ರಾಣಿ ಪ್ಲಾನ್ ನಡೆಯಲಿಲ್ಲ: ವಾಪಸ್ ಮನೆಗೆ ಬಂದ್ಬಿಟ್ರಲ್ಲ.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಇನ್ನಾದರೂ ಸ್ವಲ್ಪ ರೋಚಕತೆ ಬರುತ್ತೆ ಅಂತ ವೀಕ್ಷಕರು ಭಾವಿಸಿದ್ದರು. ಆದ್ರೆ, ವೀಕ್ಷಕರ ಇಚ್ಛೆಗೆ ನಿರ್ದೇಶಕರು ಮಾತ್ರ ಬಕೆಟ್ ಗಟ್ಟಲೆ ತಣ್ಣೀರು ಎರಚಿದರು.

''ರಾಣಿ ಎಸ್ಕೇಪ್ ಆದರೆ ಸಿತಾರ ದೇವಿ ಸಂಕಷ್ಟಕ್ಕೆ ಸಿಲುಕುತ್ತಾಳೆ.. ನಿಜವಾದ ಅವನಿ ಮನೆಗೆ ಬರಲು ದಾರಿ ಆಗುತ್ತೆ'' ಅಂತ ವೀಕ್ಷಕರು ಕಾಯುತ್ತಿದ್ದರು. ಆದ್ರೆ, ಧಾರಾವಾಹಿಯಲ್ಲಿ ಆಗಿದ್ದೇ ಬೇರೆ.!

ಯಾವುದು ಆಗಬಾರದು ಅಂತ ವೀಕ್ಷಕರು ಅಂದುಕೊಂಡಿದ್ದರೋ, ಅದು ಆಗೇ ಹೋಯ್ತು. ಮತ್ತೊಂದು ಬಾರಿ ಗೆಲುವು ಸಿತಾರ ದೇವಿ ಕಡೆ ವಾಲಿತು. ಮನೆಯಿಂದ ಆಚೆ ಕಾಲಿಟ್ಟ ರಾಣಿ, ಸಿತಾರ ದೇವಿ ಕೈಗೆ ಸಿಕ್ಕಿಬಿದ್ದಳು. ಬೇರೆ ದಾರಿ ಇಲ್ಲದೆ ಸಿತಾರ ದೇವಿ ಬ್ಲಾಕ್ ಮೇಲ್ ಗೆ ಬೆದರಿ ಮರಳಿ ಮನೆಗೆ ಬಂದಿದ್ದಾಳೆ ರಾಣಿ.! ಮುಂದೆ ಓದಿರಿ...

ರಾಣಿಗೆ ಬೇರೆ ದಾರಿ ಇರಲಿಲ್ಲ.!

ರಾಣಿಗೆ ಬೇರೆ ದಾರಿ ಇರಲಿಲ್ಲ.!

ಆಸ್ತಿ ಪತ್ರ ಹಾಗೂ ಒಡವೆ ಸಮೇತ ಇನ್ನೇನು ರಾಣಿ ಮತ್ತು ಮಾದ ಎಸ್ಕೇಪ್ ಆಗಬೇಕಿತ್ತು. ಅಷ್ಟರಲ್ಲಿ ಸಿತಾರ ದೇವಿ ಚೇಲ ಮಂಜ ಹಾಜರ್ ಆದ. ರಾಣಿ ಮತ್ತು ಮಾದನನ್ನ ಲಾಕ್ ಮಾಡಿಕೊಂಡ. ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದ ರಾಣಿಗೆ ಮೊದಲ ಏಟು ಬಿದ್ದಿದ್ದು ಇಲ್ಲೇ.!

