ಇಷ್ಟು ದಿನ ಸಸ್ಪೆನ್ಸ್ ಕೊಟ್ಟಿದ್ದು ಅವಳಿಗಾ? 'ಬಿಗ್ ಬಾಸ್' ಬಳಿಕ ಆಶಿತಾ ಮಾಡ್ತಿರೋದು ಇದೇನಾ?
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿದ ಬಳಿಕ ವಿಜೇತ ಚಂದನ್ ಶೆಟ್ಟಿ 'ಮಾಸ್ಟರ್ ಡ್ಯಾನ್ಸರ್' ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಎಂಟ್ರಿಕೊಟ್ಟರು. ಇನ್ನೂ ಜೆಕೆ, ಶ್ರುತಿ ಪ್ರಕಾಶ್, ಅನುಪಮಾ ಗೌಡ, ಕೃಷಿ ತಾಪಂಡ, ದಯಾಳ್ ಪದ್ಮನಾಭನ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
ಆದ್ರೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ವಲ್ಪ ದಿನ ಜಗನ್ ವಿಚಾರಕ್ಕೆ ಸುದ್ದಿ ಮಾಡಿ, ಬಳಿಕ ಸದ್ದೇ ಇಲ್ಲದಂತೆ ಎಲಿಮಿನೇಟ್ ಆಗಿದ್ದ ಆಶಿತಾ ಚಂದ್ರಪ್ಪ ಈಗೇನ್ ಮಾಡ್ತಿದ್ದಾರೆ ಗೊತ್ತಾ.?
ಅದಾಗಲೇ, 'ಜೊತೆ ಜೊತೆಯಲಿ', 'ನೀಲಿ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ ಆಶಿತಾ ಚಂದ್ರಪ್ಪ ಈಗ ಇನ್ನೊಂದು ಧಾರಾವಾಹಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಷ್ಟು ದಿನ ಆಶಿತಾ ಕ್ಯಾರೆಕ್ಟರ್ ಎಂಟ್ರಿಗೆ 'ಆ' ಧಾರಾವಾಹಿಯಲ್ಲಿ ಸಸ್ಪೆನ್ಸ್ ಕ್ರಿಯೇಟ್ ಮಾಡಲಾಗಿತ್ತು.
ನಿನ್ನೆಯ ಸಂಚಿಕೆಯಲ್ಲಿ ಕಡೆಗೂ ಆ ಸಸ್ಪೆನ್ಸ್ ರಿವೀಲ್ ಆಗಿದ್ದು, ಆಶಿತಾ ಹೊಸ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೆಚ್ಚಿನ ಮಾಹಿತಿ ಪೋಟೋ ಸ್ಲೈಡ್ ಗಳಲ್ಲಿ ಓದಿರಿ...

'ರಾಧಾ ರಮಣ' ಧಾರಾವಾಹಿ ನೋಡ್ತಿದ್ದೀರಾ.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯನ್ನ ನೀವು ನೋಡ್ತಿದ್ದೀರಾ.? ಹಾಗೊಂದು ವೇಳೆ ನೀವು ನೋಡ್ತಿದ್ರೆ, ಪ್ರತಿ ದಿನ 'ಅವನಿ.. ಅವನಿ' ಅಂತ ರಮಣ್, ರಾಧಾ ಹಾಗೂ ಸರಸ್ವತಿ ಕನವರಿಸುವುದು ನಿಮಗೆ ಗೊತ್ತಿರಲೇಬೇಕು. ಆ 'ಅವನಿ' ಬೇರೆ ಯಾರೂ ಅಲ್ಲ, ಇದೇ ಆಶಿತಾ ಚಂದ್ರಪ್ಪ.!

'ಅವನಿ' ಆಗಮನ
'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಎಂಬ ಅಧ್ಯಾಯ ಶುರುವಾಗಿ ವಾರಗಳೇ ಉರುಳಿವೆ. ವಾರಗಳ ಕಾಲ 'ಅವನಿ' ಬಗ್ಗೆ ತೀವ್ರವಾಗಿ ಕುತೂಹಲ ಕ್ರಿಯೇಟ್ ಮಾಡಿದ್ಮೇಲೆ, ನಿನ್ನೆಯ ಸಂಚಿಕೆಯಲ್ಲಿ 'ಅವನಿ' ಮುಖ ತೋರಿಸಲಾಗಿದೆ. 'ಅವನಿ' ಪಾತ್ರದಲ್ಲಿ ಆಶಿತಾ ಚಂದ್ರಪ್ಪ ಕಾಣಿಸಿಕೊಂಡಿದ್ದಾರೆ.

ಪ್ರಮುಖ ಪಾತ್ರಧಾರಿ ಅಲ್ಲ, ಆದರೂ ಬಿಲ್ಡಪ್ ಕಮ್ಮಿ ಇಲ್ಲ.!
'ರಾಧಾ ರಮಣ' ಧಾರಾವಾಹಿಯಲ್ಲಿ ಆಶಿತಾ ಚಂದ್ರಪ್ಪ ಪ್ರಮುಖ ಪಾತ್ರಧಾರಿ ಅಲ್ಲ. ಆದ್ರೆ, ಇಡೀ ಸೀರಿಯಲ್ ನಲ್ಲಿ ಆಶಿತಾ ನಿರ್ವಹಿಸುತ್ತಿರುವ 'ಅವನಿ' ಪಾತ್ರದ ಸುತ್ತ ಸಸ್ಪೆನ್ಸ್ ಸೃಷ್ಟಿಸಲಾಗಿದ್ಯಲ್ಲ, ಅದು ಬೇರೆ ಯಾವ ಪ್ರಮುಖ ಪಾತ್ರಕ್ಕೂ ಕಮ್ಮಿ ಇಲ್ಲ. ಇಷ್ಟು ದಿನ 'ಅವನಿ ಯಾರಿರಬಹುದು.?' ಎಂದು ತಲೆಗೆ ಹುಳ ಬಿಟ್ಟುಕೊಂಡವರಿಗೆ ನಿನ್ನೆ ಆಶಿತಾ ದರ್ಶನವಾಗಿದೆ.

ಆಶಿತಾನೇ 'ಅವನಿ'ನಾ.?
ನಿನ್ನೆಯ 'ರಾಧಾ ರಮಣ' ಸಂಚಿಕೆಯಲ್ಲಿ 'ಅವನಿ'ಯೇ ಆಶಿತಾ ಅಂತ ತೋರಿಸಲಾಗಿದೆ. ಆದ್ರೆ, ಆಶಿತಾನೇ ನಿಜವಾದ 'ಅವನಿ'ಯೋ.? ಇಲ್ಲ ಬೇರೆಯವರಾ.? ಎಂಬ ಅನುಮಾನ ವೀಕ್ಷಕರಿಗೆ ಕಾಡುತ್ತಿದೆ. ಇದಕ್ಕೆ ನಿರ್ದೇಶಕರು ಯಾವಾಗ ಉತ್ತರ ಕೊಡುತ್ತಾರೋ.?


Click it and Unblock the Notifications











