ಫ್ಲಾಪ್ ಆಯ್ತು ಸಿತಾರ ದೇವಿ ಪ್ಲಾನ್: ಪೊಲೀಸ್ ಸ್ಟೇಷನ್ ನಲ್ಲಿ ರಮಣ್.!

By Harshitha

Recommended Video

ರಾಧಾ ರಮಣ ನೋಡಿ ರೊಚ್ಚಿಗೆದ್ದ ನೆಟ್ಟಿಗರು | Filmibeat Kannada

ಇಷ್ಟು ದಿನಗಳಲ್ಲಿ ಇದೇ ಮೊದಲ ಬಾರಿಗೆ ಸಿತಾರ ದೇವಿ ಪ್ಲಾನ್ ಫ್ಲಾಪ್ ಆಗಿದೆ. ರಾಣಿ ನಾಟಕ ಡಮ್ಮಿ ಆಗಿದೆ. 'ಮುಖ್ಯವಾದ ಕೆಲಸ'ದ ಕಡೆಗೆ ರಮಣ್ ಗಮನ ಕೊಟ್ಟಿದ್ದಾರೆ. ಅನ್ವಿತಾ ಹಾಗೂ ರಾಧಾ ಸ್ವಲ್ಪ ತಲೆ ಓಡಿಸಿದ್ದಾರೆ.

ಇಲ್ಲಿಯವರೆಗೂ ಆಮೆ ಗತಿಯಲ್ಲಿ ಸಾಗುತ್ತಾ ಬಂದ 'ರಾಧಾ ರಮಣ' ಧಾರಾವಾಹಿಗೆ ಇದೀಗ ದೊಡ್ಡ ತಿರುವು ಸಿಗುವ ಸಾಧ್ಯತೆ ಇದೆ. ರಮಣ್ ಗೆ ಸತ್ಯ ಗೊತ್ತಾಗಬೇಕು ಅಂದ್ರೆ ಮಾದ ಒಬ್ಬನೇ ಬಾಯಿ ಬಿಡಬೇಕು.

ಮಾದ ಸತ್ಯ ಹೇಳುವ ಮನಸ್ಸು ಮಾಡಿದ್ದಾನೆ. ''ರಮಣ್ ಮುಂದೆಯೇ ಸತ್ಯ ಹೇಳುವೆ'' ಎಂದು ಮಾದ ಪೊಲೀಸರಿಗೆ ತಿಳಿಸಿದ್ದಾನೆ. ಕಡೆಗೂ ಪೊಲೀಸ್ ಸ್ಟೇಷನ್ ಒಳಗೆ ರಮಣ್ ಹೋಗಿದ್ದಾರೆ.

ಈಗಲಾದರೂ ಸಿತಾರ ದೇವಿ ಬಣ್ಣ ಬಯಲಾಗಲಿ ಅನ್ನೋದು ವೀಕ್ಷಕರ ಕನವರಿಕೆ. ಆದ್ರೆ, ಅದಕ್ಕೆ ನಿರ್ದೇಶಕರು ತಥಾಸ್ತು ಎನ್ನಬೇಕಲ್ವಾ.? ಇಂದು ರಮಣ್ ಗೆ ಬೇರೆ ಯಾವ ಶಾಕ್ ಕಾದಿದೆಯೋ.?

ಅಂದು ತಲೆ ಓಡಿಸಿದ ಸಿತಾರ ದೇವಿ

ಅಂದು ತಲೆ ಓಡಿಸಿದ ಸಿತಾರ ದೇವಿ

''ಮಾದನಿಂದ ಆಗುತ್ತಿರುವ ತೊಂದರೆ ತಪ್ಪಬೇಕು. ಮಾದ ಸತ್ಯ ಬಾಯಿ ಬಿಡಬಾರದು. ಎಲ್ಲರ ದಿಕ್ಕು ತಪ್ಪಿಸಬೇಕು'' ಎಂದು ಪೊಲೀಸರಿಗೆ ಬೇರೆಯವರ ಹೆಸರಿನಲ್ಲಿ ಫೋನ್ ಮಾಡಿ ಆತನ ಬಗ್ಗೆ ಸಿತಾರ ದೇವಿ ಮಾಹಿತಿ ಕೊಟ್ಟಿದ್ದರು. ಹೇಳಿ ಕೇಳಿ ಮಾದ con artist ವಂಚಕ. ಹೀಗಾಗಿ, ಆತನನ್ನ ಬಂಧಿಸಲು ಪೊಲೀಸರು ವಿವಾಹ ವಾರ್ಷಿಕೋತ್ಸವದ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಎಂಟ್ರಿಕೊಟ್ಟರು. ಮಾದ ಪೊಲೀಸರ ಅತಿಥಿಯಾದ.

