ಅಂತೂ ಇಂತೂ ರಾಧಾ ರಮಣ್ ಒಂದಾದರು: ಇನ್ಮೇಲಿದೆ ಹೊಸ ತಿರುವು.!

Recommended Video

ಕೊನೆಗೂ ರಾಧಾ ರಮಣ್ ಒಂದಾದ್ರು | ಆದ್ರೆ ಇನ್ಮುಂದೆ ಇದೆ ಹೊಸ ಟ್ವಿಸ್ಟ್ | FILMIBEAT KANNADA

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ್' ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ.

ಮದುವೆ ಆಗಿ ವರ್ಷ ಕಳೆದರೂ, ಇನ್ನೂ ತಮ್ಮ ಮನಸ್ಸಿನಲ್ಲಿ ಇರುವ ಪ್ರೀತಿಯನ್ನ ಹೇಳಿಕೊಳ್ಳಲು ಒದ್ದಾಡುತ್ತಿದ್ದ ರಾಧಾ ಮತ್ತು ರಮಣ್ ಸದ್ಯ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

''ರಮಣ್ ಗೆ ಆಕ್ಸಿಡೆಂಟ್ ಆಗಿದೆ, ರಮಣ್ ಆರೋಗ್ಯ ಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ. ಆಪರೇಶನ್ ನಡೆಯುತ್ತಿದೆ'' ಎಂಬುದನ್ನೆಲ್ಲ ಕೇಳಿ ಆಘಾತಗೊಂಡಿದ್ದ ರಾಧಾ ಕಡೆಗೆ ರಮಣ್ ಪ್ರತ್ಯಕ್ಷವಾಗುತ್ತಿದ್ದಂತೆಯೇ ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನೆಲ್ಲ ಹೊರಹಾಕಿಬಿಟ್ಟರು.

ಅಂತೂ ಇಂತೂ 480 ಸಂಚಿಕೆಗಳು ಉರುಳಿದ ಬಳಿಕ ಕಡೆಗೂ ರಾಧಾ ಬಾಯಲ್ಲಿ ''ರಮಣ್ ಐ ಲವ್ ಯು'' ಎಂಬ ಮಾತು ಬಂದಿದೆ. ಇದನ್ನ ನೋಡಿ ದೀಪಿಕಾ ಉರ್ಕೊಂಡಿದ್ರೆ, ರಾಧಾ-ರಮಣ್ ಫ್ಯಾನ್ಸ್ ಅಂತೂ ಖುಷಿ ಆಗಿದ್ದಾರೆ. ಮುಂದೆ ಓದಿರಿ...

ರಾಧಾ-ರಮಣ್ ಲವ್ ಸ್ಟೋರಿ ಶುರು

ರಾಧಾ-ರಮಣ್ ಲವ್ ಸ್ಟೋರಿ ಶುರು

'ರಾಧಾ ರಮಣ' ಧಾರಾವಾಹಿಯಲ್ಲಿ ಇದೀಗ ರಾಧಾ-ರಮಣ್ ರ ರೋಮ್ಯಾಂಟಿಕ್ ಅಧ್ಯಾಯ ಆರಂಭವಾಗಿದೆ. ಕಾಂಟ್ರ್ಯಾಕ್ಟ್ ಮ್ಯಾರೇಜ್ ಮಾಡಿಕೊಂಡಿದ್ದ ರಾಧಾ-ರಮಣ್ ಮಧ್ಯೆ ಇದ್ದ ಎಲ್ಲ ಕನ್ ಫ್ಯೂಶನ್ ಗಳು ಶಮನಗೊಂಡಿದೆ. ರಾಧಾ ಮತ್ತು ರಮಣ್ ಪರಸ್ಪರ ತಮ್ಮ ಪ್ರೀತಿಯನ್ನ ನಿವೇದಿಸಿಕೊಂಡಿದ್ದಾರೆ.

ಆಕ್ಸಿಡೆಂಟ್ ಟ್ವಿಸ್ಟ್.!

