ಅಂತೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಯಿತು.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಕಡೆಗೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಗಿದೆ.
ರಾಧಾ ಮೇಲೆ ಇಟ್ಟಿರುವ ಪ್ರೀತಿಯನ್ನ ಮನಸ್ಸು ಬಿಚ್ಚಿ ಹೇಳಲು ಸಾಧ್ಯ ಆಗದೆ, ಆನಿವರ್ಸರಿ ದಿನ ರಮಣ್ ಒಂದು ಪತ್ರ ಬರೆದಿದ್ದರು. ಆ ಪತ್ರ ರಾಧಾ ಕೈಸೇರದೆ, ದೀಪಿಕಾ ಪಾಲಾಯಿತು.
ಮೊದಲೇ ದೀಪಿಕಾಗೂ ರಾಧಾಗೂ ಆಗ್ಬರಲ್ಲ. ರಾಧಾ-ರಮಣ್ ನ ದೂರ ಮಾಡಬೇಕು ಅಂತ ಸ್ಕೆಚ್ ಹಾಕುತ್ತಲೇ ಇರುವ ದೀಪಿಕಾ, ರಮಣ್ ಹೆಸರಲ್ಲಿ ಬೇರೆ ಪತ್ರ ಬರೆದಳು. ಅದನ್ನ ಓದಿ ರಾಧಾ ಆಘಾತಗೊಂಡರು.
''ರಮಣ್ ಗೆ ನನ್ನ ಮೇಲೆ ಪ್ರೀತಿ ಇಲ್ಲ. ಈ ಮನೆಯಲ್ಲಿ ಇರುವ ಹಕ್ಕು ನನಗೆ ಇಲ್ಲ'' ಎಂದು ಗಣೇಶ ಹಬ್ಬದ ನೆಪ ಇಟ್ಟುಕೊಂಡು ರಾಧಾ ತವರು ಮನೆ ಸೇರಿದ್ದಾಳೆ. ದೆಹಲಿಗೆ ಹೋದಾಗಿನಿಂದಲೂ, ರಮಣ್ ಒಮ್ಮೆ ಕೂಡ ಫೋನ್ ಮಾಡಿಲ್ಲ ಎಂಬ ಚಿಂತೆ ಬೇರೆ ಆಕೆಯನ್ನ ಕಾಡುತ್ತಿದೆ. ಅಷ್ಟಕ್ಕೂ, ಇದಕ್ಕೆ ಕಾರಣ ಏನು ಎಂಬ ಸತ್ಯ ರಾಧಾ ಅರಿವಿಗೆ ಬಂದಿದೆ. ಮುಂದೆ ಓದಿರಿ...

ರಮಣ್ ನಂಬರ್ ಬ್ಲಾಕ್ ಆಗಿದೆ
ಮೀಟಿಂಗ್ ಇರುವ ಕಾರಣಕ್ಕೆ ಇದ್ದಕ್ಕಿದ್ದ ಹಾಗೆ ರಮಣ್ ದೆಹಲಿಗೆ ಹೊರಟರು. ದೆಹಲಿಗೆ ಹೊರಡುವ ಮುನ್ನ ರಾಧಾಗೆ ಒಂದು ಮೆಸೇಜ್ ಕಳುಹಿಸಿದ್ದರು. ಆ ಮೆಸೇಜ್ ನ ರಾಧಾ ನೋಡುವ ಮುನ್ನ ದೀಪಿಕಾ ನೋಡಿಬಿಟ್ಟಳು. ಪರಿಣಾಮ, ರಾಧಾ ಫೋನ್ ನಲ್ಲಿ ರಮಣ್ ನಂಬರ್ ಬ್ಲಾಕ್ ಆಯ್ತು.

ರಾಧಾಗೆ ಈಗ ಗೊತ್ತಾಯಿತು.!
ದೆಹಲಿಗೆ ಹೋದ್ಮೇಲೆ, ರಮಣ್ ಫೋನ್ ಮಾಡಿಲ್ಲ ಎಂದು ಕೊರಗುತ್ತಿದ್ದ ರಾಧಾಗೆ ತಮ್ಮ ಫೋನ್ ನಲ್ಲಿ ರಮಣ್ ನಂಬರ್ ಬ್ಲಾಕ್ ಆಗಿರುವ ಸಂಗತಿ ಇದೀಗ ಗೊತ್ತಾಗಿದೆ. ಆದ್ರೆ, ರಮಣ್ ನಂಬರ್ ನ ಬ್ಲಾಕ್ ಮಾಡಿದ್ದು ಯಾರು ಅನ್ನೋದು ಆಕೆಗಿನ್ನೂ ತಿಳಿದು ಬಂದಿಲ್ಲ.

ಯಾರೋ ಮಾಡಿರುವ ಪ್ಲಾನ್ ಇದು.!
ರಾಧಾ-ರಮಣ್ ನ ದೂರ ಮಾಡೋಕೆ ಯಾರೋ ಹೀಗೆಲ್ಲ ಮಾಡುತ್ತಿದ್ದಾರೆ ಎಂಬ ಅನುಮಾನ ರಾಧಾ ತಂದೆಗೆ ಬಂದಿದೆ. ಈಗಲಾದರೂ, ರಮಣ್ ಪ್ರೀತಿ ರಾಧಾಗೆ ಅರ್ಥ ಆದರೆ ಖುಷಿ ವೀಕ್ಷಕರಿಗೆ.!

ಮನೆಗೆ ವಾಪಸ್ ಬರ್ತಿದ್ದಾಳೆ ರಾಣಿ
ಊರು ಬಿಟ್ಟು ಓಡಿ ಹೋಗದೆ, ಮನೆಯಲ್ಲೇ ಇದ್ದು 'ಅವನಿ'ಯಾಗಿ ಸಿತಾರ ದೇವಿಯನ್ನ ಬಗ್ಗುಬಡಿಯಲು ರಾಣಿಗೆ ಮಾದ ಸೂಚನೆ ನೀಡಿದ್ದಾನೆ. ಮಾದನ ಅಣತಿಯಂತೆ ಮತ್ತೆ ರಾಣಿ ಮನೆಗೆ ಬರ್ತಾಳೆ. ರಾಣಿ ಹಾಗೆ ರಾಧಾ ಯಾವಾಗ ರಮಣ್ ಮನೆ ಕಡೆ ಮುಖ ಮಾಡ್ತಾರೋ.?


Click it and Unblock the Notifications