ಸಿತಾರ ದೇವಿ ಪ್ರತ್ಯಕ್ಷ

ಸಿತಾರ ದೇವಿ ಪ್ರತ್ಯಕ್ಷ

ಹಾಗೂ ಹೀಗೂ ಮಂಜನಿಂದ ತಪ್ಪಿಸಿಕೊಳ್ಳಲು ರಾಣಿ-ಮಾದ ಪ್ರಯತ್ನ ಪಟ್ಟರು. ಆದ್ರೆ, ಅದೂ ಕೂಡ ಸಫಲ ಆಗಲಿಲ್ಲ. ಯಾಕಂದ್ರೆ, ಅಲ್ಲಾಗಲೇ ಸಿತಾರ ದೇವಿ ಪ್ರತ್ಯಕ್ಷವಾಗಿದ್ದರು.

ಸಿತಾರ ಕೈಯಲ್ಲಿ ಮಾದನ ಜುಟ್ಟು

ಸಿತಾರ ಕೈಯಲ್ಲಿ ಮಾದನ ಜುಟ್ಟು

ಸದ್ಯ ಸಿತಾರ ದೇವಿ ಕಪಿಮುಷ್ಟಿಯಲ್ಲಿ ಮಾದ ಸಿಕ್ಕಿಬಿದ್ದಿದ್ದಾನೆ. ಮಾದನ ಪ್ರಾಣಕ್ಕೆ ಯಾವುದೇ ಅಪಾಯ ಆಗಬಾರದು ಅಂದ್ರೆ, ಸಿತಾರ ಹಾಕಿದ ತಾಳಕ್ಕೆ ತಕ್ಕ ಹಾಗೆ ರಾಣಿ ಕುಣಿಯಬೇಕು. ಸಿತಾರ ಹೇಳಿದಕ್ಕೆಲ್ಲಾ ರಾಣಿ ತಲೆ ಆಡಿಸಲೇಬೇಕು.

ಮರಳಿ ಮನೆಗೆ ಬಂದ ರಾಣಿ

ಮರಳಿ ಮನೆಗೆ ಬಂದ ರಾಣಿ

ಮನೆಯಿಂದ ರಾಣಿ ಆಚೆ ಹೋಗಿದ್ದಕ್ಕೆ, ದಿನಕರ್ ಖುಷಿ ಆಗಿದ್ದರು. ಆದ್ರೆ, ಆ ಖುಷಿ ಹೆಚ್ಚು ಸಮಯ ಇರಲಿಲ್ಲ. ಯಾಕಂದ್ರೆ, ಸಿತಾರ ಮತ್ತು ರಾಣಿ ಮರಳಿ ಮನೆಗೆ ಬಂದು ಬಿಟ್ಟರು. ಅವನಿ (ರಾಣಿ) ಸೇಫ್ ಆಗಿ ವಾಪಸ್ ಬಂದಿದ್ದಕ್ಕೆ ಮನೆಯವರೆಗೆ ಮಾತ್ರ ಖುಷಿ ಆಯ್ತು. ವೀಕ್ಷಕರಿಗೆ ಅಲ್ಲ.!

ಮತ್ತದೇ ಕಥೆ, ಅದೇ ರಾಗ...

ಮತ್ತದೇ ಕಥೆ, ಅದೇ ರಾಗ...

ರಾಣಿ ಈಗ ಬಾಲ ಬಿಚ್ಚುವ ಹಾಗಿಲ್ಲ... ದಿನಕರ್ ತುಟಿ ಎರಡು ಮಾಡಲ್ಲ... ರಾಧಾ-ರಮಣ್ ಗೆ ಸತ್ಯ ಗೊತ್ತಾಗಲ್ಲ... ಸಿತಾರ ದೇವಿಗೆ ಆಟ ಮುಗಿಯಲ್ಲ... ಒಟ್ನಲ್ಲಿ ಇದೇ ಕಥೆ.. ಇದೇ ರಾಗ... ಇನ್ನೆಷ್ಟು ದಿನ ನಡೆಯುತ್ತೋ, ಏನೋ.?!

More from Filmibeat

English summary
Radha Ramana serial written update: Rani comes back to home with Sitara Devi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X