ಅಂತೂ ಇಂತೂ 'ಅವನಿ' ಸಿಕ್ಕಳು: ಎಲ್ಲರ ಮೊಗದಲ್ಲೂ ಮೂಡಿದೆ ನಗು.!

By Harshitha

Recommended Video

ನಿಜವಾದ ಅವನಿಯನ್ನು ಮತ್ತೆ ಅಬೇಸ್ ಮಾಡಿದ್ಲು ಸಿತಾರಾ ದೇವಿ | Filmibeat Kannada

ಕಡೆಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ'ವಾಗಿದೆ.

'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಎಂಬ ಅಧ್ಯಾಯ ಶುರುವಾಗಿ ವಾರಗಳೇ ಉರುಳಿತ್ತು. ಪ್ರಕೃತಿ ಆಸ್ಪತ್ರೆಯಲ್ಲಿ 'ಅವನಿ'ಗೆ ಆಪರೇಶನ್ ಮಾಡಿಸಿ, ಇನ್ನೇನು ದೀಪಿಕಾ ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ವಿನಯ್ ಮರ್ಡರ್ ಆಯ್ತು. ಧುತ್ತೆಂದು ಪ್ರತ್ಯಕ್ಷವಾದ ರುದ್ರ 'ಅವನಿ'ಯನ್ನ ಆಸ್ಪತ್ರೆಯಿಂದಲೇ ಕಿಡ್ನ್ಯಾಪ್ ಮಾಡಿದ.

ಆಂಬ್ಯುಲೆನ್ಸ್ ನ ಚೇಸಿಂಗ್ ಮಾಡಿ, ರಾತ್ರಿ ಪೂರ್ತಿ ಪೊಲೀಸರು ಕಾಡಲ್ಲಿ ಹುಡುಕಾಟ ನಡೆಸಿದ್ಮೇಲೆ, 'ಅವನಿ' ರಮಣ್ ತೆಕ್ಕೆಗೆ ಸಿಕ್ಕಳು. ಇಪ್ಪತ್ತು ವರ್ಷಗಳಿಂದ 'ಅವನಿ'ಯನ್ನು ನೋಡಲು ಹಾತೊರೆಯುತ್ತಿದ್ದ ರಮಣ್ ಹಾಗೂ ತಾಯಿ ಸರಸ್ವತಿ ಮೊಗದಲ್ಲಿ ಮಂದಹಾಸ ಮೂಡಿತು.

ಮತ್ತಿನ್ಯಾವುದೇ ಟ್ವಿಸ್ಟ್ ಕೊಡದೇ, ಕೊನೆಗೂ 'ಅವನಿ' ರಮಣ್ ಕೈಗೆ ಸಿಕ್ಕಿದ್ದಕ್ಕೆ ವೀಕ್ಷಕರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದೆ ಓದಿರಿ...

ಆಂಬ್ಯುಲೆನ್ಸ್ ಹತ್ತಿದರೂ ಸಿಗಲಿಲ್ಲ.!

ಆಂಬ್ಯುಲೆನ್ಸ್ ಹತ್ತಿದರೂ ಸಿಗಲಿಲ್ಲ.!

ಪ್ರಕೃತಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಲ್ಲಿ 'ಅವನಿ'ಯನ್ನ ಕಿಡ್ನ್ಯಾಪ್ ಮಾಡಿಕೊಂಡು ರುದ್ರ ಹೊರಟಾಗ, ಆಂಬ್ಯುಲೆನ್ಸ್ ಹತ್ತಿ ರುದ್ರನನ್ನ ಹಿಡಿಯಲು ರಮಣ್ ಪ್ರಯತ್ನ ಪಟ್ಟರು. ಆದ್ರೆ, ಅದು ಸಾಧ್ಯ ಆಗಲಿಲ್ಲ.

