ನಾಪತ್ತೆಯಾದ ಅವನಿ: ಇನ್ಮೇಲೆ ದಿನಕರ್ ಆಟ ಶುರು.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ಒನ್ಸ್ ಅಗೇನ್ ರೋಚಕ ಘಟ್ಟ ತಲುಪಿದೆ.
ಇಷ್ಟು ದಿನ 'ಅವನಿ'ಯನ್ನ ಕೂಡಿ ಹಾಕಿ, ದಿನಕರ್ ನ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದ ಸಿತಾರ ದೇವಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿತಾರ ದೇವಿ ಕುತಂತ್ರ, ರಾಧಾ-ರಮಣ್ ನ ದೂರ ಮಾಡಬೇಕೆನ್ನುವ ದೀಪಿಕಾ ಬಯಕೆ, ಡ್ಯೂಪ್ಲಿಕೇಟ್ ಅವನಿ.... ಈ ಎಲ್ಲಾ ಸತ್ಯಗಳು ದಿನಕರ್ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ.
ವಿಡಿಯೋ ಇಟ್ಟುಕೊಂಡು ದಿನಕರ್ ಹೊಸ ಆಟ ಆರಂಭಿಸಿದ್ದಾರೆ. ಇಷ್ಟು ದಿನ ತಾನೇ ಮಾಸ್ಟರ್ ಮೈಂಡ್ ಎಂದು ಬೀಗುತ್ತಿದ್ದ ಸಿತಾರ ದೇವಿ ಇದೀಗ ಇಂಗು ತಿಂದ ಮಂಗನಂತೆ ಆಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಸಿತಾರ ದೇವಿ ಮುಖವಾಡ ಇನ್ನಾದರೂ ಕಳಚಿ ಬೀಳುತ್ತಾ.?

ಸಿತಾರ ದೇವಿಗೆ ಬಿಗ್ ಶಾಕ್.!
ದಿನಕರ್ ಕಡೆಯಿಂದ ಸಿತಾರ ದೇವಿಗೆ ಬಿಗ್ ಶಾಕ್ ಸಿಕ್ಕಿದೆ. ಸಿತಾರ ದೇವಿ ಬಂಡವಾಳವನ್ನೆಲ್ಲಾ ವಿಡಿಯೋದಲ್ಲಿ ದಿನಕರ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಿಜವಾದ 'ಅವನಿ' ಮನೆಗೆ ವಾಪಸ್ ಬರಬೇಕು, ಇಲ್ಲಾಂದ್ರೆ ವಿಡಿಯೋ ರಮಣ್ ಕೈ ಸೇರುತ್ತೆ ಅಂತ ಸಿತಾರ ದೇವಿಗೆ ದಿನಕರ್ ಬಿಸಿ ಮುಟ್ಟಿಸಿದ್ದಾರೆ.

ಅತ್ತ ಅವನಿ ನಾಪತ್ತೆ.!
ಇಷ್ಟು ದಿನ ರುದ್ರನ ಸುಪರ್ದಿಯಲ್ಲಿದ್ದ ಅವನಿ ದಿಢೀರ್ ಅಂತ ಎಸ್ಕೇಪ್ ಆಗಿದ್ದಾಳೆ. 'ಅವನಿ'ಯನ್ನ ಹುಡುಕುವಲ್ಲಿ ರುದ್ರ ತಲ್ಲೀನನಾಗಿದ್ದಾನೆ. ದಾರಿ ಪರಿಚಯ ಇಲ್ಲದ ಅವನಿ ತನ್ನ ಗೂಡು ಸೇರುವುದಾದರೂ ಹೇಗೆ.?

ಎರಡು ದಿನ ಗಡುವು
ಇನ್ನೆರಡು ದಿನದಲ್ಲಿ ಅವನಿ ಮನೆಯಲ್ಲಿ ಇರಬೇಕು ಎಂಬುದು ದಿನಕರ್ ಆಜ್ಞೆ. ಆದ್ರೆ, ಅಷ್ಟರಲ್ಲಿ ಅವನಿ ಎಸ್ಕೇಪ್ ಆಗಿದ್ದಾಳೆ. ನಾಪತ್ತೆ ಆಗಿರುವ ಅವನಿ, ಅಮ್ಮನ ಮಡಿಲು ಸೇರುತ್ತಾಳಾ.? ಇಲ್ಲ ಅಷ್ಟರಲ್ಲಿ ಸಿತಾರ ದೇವಿ ತಿರುಗುಬಾಣ ಪ್ರಯೋಗ ಮಾಡ್ತಾರಾ.?

ದೀಪಿಕಾಗೆ ಮತ್ತೆ ಹೊಟ್ಟೆ ಉರಿ
ರಾಧಾ-ರಮಣ್ ಮಧ್ಯೆ ಕಂದಕ ಸೃಷ್ಟಿಯಾಗಿದೆ ಅನ್ನೋದು ದೀಪಿಕಾ ಭಾವನೆ. ಆದ್ರೆ, ರಾಧಾ-ರಮಣ್ ಮತ್ತೆ ಒಂದಾಗುತ್ತಿರುವುದನ್ನು ನೋಡಿ ದೀಪಿಕಾಗೆ ಹೊಟ್ಟೆ ಉರಿ ಶುರುವಾಗಿದೆ. ಇದರ ಪರಿಣಾಮದಿಂದ ಮುಂದೆ ಏನೇನು ಆಗುತ್ತೋ.?!


Click it and Unblock the Notifications











