ಮಾದ ಹಾಗೆ ಹೇಳುವುದಕ್ಕೂ, ಪೊಲೀಸ್ ಬರುವುದಕ್ಕೂ ಒಂದೇ ಆಯ್ತು.!
ಇನ್ನೇನು ರಾಣಿ ಬಾಯ್ ಫ್ರೆಂಡ್ ಮಾದ ಎಲ್ಲಾ ಸತ್ಯ ಕಕ್ಕಿಬಿಡುತ್ತಾನೆ... ಅಂತ ವೀಕ್ಷಕರೆಲ್ಲಾ ಕಾದು ಕುಳಿತಿದ್ದರು. ಆದ್ರೆ, ಅಷ್ಟರಲ್ಲಿ 'ರಾಧಾ ರಮಣ' ಧಾರಾವಾಹಿಯ ನಿರ್ದೇಶಕರು ಊಹಿಸಲಾರದ ತಿರುವು ಕೊಟ್ಟುಬಿಟ್ಟಿದ್ದಾರೆ.
ಪಾರ್ಟಿ ನಡೆಯುತ್ತಿದ್ದ ಹೋಟೆಲ್ ನಲ್ಲಿ ಮಾದ ಹಾಗೂ ಅವನಿ (ರಾಣಿ) ಮಾತನಾಡುತ್ತಿದ್ದದ್ದು ರಮಣ್ ಕಣ್ಣಿಗೆ ಬಿತ್ತು. ಸತ್ಯ ಬಾಯಿ ಬಿಡಿಸಲು ರಮಣ್ ಮುಂದಾದಾಗ ''ಇವಳು ನನ್ನ ಗರ್ಲ್ ಫ್ರೆಂಡ್'' ಅಂತ ಮಾದ ಹೇಳಿದ್ನೇ ಹೊರತು ಆಕೆ ಅವನಿ ಅಲ್ಲ 'ರಾಣಿ' ಎಂಬ ಸತ್ಯ ಬಾಯ್ಬಿಡಲಿಲ್ಲ.
ಇದು ಮಾದನಿಗೆ ಕಂಟಕವಾಗಿ ಪರಿಣಮಿಸಿತು. ಯಾಕಂದ್ರೆ, ''ಮಾದ ನನ್ನ ಬಾಯ್ ಫ್ರೆಂಡ್'' ಅಂತ ಅವನಿ (ರಾಣಿ) ಒಪ್ಪಿಕೊಳ್ಳಲಿಲ್ಲ. ಅಷ್ಟರಲ್ಲಿ, ಸಡನ್ನಾಗಿ ಎಂಟ್ರಿಕೊಟ್ಟ ಪೊಲೀಸರು, ಮಾದನನ್ನ ಅರೆಸ್ಟ್ ಮಾಡಲು ಮುಂದಾದರು.

''ಶ್ರೀಮಂತರ ಮನೆಯ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಪ್ರೀತಿಯ ನಾಟಕ ಆಡಿ, ದುಡ್ಡು ಹೊಡೆಯುವುದು ಮಾದ ಮತ್ತು ಗ್ಯಾಂಗ್ ನ ಕೆಲಸ'' ಅಂತ ಪೊಲೀಸರು ಹೇಳಿದರು. ಹೀಗಾಗಿ, ಅವನಿ (ರಾಣಿ) ಬಗ್ಗೆ ರಮಣ್ ಅಂಡ್ ಫ್ಯಾಮಿಲಿಗೆ ಡೌಟ್ ಬರಲಿಲ್ಲ.
ಆದ್ರೆ, ಮಾದನ ಗ್ಯಾಂಗ್ ನಲ್ಲಿ ಒಂದು ಹುಡುಗಿ ಹಾಗೂ ಹುಡುಗ ಇರುವ ವಿಚಾರ ಪೊಲೀಸರಿಗೆ ಗೊತ್ತು. ಆ ಹುಡುಗಿ ಅಲ್ಲೇ ಪಾರ್ಟಿ ನಡೆಯುತ್ತಿರುವ ಜಾಗದಲ್ಲಿ ಇರುವ ಮಾಹಿತಿಯೂ ಪೊಲೀಸರಿಗೆ ಇದೆ. ಹೀಗಾಗಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಅವನಿ (ರಾಣಿ) ಸ್ಕೆಚ್ ಹಾಕುತ್ತಿದ್ದಾಳೆ.
ಪೊಲೀಸರ ಕೈಯಿಂದ ರಾಣಿ ತಪ್ಪಿಸಿಕೊಳ್ತಾಳಾ.? ಮಾದನ ಕಥೆ ಇಲ್ಲಿಗೆ ಮುಗೀತಾ.? ದೀಪಿಕಾ ಪ್ಲಾನ್ ಫ್ಲಾಪ್ ಆಯ್ತಾ.? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಬಹುದು.


Click it and Unblock the Notifications











