ಈಗಲಾದರೂ ಕಳ್ಳ ಮಾದ, ಕಳ್ಳಿ ರಾಣಿ ಸಿಕ್ಕಿ ಬೀಳ್ತಾರಾ.?

'ಅವನಿ' ವೇಷ ಧರಿಸಿ ರಮಣ್ ಮನೆ ಸೇರಿರುವ ಕಳ್ಳಿ ರಾಣಿ ಮತ್ತು ಆಕೆಯ ಪ್ರಿಯತಮ ಕಳ್ಳ ಮಾದ ಈಗಾಗಲೇ ಹಲವು ಬಾರಿ ರಾಧಾ-ರಮಣ್ ಮುಂದೆ ಸಿಕ್ಕಿ ಬಿದ್ದಿದ್ದಾರೆ. ಆದ್ರೆ, ಒಮ್ಮೆಯೂ ರಾಣಿ-ಮಾದನ ಅಸಲಿಯತ್ತು ಬಯಲಾಗಿಲ್ಲ.

ಪ್ರತಿ ಬಾರಿ ಒಂದಲ್ಲಾ ಒಂದು ಡ್ರಾಮಾ ಮಾಡಿ ರಾಣಿ-ಮಾದ ಎಸ್ಕೇಪ್ ಆಗಿದ್ದಾರೆ. ಈ ಬಾರಿಯೂ ಇಂಥದ್ದೇ ಟ್ವಿಸ್ಟು 'ರಾಧಾ ರಮಣ' ಧಾರಾವಾಹಿಯಲ್ಲಿ ಸಿಕ್ಕಿದೆ. ಎಂದಿನಂತೆ ಈ ಸಾರಿಯೂ ಟ್ವಿಸ್ಟು ಠುಸ್ ಆಗುತ್ತೋ ಅಥವಾ ಪೊಲೀಸರ ಮುಂದೆ ರಾಣಿ-ಮಾದನ ಮುಖವಾಡ ಕಳಚಿ ಬೀಳುತ್ತೋ ನೋಡಬೇಕು.

ಇಲ್ಲಿಯವರೆಗೂ ದೀಪಿಕಾ ಮಾಡಿರುವ ಯಾವುದೇ ಪ್ಲಾನ್ ಸಕ್ಸಸ್ ಆಗಿಲ್ಲ. ಈಗ ದೀಪಿಕಾ ಪ್ಲಾನ್ ಫ್ಲಾಪ್ ಅಗಿ ರಾಣಿ ಮತ್ತು ಮಾದ ಕಂಬಿ ಏಣಿಸುವ ಹಾಗಾದರೆ, 'ರಾಧಾ ರಮಣ' ಧಾರಾವಾಹಿಯನ್ನ ಇಷ್ಟು ದಿನ ನೋಡಿರುವ ವೀಕ್ಷಕರಿಗೆ ಖುಷಿ ಆಗುವುದರಲ್ಲಿ ಡೌಟ್ ಇಲ್ಲ. ಮುಂದೆ ಓದಿರಿ...

ಎಲ್ಲಾ ದೀಪಿಕಾ ಪ್ಲಾನ್.!

ಎಲ್ಲಾ ದೀಪಿಕಾ ಪ್ಲಾನ್.!

ರಾಧಾ ಮತ್ತು ರಮಣ್ ರನ್ನ ದೂರ ಮಾಡಬೇಕು ಅಂತ ಸ್ಕೆಚ್ ಹಾಕಿರುವ ದೀಪಿಕಾ, ರಾಣಿಯನ್ನ ರೆಸಾರ್ಟ್ ಒಂದರಲ್ಲಿ ಇರಿಸಿದ್ದಾಳೆ. ದಿಢೀರ್ ಅಂತ ಮನೆಯಿಂದ ಅವನಿ (ರಾಣಿ) ಕಾಣೆಯಾಗಿರುವುದಕ್ಕೆ ಎಲ್ಲರೂ ಗಾಬರಿಗೊಂಡಿದ್ದಾರೆ. ಅವನಿ (ರಾಣಿ) ಮನೆ ಬಿಟ್ಟು ಹೋಗಲು ರಾಧಾ ಕಾರಣ ಅಂತ ರಂಪ ಮಾಡಲಾಗಿದೆ.