ಮಾದನ ವಿಚಾರಣೆ

ಮಾದನ ವಿಚಾರಣೆ

ಮಾದನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ''ರಮಣ್ ಮುಂದೆ ಸತ್ಯ ಹೇಳುವೆ'' ಎಂದಿದ್ದಾನೆ. ಹೀಗಾಗಿ, ಪೊಲೀಸ್ ಸ್ಟೇಷನ್ ಗೆ ಕೂಡಲೆ ಬರುವಂತೆ ರಮಣ್ ಗೆ ಪೊಲೀಸರು ಸೂಚಿಸಿದ್ದಾರೆ.

ಸಿತಾರ ದೇವಿಗೆ ಗೊತ್ತಾಯ್ತು.!

ಸಿತಾರ ದೇವಿಗೆ ಗೊತ್ತಾಯ್ತು.!

ಮಾದ ಸತ್ಯ ಹೇಳ್ತೀನಿ ಅಂತ ಹೇಳಿರೋದು ಹಾಗೂ ರಮಣ್ ಪೊಲೀಸ್ ಸ್ಟೇಷನ್ ಗೆ ಹೊರಟಿರುವ ವಿಷಯ ಸಿತಾರ ದೇವಿ ಹಾಗೂ ರಾಣಿಗೆ ಗೊತ್ತಾಯ್ತು. ಹೀಗಾಗಿ, ಮನೆಯಲ್ಲಿ ಹೊಸ ನಾಟಕ ನಡೆಯಿತು.

ನಾಟಕ ಮಾಡಿದ ರಾಣಿ

ನಾಟಕ ಮಾಡಿದ ರಾಣಿ

ಉಸಿರಾಟದ ಸಮಸ್ಯೆ ಎದುರಾದ ಹಾಗೆ ಅವನಿ (ರಾಣಿ) ನಟಿಸಿದಳು. ಕೂಡಲೆ ವಾಪಸ್ ಬರುವಂತೆ ರಮಣ್ ಗೆ ಸಿತಾರ ದೇವಿ ಕರೆ ಮಾಡಿದರು. ಅಲ್ಲಿಗೆ, ಬೀಸುವ ದೊಣ್ಣೆಯಿಂದ ಪಾರಾದೆ ಅಂತ ಸಿತಾರ ದೇವಿ ಖುಷಿ ಪಡುವಷ್ಟರಲ್ಲಿ ಮತ್ತೊಂದು ಶಾಕ್ ಕಾದಿತ್ತು.

ಪೊಲೀಸ್ ಸ್ಟೇಷನ್ ಗೆ ರಮಣ್ ಎಂಟ್ರಿ

ಪೊಲೀಸ್ ಸ್ಟೇಷನ್ ಗೆ ರಮಣ್ ಎಂಟ್ರಿ

ಪೊಲೀಸ್ ಸ್ಟೇಷನ್ ಗೆ ಸಿತಾರ ದೇವಿ ರೀಚ್ ಆಗುವ ಹೊತ್ತಿಗಾಗಲೇ ರಮಣ್ ಅಲ್ಲಿದ್ದರು. ಇನ್ನೇನು ಪೊಲೀಸ್ ಸ್ಟೇಷನ್ ಒಳಗೆ ರಮಣ್ ಹೋಗಬೇಕು ಅಲ್ಲಿಗೆ ಸಂಚಿಕೆ ಮುಗಿದಿದೆ. ರಮಣ್ ಮುಂದೆ ಮಾದ ಸತ್ಯ ಹೇಳುವಷ್ಟರಲ್ಲಿ ಇನ್ನೇನ್ ತಿರುವು ಕೊಡ್ತಾರೋ, ಆ ನಿರ್ದೇಶಕರು.!

More from Filmibeat

English summary
Radha Ramana serial written update: Raman enters police station to hear Madha's confession.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X