ಕೆಟ್ಟು ನಿಂತ ಆಂಬ್ಯುಲೆನ್ಸ್

ಕೆಟ್ಟು ನಿಂತ ಆಂಬ್ಯುಲೆನ್ಸ್

ಗಂಟೆಗಳ ಗಟ್ಟಲೆ ಜರ್ನಿ ಮಾಡಿದ ನಂತರ, ದೇವಸ್ಥಾನವೊಂದರ ಮುಂದೆ ಆಂಬ್ಯುಲೆನ್ಸ್ ಕೆಟ್ಟಿ ನಿಲ್ತು. 'ಅವನಿ' ಮ್ಯಾಟರ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರ್ತು. ರುದ್ರನಿಗಾಗಿ ಹುಡುಕಾಟ ಶುರು ಆಯ್ತು. ಕಡೆಗೆ ದೇವರ ಕೃಪೆಯಿಂದ ಪೊಲೀಸರ ಮುಂದೆ ರುದ್ರ ಪ್ರತ್ಯಕ್ಷ ಆದ.

ರಾತ್ರಿ ಪೂರ್ತಿ ಕಾಡಲ್ಲಿ ಹುಡುಕಾಟ

ರಾತ್ರಿ ಪೂರ್ತಿ ಕಾಡಲ್ಲಿ ಹುಡುಕಾಟ

ಎಸ್ಕೇಪ್ ಆಗಲು ರುದ್ರ ಶತಪ್ರಯತ್ನ ಪಟ್ಟರೂ ಸಾಧ್ಯ ಆಗಲಿಲ್ಲ. ಹೆಗಲ ಮೇಲೆ 'ಅವನಿ'ಯನ್ನ ಹಾಕೊಂಡು ಕಾಡಲ್ಲಿ ರಾತ್ರಿ ಪೂರ್ತಿ ಕಳೆದರೂ, ರುದ್ರನ ಪ್ಲಾನ್ ಸಕ್ಸಸ್ ಆಗಲಿಲ್ಲ. ರುದ್ರನ ಕಾಲಿಗೆ ಗುಂಡೇಟು ಬಿದ್ದಿದ್ರಿಂದ, ಬೆಳಕಾಗುವ ಹೊತ್ತಿಗೆ 'ಅವನಿ' ರಮಣ್ ಕೈಸೇರಿದಳು.

ಸಿಕ್ಕಿಬಿದ್ದ ರುದ್ರ

ಸಿಕ್ಕಿಬಿದ್ದ ರುದ್ರ

ಇಷ್ಟು ವರ್ಷಗಳ ಕಾಲ 'ಅವನಿ'ಗೆ ಕೇರ್ ಟೇಕರ್ ಆಗಿದ್ದ ರುದ್ರ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ರುದ್ರನಿಗೆ ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕುತ್ತಿದ್ದಾರೆ.

ಸಿತಾರ ನಾಪತ್ತೆ

ಸಿತಾರ ನಾಪತ್ತೆ

ಇಷ್ಟೆಲ್ಲ ಬೆಳವಣಿಗೆ ಆದರೂ ಸಿತಾರ ಮಾತ್ರ ಪತ್ತೆ ಆಗಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲೋ ಹೋಗ್ಬಿಟ್ಟಿದ್ದಾರೆ. ರುದ್ರ ಪೊಲೀಸರಿಗೆ ಸಿಕ್ಕಿ ಬಿದ್ದಿರೋದು, 'ಅವನಿ' ರಮಣ್ ಗೆ ಸಿಕ್ಕಿರೋದು ಸಿತಾರಗೆ ಗೊತ್ತಿಲ್ಲ. ಹೀಗಾಗಿ ದೀಪಿಕಾಗೂ 'ಪುಕ ಪುಕ' ಶುರುವಾಗಿದೆ.

ರಮಣ್ ಮೊಗದಲ್ಲಿ ಮಂದಹಾಸ

ರಮಣ್ ಮೊಗದಲ್ಲಿ ಮಂದಹಾಸ

ಕಡೆಗೂ 'ಅವನಿ' ಮುಖ ನೋಡಿದ್ದಕ್ಕೆ ರಮಣ್ ಹಾಗೂ ತಾಯಿ ಸರಸ್ವತಿ ಫುಲ್ ಖುಷಿಯಾಗಿದ್ದಾರೆ. ಖುಷಿ ಕುಟುಂಬವನ್ನು ನೋಡಿ ವೀಕ್ಷಕರು ಕೂಡ ಸಂತಸ ಪಟ್ಟಿದ್ದಾರೆ.

More from Filmibeat

English summary
Radha Ramana serial written update: Finally Raman meets Avani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X