ಇಷ್ಟು ದಿನಕ್ಕೆ ನಿಜವಾದ 'ಅವನಿ'ಗೆ ಬಿಡುಗಡೆಯ ಭಾಗ್ಯ ಲಭಿಸಿತು.!
ಚಿಕ್ಕವಯಸ್ಸಿನಿಂದಲೂ ರುದ್ರನ ಕಪಿಮುಷ್ಟಿಯಲ್ಲಿ ಬೆಳೆದ ಅವನಿ ಇದೇ ಮೊಟ್ಟ ಮೊದಲ ಬಾರಿಗೆ ಧೈರ್ಯ ಮಾಡಿದ್ದಾಳೆ. ಅಮ್ಮನ ಮಡಿಲು ಸೇರುವ ತವಕದಲ್ಲಿ ರುದ್ರನ ಬಂಧನದಿಂದ 'ಅವನಿ' ಹೊರಗೆ ಬಂದಿದ್ದಾಳೆ.
ಇಷ್ಟು ದಿನ ಸಿತಾರ ದೇವಿ ಕೊಡುತ್ತಿದ್ದ ಚಿತ್ರಹಿಂಸೆಯನ್ನು ಅನುಭವಿಸಿ, ನರಳುತ್ತಿದ್ದ ಅವನಿ ಕಡೆಗೂ ಗಟ್ಟಿ ಮನಸ್ಸು ಮಾಡಿ ಹೊರಗೆ ಕಾಲಿಟ್ಟಿದ್ದಾಳೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರುವ ಅವನಿ ಬೀದಿ ಬೀದಿ ಅಲೆಯುತ್ತಿದ್ದಾಳೆ.
ಇನ್ನಾದರೂ ಅವನಿ ತನ್ನ ಗೂಡು ಸೇರುತ್ತಾಳಾ.? ಅವನಿ ಹೆಸರಿನಲ್ಲಿ ರಮಣ್ ಮನೆಯಲ್ಲಿ ನಾಟಕ ಮಾಡುತ್ತಿರುವ ರಾಣಿ ಬಣ್ಣ ಬಯಲಾಗುತ್ತಾ.? ಸಿತಾರ ದೇವಿಯ ಮುಖವಾಡ ಕಳಚಿ ಬೀಳುತ್ತಾ.? ಎಂಬುದೇ ಸದ್ಯದ ಕುತೂಹಲ.

ದೀಪಿಕಾ ಪ್ಲಾನ್ ಠುಸ್
ರಾಧಾ ಮತ್ತು ರಮಣ್ ರನ್ನ ದೂರ ಮಾಡಲು ಅವನಿ (ರಾಣಿ)ಯನ್ನ ದಾಳವಾಗಿ ಬಳಸಿಕೊಳ್ಳುತ್ತಿದ್ದಳು ದೀಪಿಕಾ. ದಿಢೀರ್ ಅಂತ ಅವನಿ ಮನೆ ಬಿಟ್ಟು ಹೋದರೆ, ರಾಧಾ-ರಮಣ್ ಮಧ್ಯೆ ಜಗಳ ಆಗುತ್ತದೆ, ಇಬ್ಬರೂ ಬೇರೆ ಬೇರೆ ಆಗುತ್ತಾರೆ ಅನ್ನೋದು ದೀಪಿಕಾ ಪ್ಲಾನ್ ಆಗಿತ್ತು. ಆದ್ರೆ, ರಾಣಿ-ಮಾದ ಒಟ್ಟಿಗೆ ಸಿಕ್ಕಿಬಿದ್ದ ಪರಿಣಾಮ, ದೀಪಿಕಾ ಪ್ಲಾನ್ ಉಲ್ಟಾ ಹೊಡೆದಿದೆ. ಅವನಿ (ರಾಣಿ) ವಿಚಾರದಲ್ಲಿ ರಾಧಾ ಹೇಳಿದ್ದೆಲ್ಲಾ ನಿಜ ಎಂಬುದು ರಮಣ್ ಮುಂದೆ ಸಾಬೀತಾಗಿದೆ.

ಪ್ರೀತಿಯನ್ನು ಒಪ್ಪಿಕೊಂಡ ರಾಣಿ
''ನಾನು ಮಾದನನ್ನು ಪ್ರೀತಿ ಮಾಡುತ್ತಿದ್ದೇನೆ'' ಎಂದು ಮನೆಯವರೆಲ್ಲರ ಮುಂದೆ ಅವನಿ ವೇಷಧಾರಿ ರಾಣಿ ಒಪ್ಪಿಕೊಂಡಿದ್ದಾಳೆ. ಈ ಕಟುಸತ್ಯವನ್ನು ಕೇಳಿ ರಮಣ್ ಸೇರಿದಂತೆ ಇಡೀ ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಆದಿ ಮುಂದೆ ಅವನಿ
ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ಅವನಿ, ರಾಧಾ ಸಹೋದರ ಆದಿ ಮುಂದೆ ಪ್ರತ್ಯಕ್ಷವಾಗಿದ್ದಾಳೆ. ಫುಟ್ ಪಾತ್ ಮೇಲೆ ಕೂತಿದ್ದ ಅವನಿಯನ್ನ ಆದಿ ಮನೆಗೆ ಕರೆದುಕೊಂಡು ಹೋಗುತ್ತಾನಾ.? ನಿಜವಾದ ಅವನಿ ಈಗಲಾದರೂ ಮನೆ ಸೇರುತ್ತಾಳಾ.? ನೋಡಬೇಕು.

ರಮಣ್ ಮುಂದಿನ ನಡೆ ಏನು.?
ಅವನಿ (ರಾಣಿ) ಮುಗ್ಧೆ ಅಲ್ಲ ಎಂಬ ಸತ್ಯ ರಮಣ್ ಗೆ ಗೊತ್ತಾಗಿದೆ. ಮಾದ-ರಾಣಿ (ಅವನಿ) ಪರಸ್ಪರ ಪ್ರೀತಿ ಮಾಡುತ್ತಿರುವ ಕಾರಣ, ಇಬ್ಬರಿಗೂ ಮದುವೆ ಮಾಡಲು ರಮಣ್ ಮುಂದಾಗುತ್ತಾನಾ.? ಎಂಬುದು ಸದ್ಯ ವೀಕ್ಷಕರಲ್ಲಿ ಕಾಡುತ್ತಿರುವ ಪ್ರಶ್ನೆ.


Click it and Unblock the Notifications











