For Quick Alerts
  ALLOW NOTIFICATIONS  
  For Daily Alerts

  ಇನ್ನಾದರೂ ಅವನಿ ತಾಯಿಯ ಮಡಿಲು ಸೇರಲಿ ದೇವರೇ.!

  |

  ''ಇನ್ನಾದರೂ ಅವನಿ ತನ್ನ ತಾಯಿಯ ಮಡಿಲು ಸೇರುವ ಹಾಗೆ ಮಾಡಪ್ಪಾ ದೇವರೇ..'' - ಹೀಗಂತ ಪ್ರಾರ್ಥಿಸುತ್ತಿರುವವರು 'ರಾಧಾ ರಮಣ' ಧಾರಾವಾಹಿಯನ್ನು ಇಲ್ಲಿಯವರೆಗೂ ಬಿಡದಂತೆ ನೋಡುತ್ತಿರುವ ವೀಕ್ಷಕರು.!

  ಚಿಕ್ಕವಯಸ್ಸಿನಿಂದಲೂ ಅವನಿಯನ್ನು ಸಿತಾರ ದೇವಿ ಅದ್ಯಾಕೆ ಕೂಡಿ ಹಾಕಿ ಚಿತ್ರಹಿಂಸೆ ಕೊಡುತ್ತಿದ್ದಾಳೋ, ಗೊತ್ತಿಲ್ಲ. ಅದನ್ನ ಹೇಳುವ ಪ್ರಯತ್ನ ನಿರ್ದೇಶಕರು ಮಾಡಿಲ್ಲ. ಆದ್ರೆ ಈಗ ಅವನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಪರೀತ ಜ್ವರದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

  ಇತ್ತ ಸಿತಾರ ದೇವಿ ಮಾಡಿದ ಪ್ಲಾನ್ ವೊಂದರ ಪರಿಣಾಮ ದಿನಕರ್ ಮತ್ತು ರಾಧಾ ಮನೆಯಿಂದ ಹೊರಬಂದರು. ಆಘಾತಗೊಂಡ ದಿನಕರ್ ಗೆ ಎದೆ ನೋವು ಕಾಣಿಸಿಕೊಂಡಿದ್ರಿಂದ, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಅಚ್ಚರಿ ಅಂದ್ರೆ, ಅವನಿ ಮತ್ತು ದಿನಕರ್ ಆಸ್ಪತ್ರೆಯ ಐ.ಸಿ.ಯು ನಲ್ಲಿ ಅಕ್ಕ-ಪಕ್ಕದ ಬೆಡ್ ಮೇಲೆ ಮಲಗಿದ್ದಾರೆ. ಇಷ್ಟು ದಿನ ಅವನಿಯನ್ನ ಹುಡುಕುತ್ತಿದ್ದ ದಿನಕರ್ ಪಕ್ಕದಲ್ಲೇ ಇದೀಗ ಅವನಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಲಾದರೂ, ಅವನಿ ತನ್ನ ಮನೆ ಸೇರ್ತಾಳಾ.?

  ಸಿತಾರ ಪ್ಲಾನ್ ಠುಸ್.?

  ಸಿತಾರ ಪ್ಲಾನ್ ಠುಸ್.?

  ರಾಧಾ ಮತ್ತು ರಮಣ್ ಸಂಸಾರ ಒಡೆಯಲು ಸಿತಾರ ದೇವಿ 'ಅಟ್ಯಾಕ್' ನಾಟಕವಾಡಿದ್ದಳು. ಸಿತಾರ ದೇವಿ ಮೇಲೆ ಅಟ್ಯಾಕ್ ನಡೆಯಲು ದಿನಕರ್ ಕಾರಣ ಎಂಬಂತೆ ಬಿಂಬಿಸಲಾಗಿತ್ತು. ನಿರೀಕ್ಷೆಯಂತೆ ದಿನಕರ್ ಪರ ರಾಧಾ ದನಿ ಎತ್ತಿದಳು. ಕೊನೆಗೆ ದಿನಕರ್ ಜೊತೆಯಲ್ಲೇ ಮನೆಬಿಟ್ಟು ಹೋಗಲು ರಾಧಾ ನಿರ್ಧರಿಸಿದಳು. ಅಲ್ಲಿಗೆ, ಸಿತಾರ ಪ್ಲಾನ್ ಸಕ್ಸಸ್ ಎನ್ನುವಷ್ಟರಲ್ಲಿ ಎಲ್ಲಾ ಉಲ್ಟಾ ಆಯಿತು.

