ರಾತ್ರೋರಾತ್ರಿ 'ಅವನಿ' ಗಾಯಬ್: ಸಿತಾರ ದೇವಿ ಕಥೆ ಫಿನಿಶ್.?

By Harshitha

Recommended Video

ಏನೇನೋ ನಡೀತಿದೆ ರಾಧಾ ರಮಣ ಧಾರಾವಾಹಿಯಲ್ಲಿ...!! | Oneindia Kannada

ಅಂತೂ ಇಂತೂ ಕಲರ್ಸ್ ಕನ್ನಡ ವಾಹಿನಿಯ 'ರಾಧಾ ರಮಣ' ಧಾರಾವಾಹಿಗೆ ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ಈ ಬಾರಿ ಆ ತಿರುವು ಡಮ್ಮಿ ಆಗಲಿಲ್ಲ ಅಂದ್ರೆ ಸಾಕು ಅನ್ನೋದು ವೀಕ್ಷಕರ ಇಚ್ಛೆ.

ಇಷ್ಟು ದಿನ ಸ್ವಂತ ಅಣ್ಣನ ಮಗಳು 'ಅವನಿ'ಗೆ ಚಿತ್ರಹಿಂಸೆ ನೀಡುತ್ತಾ, ಮನೆಯಲ್ಲಿ 'ಒಳ್ಳೆಯವಳು' ಎಂಬಂತೆ ಪೋಸ್ ಕೊಡುತ್ತಿದ್ದ ಸಿತಾರ ದೇವಿಯ ಮುಖವಾಡ ಬಟಾ ಬಯಲಾಗುವ ಸಮಯ ಹತ್ತಿರಕ್ಕೆ ಬಂದಿದೆ.

ಸಿತಾರ ದೇವಿ ಕೊಟ್ಟ ಡೀಲ್ ಮೇರೆಗೆ 'ಅವನಿ'ಯಂತೆ 'ರಮಣ್' ಮನೆಯಲ್ಲಿ ಸೇರಿಕೊಂಡು ನಾಟಕ ಆಡುತ್ತಿರುವ ರಾಣಿ ಹೈಡ್ರಾಮಾ ಇನ್ನೇನು ಕ್ಲೈಮ್ಯಾಕ್ಸ್ ಹಂತ ತಲುಪಿದೆ.

ಬೇಡ ಬೇಡ ಅಂದ್ರೂ ರಾತ್ರೋ ರಾತ್ರಿ ರಾಣಿ ಮನೆಯಿಂದ ಗಾಯಬ್ ಆಗಿದ್ದಾಳೆ. ಬಾಯ್ ಫ್ರೆಂಡ್ 'ಮಾದ'ನನ್ನು ಸಮಾಧಾನ ಮಾಡಲು ಕಿಟಕಿಗೆ ಹಗ್ಗ ಕಟ್ಟಿ ರೂಮ್ ನಿಂದ ಇಳಿದು ಹೋಗಿದ್ದ ರಾಣಿ, ರಾಧಾ ಕಣ್ಣಿಗೆ ಬಿದ್ದಿದ್ದಾಳೆ. ಇನ್ನೇನು ರಾಧಾ ಕೈಯಲ್ಲಿ ರಾಣಿ ಹೆಡ್ ಹ್ಯಾಂಡ್ ಆಗಿ ಸಿಲುಕಿಕೊಳ್ಳಬೇಕಿತ್ತು. ಆದ್ರೆ, ಅಷ್ಟರಲ್ಲಿ ಆಗಿದ್ದೇ ಬೇರೆ.! ಮುಂದೆ ಓದಿರಿ...

ಸೇಡು ತೀರಿಸಿಕೊಳ್ಳಲು ನಿಂತ ದೀಪಿಕಾ.!

ಸೇಡು ತೀರಿಸಿಕೊಳ್ಳಲು ನಿಂತ ದೀಪಿಕಾ.!

ಅದ್ಯಾವಾಗ ದೀಪಿಕಾ ಕೆನ್ನೆಗೆ ರಾಣಿ ಹೊಡೆದಳೋ, ಆಗ್ಲಿಂದ ರಾಣಿ ಹಾಗೂ ಸಿತಾರ ದೇವಿಗೆ ಬ್ಯಾಡ್ ಟೈಮ್ ಶುರು ಆಗಿದೆ. ಅವಕಾಶ ಸಿಕ್ಕಾಗೆಲ್ಲಾ ರಾಣಿಯ ನಾಟಕ ಬಯಲು ಮಾಡಲು ದೀಪಿಕಾ ಮುಂದಾಗುತ್ತಲೇ ಇದ್ದಾಳೆ. ರಾಣಿಯನ್ನ ಮನೆಯಿಂದ ಹೊರಗಟ್ಟುವವರೆಗೂ ದೀಪಿಕಾಗೆ ಸಮಾಧಾನ ಇಲ್ಲ.

