For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪ್ಲಾನ್ ತಲೆಕೆಳಗು: ಪ್ರಕೃತಿ ಆಸ್ಪತ್ರೆಯಲ್ಲಿ ಏನಾಗುವುದೋ ಇಂದು.?

  By Harshitha
  |
  ಆಸ್ಪತ್ರೆಯಲ್ಲಿರೋ ರಮಣ್ ತಂಗಿಗೆ ಇದೆಂಥಾ ಪರಿಸ್ಥಿತಿ ಬಂತಪ್ಪಾ| FIlmibeat Kananda

  'ಅವನಿ'ಗೆ ಆಪರೇಶನ್ ಮಾಡಿಸಿ, ರಮಣ್ ಕೈಗೆ ಒಪ್ಪಿಸಿದರೆ... ರಮಣ್ ತನಗೆ ಒಲಿಯುತ್ತಾನೆ ಅನ್ನೋದು ದೀಪಿಕಾ ಮಾಸ್ಟರ್ ಪ್ಲಾನ್. ಹೀಗಾಗಿ, ಮನೆಯಲ್ಲಿ ಯಾರಿಗೂ ಹೇಳದೆ, ತಾಯಿ ಸಿತಾರ ದೇವಿಗೂ ಅನುಮಾನ ಬಾರದಂತೆ 'ಅವನಿ'ಗೆ ಆಪರೇಶನ್ ಮಾಡಿಸುತ್ತಿದ್ದಾಳೆ ದೀಪಿಕಾ.

  ಆದ್ರೀಗ, 'ಅವನಿ' ಪ್ರಕೃತಿ ಆಸ್ಪತ್ರೆಯಲ್ಲಿರುವ ಸತ್ಯ ರಾಧಾ ಟೀಚರ್ ಗೆ ಗೊತ್ತಾಗಿದೆ. ಕೂಡಲೆ ಮನೆಗೆ ಬಂದ ರಾಧಾ ಟೀಚರ್ ಎಲ್ಲರಿಗೂ ವಿಷಯ ತಲುಪಿಸಿದ್ದೂ ಆಗಿದೆ. ರಮಣ್ ಗೂ ಕೂಡ.! ಅಂದ್ಮೇಲೆ, ಇನ್ಮುಂದೆ ದೀಪಿಕಾ ಪ್ಲಾನ್ ವರ್ಕೌಟ್ ಆಗುವುದು ಕಷ್ಟ ಸಾಧ್ಯ.

  'ಅವನಿ' ಮ್ಯಾಟರ್ ಗೊತ್ತಾದ್ಮೇಲೆ, ರಾಧಾ-ರಮಣ್ ಸೇರಿದಂತೆ ಎಲ್ಲರೂ ಪ್ರಕೃತಿ ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ. ಪ್ರಕೃತಿ ಆಸ್ಪತ್ರೆಯಲ್ಲಿ ಅಪಾಯ ಕಾದಿದೆ, ಅಲ್ಲಿಗೆ ಹೋಗಬೇಡಿ ಅಂತ ದಿನಕರ್ ಎಷ್ಟೇ ಹೇಳಿದರೂ, ಅದನ್ನ ಕೇಳಲು ಯಾರೂ ತಯಾರಿರಲಿಲ್ಲ.

  ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!

  ಇತ್ತ ಪ್ರಕೃತಿ ಆಸ್ಪತ್ರೆಯಲ್ಲಿ ಸಿತಾರ ದೇವಿ ಠಿಕಾಣಿ ಹೂಡಿದ್ದಾರೆ. ಅಮ್ಮನಿಗೆ ಗೊತ್ತಾಗದ ಹಾಗೆ ದೀಪಿಕಾ ಕೂಡ ಆಸ್ಪತ್ರೆಯಲ್ಲೇ ಕದ್ದು ಮುಚ್ಚಿ ಓಡಾಡುತ್ತಿದ್ದಾಳೆ. ಹೀಗಿರುವಾಗ, ಕುಟುಂಬದವರೆಲ್ಲರೂ ಪ್ರಕೃತಿ ಆಸ್ಪತ್ರೆಗೆ ಹೊರಟಿದ್ದಾರೆ. ಇಂದು ಹಾಸ್ಪಿಟಲ್ ನಲ್ಲಿ ಏನಾಗುವುದೋ.? ಎಲ್ಲರೂ ಮುಖಾಮುಖಿ ಆದರೆ ಏನು ಗತಿ.?

  ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!

  ಮಾನಸಿಕವಾಗಿ ಬಳಲುತ್ತಿರುವ 'ಅವನಿ' ಆಪರೇಶನ್ ನಿಂದ ಗುಣಮುಖಳಾಗುತ್ತಾಳಾ.? ನಿರ್ದೇಶಕರು ಇವತ್ತಿನ ಸಂಚಿಕೆಯಲ್ಲಿ ಇನ್ನೇನ್ ತಿರುವು ಕೊಡ್ತಾರೋ.?

  English summary
  Radha Ramana serial written update: Radha and Raman heads towards Prakruthi Hospital to see Avani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X