'ರಾಧಾ ರಮಣ' ಧಾರಾವಾಹಿಯಲ್ಲಿ ಏನಿರಬಹುದು ಡಿಸೆಂಬರ್ 5 ರ ಗುಟ್ಟು.?

By Harshitha

Recommended Video

ಡಿಸೆಂಬರ್ 5 ಸೀಕ್ರೆಟ್ ಬಗ್ಗೆ ಅವನಿ ಬಾಯಿ ಬಿಟ್ರೆ ಸಿತಾರಾ ಕಥೆ ಮುಗಿದೇ ಹೋಯ್ತು | Filmibeat Kannada

ರಮಣ್ ಮನೆಗೆ ಸದ್ಯ 'ಅವನಿ'ಯಾಗಿ ಕಾಲಿಟ್ಟಿರುವಾಕೆ ಒರಿಜಿನಲ್ ಅಲ್ಲ, ಡ್ಯೂಪ್ಲಿಕೇಟ್ ಎಂಬ ಡಿಬೇಟು ಫೇಸ್ ಬುಕ್ ನಲ್ಲಿ ಸಿಕ್ಕಾಪಟ್ಟೆ ನಡೆಯುತ್ತಿದೆ. ಈಗಿರುವ 'ಅವನಿ' ನಿಜವಾದವಳೋ, ಅಲ್ವೋ ಇನ್ನೂ ಪಕ್ಕಾ ಆಗಿಲ್ಲ. ಈ ನಡುವೆ ಇನ್ನೊಂದು ಹೊಸ ತಿರುವಿಗೆ 'ರಾಧಾ ರಮಣ' ಧಾರಾವಾಹಿ ಸಾಕ್ಷಿ ಆಗಿದೆ.

'ಅವನಿ'ಗೆ ಹಳೆಯ ನೆನಪುಗಳನ್ನೆಲ್ಲ ವಾಪಸ್ ತರಿಸಲು ರಮಣ್ ಹಾಗೂ ರಾಧಾ ಶತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ. 'ಸೈಕ್ಯಾಟ್ರಿಸ್ಟ್' ಬಳಿ 'ಅವನಿ'ಯನ್ನ ಕರೆದುಕೊಂಡು ಹೋಗುವುದು ಬೇಡ ಅಂತ ಸರಸ್ವತಿ ಹಠ ಮಾಡಿದ್ಮೇಲೆ, ರಮಣ್ ಮನೆಗೆ ಕಾಲಿಟ್ಟವರು ಇರ್ಫಾನ್ ಚಾಚಾ.

ಮೊದಲು ಇರ್ಫಾನ್ ಚಾಚಾರನ್ನ ನೋಡಿದಾಗ, 'ಅವನಿ'ಗೆ ಗುರುತೇ ಸಿಗಲಿಲ್ಲ. ಬಳಿಕ ಮಾನಸಿ ಬಂದು ಇರ್ಫಾನ್ ಚಾಚಾ ರನ್ನ ಮಾತನಾಡಿಸಿದ್ಮೇಲೆ, 'ಅವನಿ' ನೆನಪಾಗಿರುವಂತೆ ಮ್ಯಾನೇಜ್ ಮಾಡಿರುವುದು ಆಕೆ ಡ್ಯೂಪ್ಲಿಕೇಟ್ ಎಂಬ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

Radha Ramana serial: Avani speaks about December 5th

ಇರ್ಫಾನ್ ಚಾಚಾ ಜೊತೆ ಮಾತನಾಡಿ, ಫೈಯರ್ ಆಕ್ಸಿಡೆಂಟ್ ಬಗ್ಗೆ ತಿಳಿದುಕೊಂಡ್ಮೇಲೆ, ''ನನಗೆ ಎಲ್ಲ ನೆನಪಾಗಿದೆ'' ಅಂತ ಇಡೀ ಕುಟುಂಬದ ಮುಂದೆ 'ಅವನಿ' ಹಾಜರ್ ಆಗಿದ್ದಾಳೆ. ಇಷ್ಟು ಸಾಲದು ಅಂತ 'ಡಿಸೆಂಬರ್ 5' ಎಂದೂ 'ಅವನಿ' ಹೇಳಿದ್ದಾಳೆ.

'ಡಿಸೆಂಬರ್ 5' ಎಂದು 'ಅವನಿ' ಹೇಳುತ್ತಿದ್ದಂತೆಯೇ, ಎಲ್ಲರಿಗೂ ಶಾಕ್ ಆಯ್ತು. ಹಾಗಾದ್ರೆ, ಏನಿದು 'ಡಿಸೆಂಬರ್ 5' ರ ಗುಟ್ಟು.? ಎಂಬುದನ್ನ ತಿಳಿಯಲು ಇಂದಿನ ಸಂಚಿಕೆ ನೋಡಬೇಕು.

More from Filmibeat

English summary
Radha Ramana serial written update: Avani speaks about December 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X