ರುದ್ರ ಬಾಯ್ಬಿಡ್ತಿಲ್ಲ: ಆಕೆ ನಿಜವಾದ 'ಅವನಿ' ಹೌದೋ, ಅಲ್ವೋ ಗೊತ್ತಾಗ್ತಿಲ್ಲ.!
Recommended Video

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ದಿನೇ ದಿನೇ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಡುತ್ತಿದೆ.
'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ'ವಾದ ಮೇಲೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. 'ಅವನಿ' ಸಿಕ್ಕ ಮೇಲೆ ದಿನಕರ್ ಪತ್ತೆ ಆಗಿಲ್ಲ. ಅತ್ತ ಪೊಲೀಸ್ ಸ್ಟೇಷನ್ ಸೇರಿರುವ ಕೇರ್ ಟೇಕರ್ ರುದ್ರ ಯಾವುದನ್ನೂ ಬಾಯ್ಬಿಡುತ್ತಿಲ್ಲ. ಸಿತಾರ ದೇವಿ ಮಾಸ್ಟರ್ ಪ್ಲಾನ್ ಯಾರಿಗೂ ಗೊತ್ತಾಗುತ್ತಿಲ್ಲ.

ಸಿಕ್ಕಿರುವ 'ಅವನಿ' ನಿಜವಾದವಳೋ, ಅಥವಾ ಡ್ಯೂಪ್ಲಿಕೇಟೋ ಎಂಬ ವೀಕ್ಷಕರ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. 'ಅವನಿ' ಕೈಗೆ ಮೌಥ್ ಆರ್ಗನ್ ಕೊಟ್ಟು ಹಳೇ ನೆನಪುಗಳನ್ನ ಮೆಲುಕು ಹಾಕಬೇಕು ಅಂತ ರಮಣ್ ಹಾಗೂ ರಾಧಾ ಪ್ರಯತ್ನ ಪಟ್ಟರು. ಆದ್ರೆ, ಅದು ಕೂಡ ಸಫಲ ಆಗಲಿಲ್ಲ. ಅಲ್ಲಿಗೆ, ರಮಣ್ ಮನೆಗೆ ಎಂಟ್ರಿಕೊಟ್ಟಿರುವ 'ಅವನಿ' ಒರಿಜಿನಲ್ ಅಲ್ಲ ಅನ್ನೋದು ವೀಕ್ಷಕರ ಊಹೆ.
ಹಾಗಾದ್ರೆ, ನಿಜವಾದ 'ಅವನಿ' ಎಲ್ಲಿ.? ಸಿತಾರ ಯಾಕೆ ಮನೆಯಲ್ಲಿ 'ಅವನಿ' ಮುಂದೆ ಬರ್ತಿಲ್ಲ.? ದಿನಕರ್ ನಾಪತ್ತೆ ಹಿಂದಿನ ಮರ್ಮ ಏನು.? ಸಿತಾರ ತಲೆಯಲ್ಲಿ ಓಡ್ತಿರೋದೇನು.? ಎಂಬ ಪ್ರಶ್ನೆಗಳಿಗೆ ಆದಷ್ಟು ಬೇಗ ಉತ್ತರ ಕೊಡಲು ನಿರ್ದೇಶಕರೇ ಮನಸ್ಸು ಮಾಡಬೇಕು.


Click it and Unblock the Notifications