ಪೊಲೀಸ್ ಕಂಪ್ಲೇಂಟ್ ಕೊಟ್ಟ ರಮಣ್

ಪೊಲೀಸ್ ಕಂಪ್ಲೇಂಟ್ ಕೊಟ್ಟ ರಮಣ್

ಇದ್ದಕ್ಕಿದ್ದಂತೆ ಅವನಿ (ರಾಣಿ) ಮನೆ ಬಿಟ್ಟು ಹೋದ್ಮೇಲೆ, ಬೇರೆ ದಿಕ್ಕು ತೋಚದೆ ರಮಣ್ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಅವನಿ (ರಾಣಿ) ಫೋಟೋ ಹಿಡಿದು ಹುಡುಕುತ್ತಿರುವ ಪೊಲೀಸರು ನೇರವಾಗಿ ರೆಸಾರ್ಟ್ ನಲ್ಲಿ ಲ್ಯಾಂಡ್ ಆಗಿದ್ದಾರೆ.

ರೆಸಾರ್ಟ್ ನಲ್ಲಿ ರಾಣಿ ಜೊತೆ ಮಾದ.!

ರೆಸಾರ್ಟ್ ನಲ್ಲಿ ರಾಣಿ ಜೊತೆ ಮಾದ.!

ಬಿಟ್ಟಿ ದುಡ್ಡಲ್ಲಿ ಚಿಂದಿ ಉಡಾಯಿಸಲು ರಾಣಿ ಜೊತೆ ರೆಸಾರ್ಟ್ ನಲ್ಲಿ ಮಾದ ಕೂಡ ಪ್ರತ್ಯಕ್ಷವಾಗಿದ್ದಾನೆ. ಇನ್ನೇನು ರೆಸಾರ್ಟ್ ನಿಂದ ಇಬ್ಬರೂ ಎಸ್ಕೇಪ್ ಆಗಬೇಕು, ಅಷ್ಟರಲ್ಲಿ ಪೊಲೀಸರು ಎಂಟ್ರಿಕೊಟ್ಟಿದ್ದಾರೆ. ಕಳ್ಳ-ಕಳ್ಳಿ ಈಗಲಾದರೂ ಸಿಕ್ಕಿ ಬೀಳ್ತಾರಾ.?

ಪೊಲೀಸ್ ಸ್ಟೇಷನ್ ನಲ್ಲಿ ರಮಣ್ ಅಂಡ್ ಫ್ಯಾಮಿಲಿ

ಪೊಲೀಸ್ ಸ್ಟೇಷನ್ ನಲ್ಲಿ ರಮಣ್ ಅಂಡ್ ಫ್ಯಾಮಿಲಿ

ಅವನಿ (ರಾಣಿ) ಬಗ್ಗೆ ಕ್ಲೂ ಸಿಕ್ಕ ಕೂಡಲೆ ರಮಣ್ ಅಂಡ್ ಫ್ಯಾಮಿಲಿ ಪೊಲೀಸ್ ಸ್ಟೇಷನ್ ಕಡೆಗೆ ಹೊರಟಿದ್ದಾರೆ. ಅತ್ತ ಪೊಲೀಸರ ಮುಂದೆ ರಾಣಿ-ಮಾದ ಸಿಕ್ಕಿಬಿದ್ದಿದ್ದಾರೆ. ಇನ್ನಾದರೂ, ರಾಣಿ-ಮಾದ ಬಂಡವಾಳ ಬಯಲಾಗುತ್ತಾ.? ರಮಣ್ ಗೆ ಸತ್ಯ ತಿಳಿಯುತ್ತಾ.? ನೋಡಬೇಕು.

More from Filmibeat

English summary
Radha Ramana serial written update: Rani and Madha gets caught in Resort.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X