ಈ 'ರಾಣಿ' ದೊಡ್ಡ ಕಳ್ಳಿ: ಮನೆ ಮಂದಿಗೆಲ್ಲ ಕಾಗೆ ಹಾರಿಸಿದ ಸಿತಾರ ದೇವಿ.!
Recommended Video

ಕಡೆಗೂ ವೀಕ್ಷಕರ ಊಹೆ ನಿಜವಾಗಿದೆ. ನೋಡುಗರ ಡೌಟ್ ಗೆ ಕ್ಲಾರಿಟಿ ಸಿಕ್ಕಿದೆ. ಇಷ್ಟು ದಿನ ಆಕೆ ನಿಜವಾದ 'ಅವನಿ'ಯೋ, ಅಲ್ವೋ ಅಂತ ತಲೆಗೆ ಹುಳ ಬಿಟ್ಟುಕೊಂಡವರಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಶುರುವಾಗಿ ವಾರಗಳೇ ಉರುಳಿದೆ. ಆಶಿತಾ ಚಂದ್ರಪ್ಪ 'ಅವನಿ' ಪಾತ್ರಧಾರಿಯಾಗಿ ಎಂಟ್ರಿಕೊಟ್ಟರು. ಇದೀಗ ಧಾರಾವಾಹಿಯಲ್ಲಿ ಆಶಿತಾ ಚಂದ್ರಪ್ಪ 'ಅವನಿ' ಅಲ್ಲ ಬದಲಾಗಿ 'ದೊಡ್ಡ ಕಳ್ಳಿ' ರಾಣಿ ಪಾತ್ರಧಾರಿ ಎಂಬ ತಿರುವು ಸಿಕ್ಕಿದೆ.
ಸಾಲದಕ್ಕೆ, ಆಕೆ 'ಅವನಿ' ಅಲ್ಲ 'ರಾಣಿ' ಎಂಬ ಸತ್ಯ ಗೊತ್ತಾಗಿರುವುದು ಮಾಸ್ಟರ್ ಮೈಂಡ್ ಸಿತಾರಾ ದೇವಿ ಪುತ್ರಿ ದೀಪಿಕಾಗೆ. ಇಷ್ಟು ದಿನ ಮಗಳಿಂದಲೂ, ಸತ್ಯ ಬಚ್ಚಿಟ್ಟಿದ್ದ ಸಿತಾರಾ ದೇವಿ ಈಗ ಮಗಳ ಕೈಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮುಂದೆ ಓದಿರಿ...

ಕೊರವಂಜಿ ನುಡಿದ ಸತ್ಯ
ಅದ್ಯಾಕೋ, ಏನೋ.. ಕೆಲ ಧಾರಾವಾಹಿಗಳಿಗೆ ಸ್ವಾಮೀಜಿ ಹಾಗೂ ಕೊರವಂಜಿಗಳೇ ದಿಕ್ಸೂಚಿಗಳು. ಇದೇ ಫಾರ್ಮುಲಾ 'ರಾಧಾ ರಮಣ' ಸೀರಿಯಲ್ ನಲ್ಲೂ ಅಪ್ಲೈ ಆಗಿದೆ. 'ರಾಧಾ ನಂಬಿರುವುದು ಸತ್ಯ ಅಲ್ಲ. ಆಕೆ ಶತ್ರು ವಿರುದ್ಧ ಗೆದ್ದಿಲ್ಲ' ಎಂದು ಕೊರವಂಜಿ ಹೇಳಿದ್ಮೇಲೆ ರಾಧಾ ತಲೆಯಲ್ಲಿ ಹೆಬ್ಬಾವು ಹರಿದಾಡುತ್ತಿದೆ.

'ರಾಣಿ'ಗೆ ಪುಕ-ಪುಕ
''ಸುಳ್ಳು ಶಾಶ್ವತ ಅಲ್ಲ. ನೀನೂ ಶಾಶ್ವತ ಅಲ್ಲ'' ಅಂತ ಕೊರವಂಜಿ ಹೇಳಿದ್ಮೇಲೆ, ರಾಣಿಗೆ ಹೆದರಿಕೆ ಶುರು ಆಗಿದೆ.

ದೀಪಿಕಾ ಮುಂದೆ ಸತ್ಯ ಅನಾವರಣ
ಇತ್ತ ದೀಪಿಕಾಗೆ ಆಕೆ 'ಅವನಿ' ಅಲ್ಲ 'ರಾಣಿ' ಎಂಬ ಸತ್ಯ ಗೊತ್ತಾಗಿದೆ. ರಾಣಿ ದೊಡ್ಡ ಕಳ್ಳಿ, ಓರ್ವ ಕಾನ್ ಆರ್ಟಿಸ್ಟ್ ಎಂಬ ಸಂಗತಿಯೂ ದೀಪಿಕಾ ಅರಿವಿಗೆ ಬಂದಿದೆ. ತನ್ನ ತಾಯಿ ಸಿತಾರಾ ದೇವಿ ಮಾಡಿರುವ ಮಾಸ್ಟರ್ ಪ್ಲಾನ್ ದೀಪಿಕಾ ಮುಂದೆ ಅನಾವರಣ ಆಗಿದೆ.

ನಿಜವಾದ 'ಅವನಿ' ಈಕೆ
ಕಡೆಗೂ 'ರಾಧಾ ರಮಣ' ಧಾರಾವಾಹಿಯಲ್ಲಿ ನಿಜವಾದ 'ಅವನಿ'ಯ ದರ್ಶನ ವೀಕ್ಷಕರಿಗೆ ಆಗಿದೆ. ಈಕೆಯೇ ಸೀರಿಯಲ್ ನ ರಿಯಲ್ ಅವನಿ.

ಅಷ್ಟಕ್ಕೂ, 'ಅವನಿ' ಎಕ್ಸ್ ಚೇಂಜ್ ಆಗಿದ್ದು ಎಲ್ಲಿ.?
ಮಧ್ಯರಾತ್ರಿ ಕಾಡಲ್ಲಿ ನಿಜವಾದ 'ಅವನಿ'ಯನ್ನ ಬಿಟ್ಟು, ರಾಣಿಯನ್ನ ಹೊತ್ತುಕೊಂಡು ರುದ್ರ ಸರೆಂಡರ್ ಆದನಂತೆ. ಸದ್ಯ 'ಅವನಿ'ಯನ್ನ ಮೈಸೂರು ಮನೆಯಲ್ಲಿ ಸಿತಾರಾ ದೇವಿ ಕೂಡಿಟ್ಟಿದ್ದಾರೆ.

'ಅವನಿ'ಯನ್ನ ನೋಡ್ತಾಳಾ ದೀಪಿಕಾ.?
ಸತ್ಯವೆಲ್ಲ ಗೊತ್ತಾದ್ಮೇಲೆ, ನಿಜವಾದ 'ಅವನಿ'ಯನ್ನ ನೋಡಬೇಕು ಅಂತ ತಾಯಿ ಸಿತಾರಾ ದೇವಿ ಮುಂದೆ ದೀಪಿಕಾ ಬೇಡಿಕೆ ಇಟ್ಟಿದ್ದಾಳೆ. ಪುತ್ರಿಗೆ 'ಅವನಿ'ಯ ದರ್ಶನ ಭಾಗ್ಯವನ್ನ ಸಿತಾರಾ ದೇವಿ ಕರುಣಿಸುತ್ತಾರಾ.? ಇಂದಿನ ಸಂಚಿಕೆಯಲ್ಲಿ ಇನ್ನೇನು ಆಗುವುದೋ.?


Click it and Unblock the Notifications











