'ರಾಧಾ ರಮಣ' ಧಾರಾವಾಹಿಯಲ್ಲಿ ರಾಣಿ ಅಧ್ಯಾಯ ಮುಗೀತು.?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ಕುತೂಹಲಕರ ಘಟ್ಟ ತಲುಪಿದೆ.

ಇಷ್ಟು ದಿನ 'ಅವನಿ' ಎಂಬ ಹೆಸರಿನಲ್ಲಿ ನಾಟಕ ಆಡುತ್ತಾ, ರಮಣ್ ಮನೆಯಲ್ಲಿ ಜಾಗ ಪಡೆದಿದ್ದ ರಾಣಿ ಕಥೆ ಇಲ್ಲಿಗೆ ಮುಗಿದ ಹಾಗೆ ಕಾಣುತ್ತಿದೆ. ಸಿತಾರ ದೇವಿ ಹೇಳಿದ ಹಾಗೆ ಕೇಳಿಕೊಂಡು ಇದ್ದಿದ್ದರೆ, ರಾಣಿ ಪ್ರಾಣಕ್ಕೆ ಯಾವುದೇ ತೊಂದರೆ ಆಗುತ್ತಿರಲಿಲ್ಲ.

ಆದ್ರೆ, ಮಾದನ ಮಾತನ್ನು ಕಟ್ಟಿಕೊಂಡು ಸಿತಾರ ದೇವಿ ಎದುರು ತೊಡೆ ತಟ್ಟಿದ ರಾಣಿ ಜೀವಕ್ಕೆ ಇದೀಗ ಕಂಟಕ ಎದುರಾಗಿದೆ. ರಾಣಿ ಮತ್ತು ಅವನಿ... ಈ ಎರಡು ಕ್ಯಾರೆಕ್ಟರ್ ಗಳನ್ನ ಒಟ್ಟಿಗೆ ಮುಗಿಸಲು ಸಿತಾರ ದೇವಿ ಸ್ಕೆಚ್ ಹಾಕಿದ್ದರು. ಸಿತಾರ ದೇವಿ ಪ್ಲಾನ್ ಪ್ರಕಾರ ಸದ್ಯ ಎಲ್ಲವೂ ನೆರವೇರಿದೆ. ಮುಂದೆ ಧಾರಾವಾಹಿಗೆ ಇನ್ಯಾವ ತಿರುವು ಸಿಗುತ್ತದೋ..?!

ಪ್ಲಾನ್ ಒಂದು - ರಾಣಿ ಕಿಡ್ನ್ಯಾಪ್

ಪ್ಲಾನ್ ಒಂದು - ರಾಣಿ ಕಿಡ್ನ್ಯಾಪ್

ಮನೆಯಲ್ಲಿ ತಾನೇ ಪವರ್ ಫುಲ್ ಎಂದು ಬೀಗುತ್ತಿದ್ದ ರಾಣಿಯನ್ನ ಮಟ್ಟ ಹಾಕಲು ಸಿತಾರ ದೇವಿ ಸಂಚು ರೂಪಿಸಿದ್ದರು. ಸಿತಾರ ದೇವಿ ಪ್ಲಾನ್ ಪ್ರಕಾರ, ರಾಣಿ (ಅವನಿ), ಮಾನಸಿ, ಸರಸ್ವತಿ, ದಿನಕರ್ ಮತ್ತು ಹೇಮಾ ಪಿಕ್ ನಿಕ್ ಗೆ ಹೊರಟರು. ಅಲ್ಲಿ ಪಾನಿಪೂರಿ ತಿನ್ನಲು ಮುಂದಾದ ರಾಣಿಯನ್ನ ಕಿಡ್ನ್ಯಾಪ್ ಮಾಡಲಾಯಿತು.

ಪ್ಲಾನ್ ಎರಡು - ರಾಣಿ ಕೊಲೆ

ಪ್ಲಾನ್ ಎರಡು - ರಾಣಿ ಕೊಲೆ

ಕಿಡ್ನ್ಯಾಪ್ ಆದ ರಾಣಿಯನ್ನ ಮೂಟೆಯೊಳಗೆ ಕಟ್ಟಿ, ನದಿಗೆ ಹಾಕಲಾಗಿದೆ. ರಾಣಿ ಕಿಡ್ನ್ಯಾಪ್ ಮತ್ತು ಕೊಲೆಯ ಕ್ಷಣ ಕ್ಷಣದ ಮಾಹಿತಿ ಪಡೆದ ಸಿತಾರ ದೇವಿ ಸಂಭ್ರಮಿಸಿದ್ದಾರೆ. ''ಇಲ್ಲಿಗೆ ಅವನಿ ಮತ್ತು ರಾಣಿ ಕಥೆ ಮುಗಿದ ಹಾಗೆ. ಇನ್ನೂ ನನಗೆ ಯಾವುದೇ ಭಯ ಇಲ್ಲ'' ಅಂತ ಗೆಲುವಿನ ನಗೆ ಬೀರಿದ್ದಾರೆ ಸಿತಾರ ದೇವಿ.

ಅವನಿಯನ್ನ ಹುಡುಕುವಲ್ಲಿ ಮನೆಯವರು ತಲ್ಲೀನ

ಅವನಿಯನ್ನ ಹುಡುಕುವಲ್ಲಿ ಮನೆಯವರು ತಲ್ಲೀನ

ಅತ್ತ ಅವನಿ ಎಲ್ಲೂ ಕಾಣುತ್ತಿಲ್ಲ ಅಂತ ಮಾನಸಿ, ದಿನಕರ್, ಹೇಮ ಮತ್ತು ಸರಸ್ವತಿ ಹುಡುಕಾಟದಲ್ಲಿ ತೊಡಗಿದ್ದಾರೆ. ಮಗಳು ಕಾಣೆಯಾಗಿದ್ದಾಳೆ ಅಂತ ಸರಸ್ವತಿ ಕಣ್ಣೀರು ಸುರಿಸಿದ್ದಾರೆ.

ರಾಧಾ-ರಮಣ್ ಗೆ ವಿಷಯ ಗೊತ್ತಿಲ್ಲ.!

ರಾಧಾ-ರಮಣ್ ಗೆ ವಿಷಯ ಗೊತ್ತಿಲ್ಲ.!

ಎಲ್ಲರೂ ಪಿಕ್ ನಿಕ್ ಗೆ ಹೋಗಿದ್ದರೆ, ರಾಧಾ-ರಮಣ್ ಮಾತ್ರ ಮನೆಯಲ್ಲಿ ರೋಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ. ಅವನಿ (ರಾಣಿ) ಕಾಣೆಯಾಗಿರುವ ವಿಷಯ ರಾಧಾ-ರಮಣ್ ಗೆ ಇನ್ನೂ ಗೊತ್ತಾಗಿಲ್ಲ. ಗೊತ್ತಾದರೆ ಏನಾಗುತ್ತೋ.? ರಾಣಿ ಕೊಲೆ ಕೇಸ್ ನಲ್ಲಾದರೂ ಸಿತಾರ ದೇವಿ ಸಿಕ್ಕಿ ಬೀಳ್ತಾರಾ, ನೋಡಬೇಕು.

More from Filmibeat

English summary
Radha Ramana serial written update: Rani gets Kidnapped and Killed by goons sent by Sitara Devi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X