ಅಮ್ಮನ ವಿರುದ್ಧವೇ ತೊಡೆ ತಟ್ಟಿ ನಿಂತ ದೀಪಿಕಾ.!

ಅಮ್ಮನ ವಿರುದ್ಧವೇ ತೊಡೆ ತಟ್ಟಿ ನಿಂತ ದೀಪಿಕಾ.!

ದೀಪಿಕಾಗೆ ರಾಣಿ ಕಪಾಳ ಮೋಕ್ಷ ಮಾಡಿದಾಗ, ತಾಯಿ ಸಿತಾರ ದೇವಿ ಮಗಳ ಪರ ವಹಿಸಲಿಲ್ಲ. ಇದೇ ನೋಡಿ ದೀಪಿಕಾ ಸಿಟ್ಟಿಗೆ ಕಾರಣವಾಗಿದ್ದು. ರಾಣಿ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿರುವ ದೀಪಿಕಾ, ತಾಯಿ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾಳೆ.

ಸಿತಾರ ಬೆದರಿಕೆಗೆ ಬಗ್ಗಲಿಲ್ಲ.!

ಸಿತಾರ ಬೆದರಿಕೆಗೆ ಬಗ್ಗಲಿಲ್ಲ.!

ರಾಣಿ ಸೇರಿದಂತೆ ಮನೆಯ ಹೆಣ್ಮಕ್ಕಳನ್ನೆಲ್ಲಾ ಪಾರ್ಕ್ ಗೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ದು ದೀಪಿಕಾ ಅನ್ನೋ ಸತ್ಯ ಸಿತಾರ ದೇವಿಗೆ ಗೊತ್ತು. ಪಾರ್ಕ್ ನಲ್ಲಿ ಮಾದ ಹಾಗೂ ರಾಣಿ ಮಾತನಾಡುತ್ತಿದ್ದನ್ನ ರಾಧಾ, ಅನ್ವಿತಾ, ಮಾನಸಿ ನೋಡುವ ಹಾಗೆ ಮಾಡಿದ್ದೂ ಇದೇ ದೀಪಿಕಾ ಅನ್ನೋದೂ ರಾಣಿಗೆ ಗೊತ್ತು. ಆಮೇಲೆ ಆದ ರಾದ್ಧಾಂತದಿಂದ ರಾಣಿ ಹಾಗೂ ಸಿತಾರ ದೇವಿ ಹೇಗೋ ಬಚಾವ್ ಆದರು. ''ಇನ್ಮುಂದೆ ದೀಪಿಕಾ ಇಂತಹ ಕೆಲಸ ಮಾಡಬಾರದು'' ಅಂತ ಸಿತಾರ ದೇವಿ ಹೆದರಿಸಲು ಹೋದರೆ, ದೀಪಿಕಾ ಬಗ್ಗಲೇ ಇಲ್ಲ. ಬದಲಾಗಿ ತಾಯಿ ವಿರುದ್ಧವೇ ತಿರುಗಿ ಬಿದ್ದಳು.!

ಯಾರಿಗೂ ಕೇರ್ ಮಾಡಲ್ಲ.!

ಯಾರಿಗೂ ಕೇರ್ ಮಾಡಲ್ಲ.!

''ರಾಣಿಯನ್ನ ಮನೆಯಿಂದ ಆಚೆ ಹಾಕುವೆ'' ಎಂದಿರುವ ದೀಪಿಕಾಗೆ ಅಮ್ಮ ಸಿತಾರ ದೇವಿಯ ಹೈಡ್ರಾಮಾ ಬಯಲಾದರೂ ಏನೂ ಚಿಂತೆ ಇಲ್ಲ. ಯಾಕಂದ್ರೆ, ದೀಪಿಕಾಗೆ ತನ್ನ ತಾಯಿಗಿಂತ ರಮಣ್ ಮುಖ್ಯ. ಹೀಗಾಗಿ, ''ರಮಣ್ ಗೆ ಹೋಗಿ ಎಲ್ಲಾ ಸತ್ಯ ಹೇಳ್ತೀನಿ. ಕನಿಷ್ಟ ನಾನು ರಮಣ್ ಗೆ ಹತ್ತಿರ ಆಗುವೆ'' ಎಂದು ಸಿತಾರ ದೇವಿಗೆ ದೀಪಿಕಾ ವಾರ್ನಿಂಗ್ ಕೊಟ್ಟಿದ್ದಾಳೆ.

ಹೇಳಿದ ಮಾತು ರಾಣಿ ಕೇಳಲಿಲ್ಲ

ಹೇಳಿದ ಮಾತು ರಾಣಿ ಕೇಳಲಿಲ್ಲ

ಪಾರ್ಕ್ ನಲ್ಲಿ ದೊಡ್ಡ ರಾದ್ಧಾಂತ ಆದ್ಮೇಲೆ, 'ಮಾದ'ನನ್ನು ಸಮಾಧಾನ ಮಾಡಲು ರಾಣಿ ಫೋನ್ ಮಾಡಿದಳು. 'ಎದುರಿಗೆ ಬಾ' ಅಂತ ಮಾದ ಹಠ ಮಾಡಿದ್ದಕ್ಕೆ, ಸಿತಾರ ದೇವಿ ಮಾತು ಮೀರಿ ಮನೆಯಿಂದ ರಾಣಿ ಎಸ್ಕೇಪ್ ಆದಳು.

