ದೀಪಿಕಾ ಪ್ಲಾನ್ ಫ್ಲಾಪ್ ಆಯ್ತು: 'ರಾಧಾ ರಮಣ' ಸಂಬಂಧ ಗಟ್ಟಿ ಆಯ್ತು.!
ಕಡೆಗೂ ಕಲರ್ಸ್ ಕನ್ನಡ ವಾಹಿನಿಯ 'ರಾಧಾ ರಮಣ' ಧಾರಾವಾಹಿಯಲ್ಲಿ ಒಂದೊಳ್ಳೆ ತಿರುವು ಸಿಕ್ಕಿದೆ. ರಾಧಾ ಮತ್ತು ರಮಣ್ ಈಗ ಒಂದಾಗುತ್ತಾರೆ, ಆಗ ಒಂದಾಗುತ್ತಾರೆ ಅಂತ ವರ್ಷದಿಂದಲೂ ಕಾಯುತ್ತಿದ್ದ ವೀಕ್ಷಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಕಾಂಟ್ರಾಕ್ಟ್ ಮದುವೆ ಮಾಡಿಕೊಂಡಿದ್ದ ರಾಧಾ ಮತ್ತು ರಮಣ್ ಮಧ್ಯೆ ಪ್ರೀತಿ ಹುಟ್ಟಿ ಎಷ್ಟೋ ದಿನಗಳು ಕಳೆದಿದ್ದವು. ಆದ್ರೆ, ಮನಸ್ಸಿನಲ್ಲಿ ಇರುವ ಪ್ರೀತಿಯನ್ನ ವ್ಯಕ್ತಪಡಿಸಲು ಏನಾದರೊಂದು ಅಡ್ಡಿ ಆಗುತ್ತಿತ್ತು.
ಅದರಲ್ಲೂ, ರಾಧಾಳನ್ನ ಮನೆಯಿಂದ ಓಡಿಸಬೇಕು... ರಮಣ್ ನ ಪಡೆದುಕೊಳ್ಳಬೇಕು ಎಂಬ ಹಠ ಹೊಂದಿದ್ದ ದೀಪಿಕಾ ಆಗಾಗ ರಾಧಾ-ರಮಣ್ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣಳಾಗಿದ್ದಳು. ಆದ್ರೀಗ, ರಾಧಾ-ರಮಣ್ ನಡುವಿನ ಎಲ್ಲಾ ಮನಸ್ತಾಪಕ್ಕೆ ಮುಕ್ತಿ ಸಿಕ್ಕಿದೆ. ಕಾಂಟ್ರಾಕ್ಟ್ ಮರೆತು ರಾಧಾ-ರಮಣ್ ಗಂಡ-ಹೆಂಡತಿ ಆಗಿದ್ದಾರೆ. ಮುಂದೆ ಓದಿರಿ...

ಮನಸ್ಸಿನ ಮಾತು ಬಿಚ್ಚಿಟ್ಟ ರಾಧಾ-ರಮಣ್
''ರಮಣ್ ಗೆ ಆಕ್ಸಿಡೆಂಟ್ ಆಗಿದೆ'' ಎಂದು ಫೋನ್ ಬಂದಾಗ ಆಘಾತಗೊಂಡಿದ್ದ ರಾಧಾ, ಆಸ್ಪತ್ರೆಯಲ್ಲಿ ಫಿಟ್ ಅಂಡ್ ಫೈನ್ ಆಗಿದ್ದ ರಮಣ್ ನೋಡಿ ತಮ್ಮ ಪ್ರೀತಿಯನ್ನ ನಿವೇದಿಸಿಕೊಂಡರು. ರಮಣ್ ಕೂಡ ರಾಧಾ ಮೇಲೆ ಇಟ್ಟಿರುವ ಪ್ರೀತಿಯನ್ನ ವ್ಯಕ್ತಪಡಿಸಿದರು.

ಪ್ಲಾನ್ ಮಾಡಿದ ದೀಪಿಕಾ
ರಾಧಾ-ರಮಣ್ ರನ್ನ ಹೇಗಾದರೂ ಮಾಡಿ ದೂರ ಮಾಡಬೇಕು ಅಂತ ಪಣ ತೊಟ್ಟ ದೀಪಿಕಾ, ಕಾಂಟ್ರಾಕ್ಟ್ ಪತ್ರವನ್ನ ರಾಧಾ ತವರು ಮನೆಗೆ ಮುಟ್ಟಿಸಿದಳು. ಕಾಂಟ್ರಾಕ್ಟ್ ಪೇಪರ್ ನೋಡಿದ್ಮೇಲೆ ರಾಧಾ ಕುಟುಂಬ ಅಕ್ಷರಶಃ ಶಾಕ್ ಆಯ್ತು.

ಕೂಗಾಡಿದ ಆದಿ
''ರಮಣ್ ಕಡೆಯಿಂದ ಮೋಸ ಆಗಿದೆ. ರಾಧಾ ಜೀವನ ನಾಶ ಆಗಿದೆ'' ಎಂಬ ಕಾರಣಕ್ಕೆ ಆದಿ ಕೂಗಾಡಿದರು. ರಮಣ್ ಹೆಂಡತಿ ಅಲ್ಲದ ರಾಧಾಳನ್ನ ವಾಪಸ್ ಕರೆದುಕೊಂಡು ಹೋಗಲು ಆದಿ ಮುಂದಾದಾಗ ಇರುವ ಸತ್ಯವನ್ನೆಲ್ಲ ರಮಣ್ ಮನೆಯವರ ಮುಂದೆ ಬಿಚ್ಚಿಟ್ಟರು.

ಕೈಗೆ ಉಂಗುರ ತೊಡಿಸಿದ ರಮಣ್
ಮನೆಯವರ ಮುಂದೆಯೇ ರಾಧಾಗೆ ರಮಣ್ ಪ್ರಪೋಸ್ ಮಾಡಿದರು. ರಾಧಾ ಕೈಬೆರಳಿಗೆ ರಮಣ್ ಉಂಗುರ ತೊಡಿಸಿದರು. ಕಾಂಟ್ರಾಕ್ಟ್ ಪೇಪರ್ ನ ಹರಿದು ಹಾಕಿ ಇನ್ಮೇಲೆ ಗಂಡ-ಹೆಂಡತಿ ಹಾಗೇ ಇರುವುದಾಗಿ ಮನೆಯವರಿಗೆ ರಾಧಾ-ರಮಣ್ ತಿಳಿಸಿದರು.

ಶಾಕ್ ಆದ ದೀಪಿಕಾ
ದೀಪಿಕಾ ಅಂದುಕೊಂಡಿದ್ದೇ ಒಂದು. ಆದ್ರೆ ಆಗಿದ್ದೇ ಇನ್ನೊಂದು. ರಾಧಾ-ರಮಣ್ ನ ಬೇರೆ ಬೇರೆ ಮಾಡಲು ಮುಂದಾದ ದೀಪಿಕಾ ಪ್ಲಾನ್ ಸದ್ಯ ಫ್ಲಾಪ್ ಆಗಿದೆ. ಒಂದಾದ ರಾಧಾ-ರಮಣ್ ನೋಡಿ ದೀಪಿಕಾ ಕಣ್ಣೀರಿಟ್ಟಿದ್ದಾಳೆ. ಇದೇ ಸಿಟ್ಟಿನಲ್ಲಿ ಆಕೆ ಇನ್ನೇನು ಮಾಡ್ತಾಳೋ.?


Click it and Unblock the Notifications











