ಮನೆಗೆ ಬಂದ್ಮೇಲೆ ಬಾಂಬ್ ಸಿಡಿಸಿದ ದಿನಕರ್.! ಸಿತಾರ ದೇವಿಗೆ ಶಾಕ್.!
''ಯಾವುದೇ ಕಾರಣಕ್ಕೂ ಮನೆಯಲ್ಲಿ ದಿನಕರ್ ಸತ್ಯ ಬಾಯಿ ಬಿಡುವುದಿಲ್ಲ. 'ಅವನಿ'ಗೆ ತೊಂದರೆ ಆದರೆ ದಿನಕರ್ ಸಹಿಸುವುದಿಲ್ಲ'' ಎಂಬ ನಂಬಿಕೆ ಮೇಲೆ ದಿನಕರ್ ನ ಸಿತಾರ ದೇವಿ ಮನೆಗೆ ಕಳುಹಿಸಿಕೊಟ್ಟಳು. ಆದ್ರೀಗ, ಸಿತಾರ ದೇವಿ ಪ್ಲಾನ್ ಉಲ್ಟಾ ಹೊಡೆಯುವ ಹಾಗೆ ಕಾಣುತ್ತಿದೆ.
ಮನೆಗೆ ಬಂದ ಕೂಡಲೆ ಸಿತಾರ ದೇವಿ ಹೇಳಿದ ಹಾಗೆ, 'ಕಿಡ್ನ್ಯಾಪ್' ಕುರಿತು ದಿನಕರ್ ಪುಂಗಿ ಊದಿದರು. ಅದಾದ್ಮೇಲೆ ಸಿತಾರ ದೇವಿ ಕೂಡ ಮನೆಗೆ ಎಂಟ್ರಿ ಕೊಟ್ಟು ದಿನಕರ್ ಕಷ್ಟ-ಸುಖ ವಿಚಾರಿಸಿದರು. ಸಾಲದಕ್ಕೆ, 'ಅವನಿ' ಹೆಸರಿನಲ್ಲಿ ಮನೆಗೆ ಸೇರಿದ 'ರಾಣಿ' ಕೂಡ ದಿನಕರ್ ನ ಮಾತನಾಡಿಸಿದಳು.
ನಿಜವಾದ 'ಅವನಿ' ಅಮ್ಮನಿಗಾಗಿ ಹಪಹಪಿಸುತ್ತಿರುವಾಗ, ಡ್ಯೂಪ್ಲಿಕೇಟ್ 'ಅವನಿ' ಮನೆ ಸೇರಿರುವುದು ದಿನಕರ್ ಗೆ ಸಹಿಸಲಾಗಲಿಲ್ಲ. ಹೀಗಾಗಿ, ''ಕೋಗಿಲೆ ಗೂಡಲ್ಲಿ ಸೇರಿಕೊಂಡಿರುವ ಕಾಗೆ ನೀನು.. ಜಾಸ್ತಿ ದಿನ ನೀನು ಈ ಮನೆಯಲ್ಲಿ ಉಳಿಯಲು ಸಾಧ್ಯ ಇಲ್ಲ.. ನಾನು ಇದಕ್ಕೆ ಅವಕಾಶ ಮಾಡಿಕೊಡಲ್ಲ'' ಅಂತ 'ರಾಣಿ' ಮುಂದೆ ದಿನಕರ್ ಬಾಂಬ್ ಸಿಡಿಸಿದರು.

ದಿನಕರ್ ಆಡಿದ ಮಾತನ್ನು ಕೇಳಿ ಸಿತಾರ ದೇವಿ ಹಾಗೂ ದೀಪಿಕಾ ಅಕ್ಷರಶಃ ಶಾಕ್ ಆಗಿದ್ದಾರೆ. ಪ್ಲಾನ್ ಉಲ್ಟಾ ಹೊಡೆಯಬಹುದು ಎಂಬ ಅನುಮಾನ ಅವರಿಬ್ಬರಿಗೂ ಕಾಡುತ್ತಿದೆ.
ಆಡಿದ ಮಾತಿನಂತೆ ರಾಣಿಯನ್ನ ಮನೆಯಿಂದ ಓಡಿಸಲು ದಿನಕರ್ ಪ್ರಯತ್ನ ಪಡುತ್ತಾರಾ.? ಈಗಲಾದರೂ ದಿನಕರ್ ಸತ್ಯ ಬಿಚ್ಚಿಡುತ್ತಾರಾ.? ಮುಂದೇನಾಗುತ್ತೋ, ನೋಡೋಣ...


Click it and Unblock the Notifications