  ದೀಪಿಕಾ ಪ್ಲಾನ್ ಮತ್ತೆ ಫ್ಲಾಪ್ ಆಯ್ತು: ರಮಣ್ ಗೆ ದೊಡ್ಡ ಶಾಕ್ ಸಿಕ್ತು.!ದೀಪಿಕಾ ಪ್ಲಾನ್ ಮತ್ತೆ ಫ್ಲಾಪ್ ಆಯ್ತು: ರಮಣ್ ಗೆ ದೊಡ್ಡ ಶಾಕ್ ಸಿಕ್ತು.!

  ಮನೆ ಬಿಟ್ಟು ಹೋಗಲು ಮುಂದಾದ ತಾಯಿ-ಮಗಳು

  ಮನೆ ಬಿಟ್ಟು ಹೋಗಲು ಮುಂದಾದ ತಾಯಿ-ಮಗಳು

  ದಿನಕರ್ ಮತ್ತು ರಾಧಾ ಮನೆ ಬಿಟ್ಟು ಹೋಗಿದ್ರಿಂದ, ತಾವೂ ಮನೆಯಲ್ಲಿ ಇರಲ್ಲ ಎಂದು ಸರಸ್ವತಿ ಮತ್ತು ಅನ್ವಿತಾ ಹೊರಗೆ ಬಂದಿದ್ದಾರೆ. ದಿನಕರ್ ಮತ್ತು ರಾಧಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  ಇಷ್ಟು ದಿನಕ್ಕೆ ನಿಜವಾದ 'ಅವನಿ'ಗೆ ಬಿಡುಗಡೆಯ ಭಾಗ್ಯ ಲಭಿಸಿತು.!ಇಷ್ಟು ದಿನಕ್ಕೆ ನಿಜವಾದ 'ಅವನಿ'ಗೆ ಬಿಡುಗಡೆಯ ಭಾಗ್ಯ ಲಭಿಸಿತು.!

  ದಿನಕರ್ ಗೆ ಎದೆನೋವು

  ದಿನಕರ್ ಗೆ ಎದೆನೋವು

  ಮನೆ ಬಿಟ್ಟು ಹೊರಗೆ ಬಂದ್ಮೇಲೆ, ದಿನಕರ್ ಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ವಿಷಯ ತಿಳಿದ ರಮಣ್, ಆಸ್ಪತ್ರೆಗೆ ಭೇಟಿ ನೀಡ್ತಾರಾ, ಇಲ್ವಾ ಅನ್ನೋದೇ ಸದ್ಯದ ಕುತೂಹಲ. ಒಂದ್ವೇಳೆ, ಆಸ್ಪತ್ರೆಗೆ ರಮಣ್ ಎಂಟ್ರಿಕೊಟ್ಟರೆ, ಸಿತಾರ ದೇವಿಗೆ ದೊಡ್ಡ ಗಂಡಾಂತರ ಕಾದಿದೆ ಅಂತಲೇ ಅರ್ಥ.

  ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!

  ಈಗಲಾದರೂ ಕುಟುಂಬ ಸೇರಲಿ.!

  ಈಗಲಾದರೂ ಕುಟುಂಬ ಸೇರಲಿ.!

  ಅವನಿಗಾಗಿ ಇಲ್ಲಿಯವರೆಗೂ ದಿನಕರ್ ಸಿಕ್ಕಾಪಟ್ಟೆ ತಲಾಶ್ ಮಾಡಿದ್ದಾರೆ. ಈಗ ನೋಡಿದ್ರೆ, ಅವನಿ ಪಕ್ಕದಲ್ಲೇ ಇದ್ದಾಳೆ. ಈಗಲಾದರೂ ಅವನಿ ತನ್ನ ಕುಟುಂಬ ಸೇರುತ್ತಾಳಾ.? ನಿರ್ದೇಶಕ ಮಹಾಶಯರು ಈ ತಿರುವನ್ನೂ ಡಮ್ಮಿ ಮಾಡಲಿಲ್ಲ ಅಂದ್ರೆ ಸಾಕು.!

  English summary
  Radha Ramana serial written update: Avani and Dinakar hospitalized.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X