷರಶಃ ಶಾಕ್ ಆದರು.

ಮಾದನಿಗೆ 'ಚಮಕ್' ನೀಡಿದ ರಾಣಿ
ಇನ್ನೇನು ಎಲ್ಲರ ಮುಂದೆ ಬಂದು ರಾಣಿ ಬಂಡವಾಳವನ್ನ ಮಾದ ಬಯಲು ಮಾಡಬೇಕಿತ್ತು. ಆದ್ರೆ, ಅಷ್ಟರಲ್ಲಿ ಎಲ್ಲರ ಗಮನ ಬೇರೆ ಕಡೆ ಹೋಗುವ ಹಾಗೆ ಮಾಡಿ... ಮಾದ ಬಳಿ ಹೋಗಿ ಕಣ್ಣೀರು ಸುರಿಸಿಬಿಟ್ಟಳು ರಾಣಿ. ಪ್ರೇಯಸಿ ರಾಣಿ ಕಣ್ಣೀರಿಗೆ ಮಾದ ಕರಗಿ ಹೋದ. ಹೀಗಾಗಿ ದೀಪಿಕಾ ಮಾಡಿದ್ದ ಪ್ಲಾನ್ ಮಕಾಡೆ ಮಲಗಿತು.

ದೀಪಿಕಾ ಎಷ್ಟೇ ಹೇಳಿದ್ರೂ, ಮಾದ ಕೇಳಲಿಲ್ಲ.!
''ಎಲ್ಲರ ಮುಂದೆ ಹೋಗಿ ಸತ್ಯ ಹೇಳು.. ಇಲ್ಲಾಂದ್ರೆ, ರಾಣಿ ನಿನ್ನ ಕೈಗೆ ಸಿಗಲ್ಲ'' ಅಂತ ಮಾದನಿಗೆ ದೀಪಿಕಾ ಎಷ್ಟೇ ಹೇಳಿದರೂ, ಅದನ್ನ ಕೇಳುವ ತಾಳ್ಮೆ ಮಾದನಿಗೆ ಇರಲಿಲ್ಲ. ''ರಾಣಿ ಈ ಕೆಲಸ ಮಾಡ್ತಿರೋದು ನನ್ನ ಒಳ್ಳೆಯದ್ದಕ್ಕೆ'' ಅಂತ ಪ್ಲಾನ್ ನ ಅರ್ಧಕ್ಕೆ ಕೈಬಿಟ್ಟು ಪಾರ್ಟಿಯಿಂದ ಮಾದ ಹೊರಗೆ ಹೊರಟಿದ್ದಾನೆ.

ಅಸಹಾಯಕ ಸ್ಥಿತಿಯಲ್ಲಿ ದಿನಕರ್
ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿ 'ಕಳ್ಳಿ' ರಾಣಿ ಕೈಗೆ ಹೋಗುತ್ತಿದ್ಯಲ್ಲ ಅನ್ನೋದು ದಿನಕರ್ ಗೆ ಗೊತ್ತಿದ್ದರೂ, ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಸತ್ಯ ಹೇಳಿದರೆ ನಿಜವಾದ 'ಅವನಿ'ಗೆ ಅಪಾಯ ತಪ್ಪಿದ್ದಲ್ಲ ಎಂಬ ಭಯ ದಿನಕರ್ ಗೆ ಕಾಡುತ್ತಿದೆ.

ಪತ್ತೆ ಹಚ್ಚಬೇಕು
''ಪದೇ ಪದೇ ಅವನಿ (ರಾಣಿ) ಸುಳ್ಳು ಹೇಳ್ತಿರೋದು ಯಾಕೆ.? ನಮ್ಮ ಮುಂದೆ ಅವನಿ (ರಾಣಿ) ನಾಟಕ ಮಾಡ್ತಿರೋದು ಯಾಕೆ.?'' ಎಂಬ ಅನುಮಾನ ಅನ್ವಿತಾ ಹಾಗೂ ರಾಧಾ ಮನಸ್ಸಲ್ಲಿ ಮೂಡಿದೆ. ಈಗಲಾದರೂ, ಅವನಿ ಬಗ್ಗೆ ಅನ್ವಿತಾ-ರಾಧಾ ಸತ್ಯ ತಿಳಿದುಕೊಳ್ಳುವ ಪ್ರಯತ್ನ ಮಾಡ್ತಾರಾ, ನೋಡಬೇಕು.

ರಾಣಿ ಕಥೆ ಮುಗಿಸುತ್ತಾರಾ ಸಿತಾರ.?
ತಾವು ಕಣ್ಣಿಟ್ಟಿದ್ದ ಆಸ್ಟ್ರೇಲಿಯಾ ಪ್ರಾಜೆಕ್ಟ್ ಅವನಿ (ರಾಣಿ) ಕೈಸೇರಿರೋದ್ರಿಂದ, ರಾಣಿ ಕಥೆ ಮುಗಿಸಲು ಸಿತಾರ ದೇವಿ ಸಜ್ಜಾಗ್ತಾರಾ.? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.


Click it and Unblock the Notifications











