ಅಂತೂ ಇಂತೂ ದಿನಕರ್ ಮನೆ ಸೇರಾಯ್ತು.!

By Harshitha

Recommended Video

ಮನೆಗೆ ವಾಪಸ್ ಆದ ದಿನಕರ್ ಸತ್ಯ ಬಾಯಿ ಬಿಡ್ತಾನಾ..? | Filmibeat Kannada

ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ನೆ.ಲ.ನರೇಂದ್ರ ಬಾಬು ಕಣಕ್ಕೆ ಇಳಿದಿದ್ದರು. ಆದ್ರೆ, ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಲಿಲ್ಲ.

ಚುನಾವಣೆ ಕಾರಣಕ್ಕಾಗಿ 'ರಾಧಾ ರಮಣ' ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದ ನೆ.ಲ.ನರೇಂದ್ರ ಬಾಬು ಇದೀಗ ಮತ್ತೆ ಕಿರುತೆರೆ ಕಡೆ ಮುಖ ಮಾಡಿದ್ದಾರೆ.

ಎಲೆಕ್ಷನ್ ನಿಂದಾಗಿ 'ರಾಧಾ ರಮಣ' ಧಾರಾವಾಹಿಯಲ್ಲಿ ನೆ.ಲ.ನರೇಂದ್ರ ಬಾಬು ನಿರ್ವಹಿಸುತ್ತಿದ್ದ ದಿನಕರ್ ಪಾತ್ರಕ್ಕೆ ಕೊಂಚ ಟ್ವಿಸ್ಟ್ ನೀಡಲಾಗಿತ್ತು. ಸಿತಾರ ದೇವಿ ಸೆರೆಮನೆಯಲ್ಲಿ ದಿನಕರ್ ಇಷ್ಟು ದಿನ ಬಂಧಿಯಾಗಿದ್ದರು ಎಂದು ಧಾರಾವಾಹಿಯಲ್ಲಿ ತೋರಿಸಲಾಗಿದೆ.

Radha Ramana serial: Dinakar comes back home

'ಅವನಿ' ಸಿಕ್ಕ ದಿನದಿಂದ ಕಾಣೆ ಆಗಿದ್ದ ದಿನಕರ್ ರನ್ನ ಹುಡುಕಿ ಹುಡುಕಿ ಅನ್ವಿತಾ ಹಾಗೂ ರಾಧಾ ಸುಸ್ತಾಗಿದ್ದರು. ಇಲ್ಲಿಯವರೆಗೂ ದಿನಕರ್ ರನ್ನ ಕೂಡಿ ಹಾಕಿದ್ದ ಸಿತಾರ ದೇವಿ ಇದೀಗ ಅವರನ್ನ ಮನೆಗೆ ಕಳುಹಿಸುವ ದೊಡ್ಡ ಮನಸ್ಸು ಮಾಡಿದ್ದಾಳೆ. ಜೊತೆಗೆ ಯಾವ ಸತ್ಯವನ್ನೂ ಬಾಯಿ ಬಿಡದಂತೆ ತಾಕೀತು ಮಾಡಿದ್ದಾಳೆ.

ಒಂದ್ವೇಳೆ ಸತ್ಯ ಬಾಯ್ಬಿಟ್ಟರೆ, 'ಅವನಿ'ಗೆ ಅಪಾಯ ತಪ್ಪಿದ್ದಲ್ಲ ಅಂತ ದಿನಕರ್ ಗೆ ಸಿತಾರ ದೇವಿ ಬ್ಲಾಕ್ ಮೇಲ್ ಮಾಡಿದ್ದಾಳೆ. ಸಿತಾರ ದೇವಿ ಕಪಿಮುಷ್ಟಿಯಿಂದ ಬಿಡಿಸಿಕೊಂಡು ದಿನಕರ್ ಮನೆ ತಲುಪಿದ್ದಾರೆ. ಸಿತಾರ ದೇವಿ ಬ್ಲಾಕ್ ಮೇಲ್ ಗೆ ಬೆದರಿ ದಿನಕರ್ ತಮ್ಮ ಬಾಯಿಗೆ ಬೀಗ ಹಾಕಿಕೊಳ್ತಾರೋ, ಇಲ್ಲ ಸತ್ಯ ಬಾಯ್ಬಿಡ್ತಾರೋ, ಇಂದಿನ ಸಂಚಿಕೆಯಲ್ಲಿ ನೋಡಬೇಕು.

More from Filmibeat

English summary
Radha Ramana serial written update: Dinakar comes back home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X