ರಾಧಾ ನೋಡ್ಬಿಟ್ರು.!

ರಾಧಾ ನೋಡ್ಬಿಟ್ರು.!

ರಾತ್ರೋ ರಾತ್ರಿ ಮನೆಯಿಂದ ಅವನಿ ಹೆಸರಿನ ರಾಣಿ ಹೊರ ಹೋಗುತ್ತಿರುವುದನ್ನ ರಾಧಾ ನೋಡಿದರು. ಆಕೆಯನ್ನ ಫಾಲೋ ಮಾಡಿದರು. ಮಾದನ ಜೊತೆಗೆ ಮತ್ತೆ ಅವನಿ (ರಾಣಿ) ಇದ್ದದ್ದು ರಾಧಾ ಕಣ್ಣಿಗೆ ಬಿತ್ತು. ಇನ್ನೇನು ಹತ್ತಿರ ಹೋಗಬೇಕು ಎನ್ನುವಷ್ಟರಲ್ಲಿ ಯಾವುದೋ ಗಾಡಿ ಅಡ್ಡ ಬಂತು. ರಾಣಿ-ಮಾದ ಎಸ್ಕೇಪ್ ಆದರು.

ವಾಪಸ್ ಮನೆಗೆ ಬಂದ ರಾಧಾ

ವಾಪಸ್ ಮನೆಗೆ ಬಂದ ರಾಧಾ

''ಅವನಿ ಎಲ್ಲೂ ಹೋಗಿಲ್ಲ. ರೂಮ್ ನಲ್ಲಿ ಮಲಗಿದ್ದಾಳೆ. ಕೂಡಲೆ ಮನೆಗೆ ಬಾ'' ಅಂತ ಸಿತಾರ ದೇವಿ ಫೋನ್ ಮಾಡಿದ್ಮೇಲೆ, ರಾಧಾ ವಾಪಸ್ ಮನೆಗೆ ಬಂದರು.

ಸಿತಾರ ವರ್ಸಸ್ ದೀಪಿಕಾ

ಸಿತಾರ ವರ್ಸಸ್ ದೀಪಿಕಾ

ರಾಣಿ ಬಣ್ಣ ಬಯಲು ಮಾಡಲು ಟೊಂಕ ಕಟ್ಟಿ ನಿಂತಿರುವ ದೀಪಿಕಾಗೆ ಮನೆಯಿಂದ ರಾಣಿ ಎಸ್ಕೇಪ್ ಆಗಿರುವ ವಿಷಯ ಗೊತ್ತಾಗಿದೆ. ಇನ್ನು ದೀಪಿಕಾ ಸುಮ್ಮನೆ ಇರ್ತಾಳಾ.? ಖಂಡಿತ ಇಲ್ಲ. ತಾಯಿ ಸಿತಾರ ದೇವಿಗೆ ಟಕ್ಕರ್ ಕೊಡಲು ರೆಡಿಯಾಗಿದ್ದಾಳೆ.

ರೂಮ್ ನಲ್ಲಿ ರಾಣಿ ಇಲ್ಲ.!

ರೂಮ್ ನಲ್ಲಿ ರಾಣಿ ಇಲ್ಲ.!

ಮನೆಗೆ ರಾಧಾ ವಾಪಸ್ ಬಂದ್ಮೇಲೆ, ರೂಮ್ ನಲ್ಲಿ ರಾಣಿ ಇದ್ದಾಳೋ, ಇಲ್ವೋ ಅನ್ನೋದನ್ನ ಕನ್ಫರ್ಮ್ ಮಾಡಿಕೊಳ್ಳಬೇಕು ಅಂತ ಎಲ್ಲರನ್ನೂ 'ಅವನಿ' ರೂಮ್ ಗೆ ದೀಪಿಕಾ ಕರೆತಂದಳು. ರೂಮ್ ನಲ್ಲಿ ಬೆಡ್ ಮೇಲೆ ಅವನಿ ಇಲ್ಲ.! ಎಲ್ಲರ ಮುಖದಲ್ಲೂ ಆಘಾತ. ಮುಂದಕ್ಕೆ ಕಥೆಯಲ್ಲಿ ನಿರ್ದೇಶಕರು ತಿರುವು ಕೊಡ್ತಾರೋ, ಇಲ್ಲ ಇನ್ನಷ್ಟು ಎಳೆಯುತ್ತಾರೋ.? ಅಯ್ಯೋ... ರಮಣ...

More from Filmibeat

English summary
Radha Ramana serial written update: Rani escapes from the house. Sitara Devi in Danger.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X