ಆಕ್ಸಿಡೆಂಟ್ ಟ್ವಿಸ್ಟ್.!

ರಮಣ್ ಗೆ ಆಕ್ಸಿಡೆಂಟ್ ಆಗಿದ್ದು ನಿಜ. ಆದ್ರೆ, ಮನೆಯವರಿಗೆ ಮಾಹಿತಿ ತಲುಪಿದ ಹಾಗೆ ರಮಣ್ ಪ್ರಾಣಕ್ಕೆ ಯಾವುದೇ ತೊಂದರೆ ಆಗಿರಲಿಲ್ಲ. ರಮಣ್ ಗಾಗಿ ಆಪರೇಶನ್ ಕೂಡ ನಡೆಯುತ್ತಿರಲಿಲ್ಲ. ಫುಲ್ ಫಿಟ್ ಅಂಡ್ ಫೈನ್ ಆಗಿದ್ದ ರಮಣ್ ಮುಂದೆ ಶಾಕ್ ನಲ್ಲಿದ್ದ ರಾಧಾ ತಮ್ಮ ಪ್ರೀತಿಯನ್ನ ಹೇಳಿಕೊಂಡರು.

ರಮಣ್ ಗೆ ಖುಷಿಯೋ ಖುಷಿ.!

ರಮಣ್ ಗೆ ಖುಷಿಯೋ ಖುಷಿ.!

ರಾಧಾಗೆ ಪ್ರಪೋಸ್ ಮಾಡಲು ಇಲ್ಲಿಯವರೆಗೂ ಎಷ್ಟೋ ಬಾರಿ ರಮಣ್ ಹರಸಾಹಸ ಪಟ್ಟಿದ್ದಾರೆ. ಆದ್ರೆ, ಪ್ರತಿ ಬಾರಿಯೂ ಒಂದಲ್ಲ ಒಂದು ಅಡ್ಡಿ-ಆತಂಕ ಎದುರಾಗುತ್ತಲೇ ಇತ್ತು. ಹೀಗಿರುವಾಗಲೇ, ಸ್ವತಃ ರಾಧಾ ತಮಗೆ ಪ್ರಪೋಸ್ ಮಾಡಿದ್ದು ಸಹಜವಾಗಿ ರಮಣ್ ಗೆ ಖುಷಿ ಕೊಟ್ಟಿದೆ.

ದೀಪಿಕಾಗೆ ಫುಲ್ ಶಾಕ್

ದೀಪಿಕಾಗೆ ಫುಲ್ ಶಾಕ್

ರಾಧಾ ಮತ್ತು ರಮಣ್ ಮಧ್ಯೆ ಕೆಲ ಗೊಂದಲಗಳು ಮೂಡಲು ದೀಪಿಕಾ ಕಾರಣ. ಇದೀಗ ರಾಧಾ-ರಮಣ್ ಒಂದಾಗಿರುವುದನ್ನು ನೋಡಿ ದೀಪಿಕಾಗೆ ಶಾಕ್ ಆಗಿದೆ. ''ಇನ್ಮುಂದೆ ರಮಣ್ ನನಗೆ ಸಿಗಲ್ಲ'' ಅಂತ ಸಾಯಲು ಹೊರಟಿದ್ದ ದೀಪಿಕಾ ಕೊನೆಗೆ ಯು-ಟರ್ನ್ ತೆಗೆದುಕೊಂಡು ರಾಧಾ-ರಮಣ್ ರನ್ನ ದೂರ ಮಾಡಲು ಪಣ ತೊಟ್ಟಿದ್ದಾಳೆ. ಇದರಲ್ಲಿ ದೀಪಿಕಾ ಯಶಸ್ವಿ ಆಗುತ್ತಾಳಾ.? ಮುಂದೆ ಇನ್ಯಾವ ತಿರುವು ಕಾದಿದೆಯೋ.?

More from Filmibeat

English summary
Radha Ramana serial written update: Finally Radha proposes to Raman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X