ದೀಪಿಕಾ ಪ್ಲಾನ್ ಮತ್ತೆ ಫ್ಲಾಪ್ ಆಯ್ತು: ರಮಣ್ ಗೆ ದೊಡ್ಡ ಶಾಕ್ ಸಿಕ್ತು.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ದೀಪಿಕಾ ಒಂಥರಾ ಡಮ್ಮಿ ಪೀಸ್ ಇದ್ದ ಹಾಗೆ. ಗಂಡ-ಹೆಂಡತಿಯಾದ ರಾಧಾ ಮತ್ತು ರಮಣ್ ರನ್ನ ದೂರ ಮಾಡಲು, ರಮಣ್ ಪ್ರೀತಿ ಪಡೆಯಲು ದೀಪಿಕಾ ಇಲ್ಲಿಯವರೆಗೂ ಮಾಡಿರುವ ಪ್ಲಾನ್ ಒಂದೆರಡಲ್ಲ. ಆದ್ರೆ, ಒಮ್ಮೆ ಕೂಡ ಆಕೆಯ ಪ್ಲಾನ್ ಸಕ್ಸಸ್ ಆಗಿಲ್ಲ ಅನ್ನೋದೇ ದುರಂತ.!
ಒಪ್ಪಂದದ ಮದುವೆ ಮಾಡಿಕೊಂಡಿದ್ದ ರಾಧಾ-ರಮಣ್ ಕಾಂಟ್ರ್ಯಾಕ್ ಪೇಪರ್ ಇಟ್ಟುಕೊಂಡು ಸಂಚು ರೂಪಿಸಿದಾಗಲೂ ದೀಪಿಕಾ ಸಫಲ ಆಗಲಿಲ್ಲ. ಪ್ರತಿ ಬಾರಿ ದೀಪಿಕಾ ಏನೇ ಪ್ಲಾನ್ ಮಾಡಿದರೂ ಅದು ಉಲ್ಟಾ ಹೊಡೆಯುತ್ತಿದೆ. ಈಗಲೂ ಆಗಿರುವುದು ಇದೇ.!
ರಾಧಾ ಮತ್ತು ರಮಣ್ ರನ್ನ ಬೇರೆ ಬೇರೆ ಮಾಡಲು ಅವನಿ (ರಾಣಿ) ಯನ್ನ ಮನೆ ಬಿಟ್ಟು ಹೋಗುವಂತೆ ದೀಪಿಕಾ ಸೂಚಿಸಿದ್ದಳು. ಇದ್ದಕ್ಕಿದ್ದಂತೆ ಅವನಿ ನಾಪತ್ತೆಯಾದ ಕಾರಣ ರಮಣ್ ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಪೊಲೀಸ್ ಸ್ಟೇಷನ್ ನಲ್ಲಿ ಅವನಿ (ರಾಣಿ) ಮತ್ತು ಮಾದನನ್ನು ಒಟ್ಟಿಗೆ ನೋಡಿ ರಮಣ್ ಶಾಕ್ ಆಗಿದ್ದಾರೆ. ಮುಂದೆ ಓದಿರಿ...

ರಾಧಾ ಹೇಳಿದ್ದನ್ನ ಕೇಳಿರಲಿಲ್ಲ.!
ಮನೆಯಿಂದ ಹೊರಗೆ ಹೋಗುವ ಅವನಿ (ರಾಣಿ) ಮಾದನನ್ನು ಗುಟ್ಟಾಗಿ ಭೇಟಿ ಮಾಡುತ್ತಾಳೆ ಅಂತ ಪದೇ ಪದೇ ರಾಧಾ ಹೇಳಿದಾಗಲೂ, ರಮಣ್ ಕೇಳಿರಲಿಲ್ಲ. ಆದ್ರೀಗ, ರೆಸಾರ್ಟ್ ಒಂದರಲ್ಲಿ ಅವನಿ (ರಾಣಿ) ಮತ್ತು ಮಾದ ಜೊತೆಗೆ ಇದ್ದರು ಅಂತ ಪೊಲೀಸ್ ನವರೇ ಹೇಳಿದ್ದಾರೆ. ಅಲ್ಲದೇ, ''ಅವನಿ ಕಿಡ್ನ್ಯಾಪ್ ಆಗಿರಲಿಲ್ಲ. ಸ್ವಇಚ್ಛೆಯಿಂದಲೇ ಮಾದನ ಜೊತೆಗೆ ಇದ್ದರು'' ಎಂದು ಪೊಲೀಸ್ ಹೇಳಿದ್ದರಿಂದ ಅವನಿ ಬಗ್ಗೆ ರಮಣ್ ತಲೆಯಲ್ಲಿ ಅನುಮಾನ ಶುರುವಾಗಿದೆ.

ಇಷ್ಟಾದರೂ ಬಾಯಿ ಬಿಡದ ರಾಣಿ
ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರೂ, ಅವನಿ (ರಾಣಿ) ಮಾತ್ರ ಬಾಯಿ ಬಿಡುತ್ತಿಲ್ಲ. 'ಮಾದನ ಜೊತೆಗೆ ಇದ್ದದ್ದು ನಿಜನಾ.?' ಅಂತ ಕೇಳಿದರೆ, ''ನನಗೇನೂ ಗೊತ್ತಿಲ್ಲ'' ಎನ್ನುತ್ತಲೇ ರಾಣಿ ಇನ್ನೂ ನಾಟಕ ಮಾಡುತ್ತಿದ್ದಾಳೆ.

ಸತ್ಯ ಹೇಳಿದ ಮಾದ
''ರಾಧಾ ಹೇಳಿದ್ದೆಲ್ಲವೂ ಸತ್ಯ. ನಾನು-ಅವನಿ ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ'' ಅಂತ ರಮಣ್ ಮುಂದೆ ಮಾದ ಸತ್ಯ ಹೇಳಿದ್ದಾನೆ. ಮಾದ ಆಡಿದ ಈ ಮಾತನ್ನು ಕೇಳಿ ಸಿತಾರ ದೇವಿ ಮತ್ತು ದೀಪಿಕಾ ಗುಂಡಿಗೆ ನಡುಗಿದೆ. ರಮಣ್ ಗೆ ದೊಡ್ಡ ಆಘಾತವಾಗಿದೆ.

ಮುಂದೇನಾಗುತ್ತೆ.?
ಮಾದ ಹೇಳಿದ್ದನ್ನ ಕೇಳಿ ರಮಣ್ ಶಾಕ್ ಆಗಿದ್ದಾರೆ. ರಾಧಾ ಹೇಳಿದ್ದೆಲ್ಲವೂ ಸತ್ಯ ಎಂಬುದು ಸಾಬೀತಾಗಿದೆ. ದೀಪಿಕಾ ಮತ್ತೊಮ್ಮೆ ಮುಗ್ಗರಿಸಿ ಬಿದ್ದಿದ್ದಾಳೆ. ಮಾದ ಹೇಳಿದ ಒಂದು ಸತ್ಯದಿಂದ ಮುಂದೇನಾಗುತ್ತೆ ಅನ್ನೋದೇ ಸದ್ಯದ ಕುತೂಹಲ.


Click it and Unblock the Notifications











